Select Your Language

Notifications

webdunia
webdunia
webdunia
webdunia

ಯುವತಿಗೆ ಲೈಂಗಿಕ ಕಿರುಕುಳ ಪ್ರಕರಣ ಆರೋಪಿಗಳ ಅರೆಸ್ಟ್: ಇಲ್ಲಿದೆ ಸಂಪೂರ್ಣ ಡಿಟೇಲ್ಸ್

ಯುವತಿಗೆ ಲೈಂಗಿಕ ಕಿರುಕುಳ ಪ್ರಕರಣ ಆರೋಪಿಗಳ ಅರೆಸ್ಟ್: ಇಲ್ಲಿದೆ ಸಂಪೂರ್ಣ ಡಿಟೇಲ್ಸ್
ಬೆಂಗಳೂರು , ಗುರುವಾರ, 5 ಜನವರಿ 2017 (13:09 IST)
ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಗರದ ಕಮ್ಮನಹಳ್ಳಿಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
 
ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಲೆನೋ ಮತ್ತು ಅಯ್ಯಪ್ಪ ಎನ್ನುವವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಅಂದು ರಾತ್ರಿ 2.40 ರ ಸುಮಾರಿಗೆ ಅಯ್ಯಪ್ಪ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದರೆ, ಲಿನೋ ಹಿಂಬದಿಯಲ್ಲಿ ಕುಳಿತಿದ್ದನು. ಏಕಾಂಗಿಯಾಗಿ ಬರುತ್ತಿದ್ದ ಯುವತಿಯೊಬ್ಬಳನ್ನು ಅಡ್ಡಗಟ್ಟಿದ ಲಿನೋ, ಆಕೆಯನ್ನು ಅಪ್ಪಿ ಚುಂಬಿಸಿದ್ದಲ್ಲದೇ ಆಕೆಯನ್ನು ಅಪಹರಿಸುವ ಪ್ರಯತ್ನ ಮಾಡಿದ್ದನು. ವಾಹನದ ಮೇಲೆ ಕುಳಿತಿದ್ದ ಅಯ್ಯಪ್ಪ ಕೂಡಾ ಆಕೆಯನ್ನು ಅಪಹರಿಸುವ ಪ್ರಯ.ತ್ನಕ್ಕೆ ಸಹಕರಿಸಿದ್ದನು ಎನ್ನಲಾಗಿದೆ.  
 
ಮಧ್ಯಮವರ್ಗದವರೇ ಹೆಚ್ಚಾಗಿ ವಾಸಿಸುವ ಕಮ್ಮನಹಳ್ಳಿಯಲ್ಲಿ, ಹೆಚ್ಚಿನವರು ವಲಸಿಗರಾಗಿದ್ದಾರೆ. ಜನೆವರಿ 1 ರಂದು ರಾತ್ರಿ ಸುಮಾರು 2.40 ನಿಮಿಷಕ್ಕೆ ಯುವತಿಗೆ ಕಿರುಕುಳ ನೀಡಿದ ಘಟನೆ ರಾಷ್ಟ್ರಮಟ್ಟದಲ್ಲಿ ವರದಿಯಾಗಿ ಬೆಂಗಳೂರಿಗೆ ಕಳಂಕ ತರುವಂತಹದಾಗಿತ್ತು.  
 
ಸಿಸಿಟಿವಿ ಆಧಾರದ ಮೇಲೆ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇಬ್ಬರು ಆರೋಪಿಗಳು ತಮ್ಮ ಹೊಂಡಾ ಆ್ಯಕ್ಟಿವ್ ದ್ವಿಚಕ್ರ ವಾಹನದ ಮೇಲೆ ಬಂದು ರಾತ್ರಿ ನಡೆದು ಬರುತ್ತಿದ್ದ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದರು. ಆರೋಪಿಗಳ ಕೃತ್ಯ ಸಂಪೂರ್ಣವಾಗಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. 
 
ಮಹಿಳೆಯರಿಗೆ ಬೆಂಗಳೂರು ಸೇಫ್ ಅಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಬೆನ್ನಲ್ಲೆ ನಡುರಸ್ತೆಯಲ್ಲಿ ಯುವತಿಯನ್ನು ಅಡ್ಡಗಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ ಹೇಯ ಕೃತ್ಯ ರಾಜಧಾನಿಯ ಕಮ್ಮನಹಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
 
ಆಟೋದಿಂದ ಇಳಿದು ಮನೆಗೆ ತೆರಳುತಿದ್ದ ಯುವತಿಯನ್ನು ಅಡ್ಡಗಟ್ಟಿದ ಇಬ್ಬರು ಕಾಮುಕರು, ನಡುರಸ್ತೆಯಲ್ಲಿಯೇ ಯುವತಿಯನ್ನು ಎಳೆದಾಡಿ ಅಟ್ಟಹಾಸ ಮೆರೆದಿದ್ದಾರೆ. ಈ ದೃಶ್ಯಾವಳಿಗಳು ರಸ್ತೆ ಬದಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.  
 
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಎಂಜಿ ರಸ್ತೆಯಲ್ಲಿ ನೆರೆದಿದ್ದ ಮಹಿಳೆಯರನ್ನು ಲೈಂಗಿಕವಾಗಿ ಹಿಂಸಿಸಿದ್ದರು. ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಭದ್ರತೆಗೆಂದು ಸಾವಿರಾರು ಪೊಲೀಸರ ನಿಯೋಜನೆಗೊಂಡಿದ್ದರಾದರೂ ಕಿಡಿಗೇಡಿಗಳನ್ನು ನಿಯಂತ್ರಿಸಲು ವಿಫಲರಾಗಿದ್ದರು. ಈ ಘಟನೆ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

2000 ನೋಟುಗಳ ಮೇಲಿದ್ದ ಮಹಾತ್ಮ ಗಾಂಧಿ ಚಿತ್ರ ಮಾಯ...!