Publish Date: Thu, 09 Apr 2026 (11:35 IST)
Updated Date: Thu, 09 Apr 2026 (11:39 IST)
ಬೆಂಗಳೂರು: ಆಟವಾಡುತ್ತಿದ್ದ ಮಗು ಮೂರನೆಯ ಮಹಡಿಯ ತನ್ನ ಮನೆಯ ಬಾಲ್ಕನಿಯಿಂದ ನೆಲಕ್ಕೆ ಬಿದ್ದ ಭೀಕರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಹುಮಹಡಿ ಕಟ್ಟಡಗಳಲ್ಲಿ ಮನೆ ಮಾಡಿಕೊಂಡಿದ್ದರೆ ಚಿಕ್ಕ ಮಕ್ಕಳನ್ನು ಮೈ ಎಲ್ಲಾ ಕಣ್ಣಾಗಿಸಿ ನೋಡಿಕೊಳ್ಳಬೇಕು. ಇಲ್ಲದೇ ಹೋದರೆ ಯಾವ ಕ್ಷಣದಲ್ಲಿ ಏನಾಗುತ್ತದೆ ಎಂದು ಹೇಳಲೂ ಸಾಧ್ಯವಿಲ್ಲ. ಅಂತಹದ್ದೇ ಒಂದು ಘಟನೆ ಬೆಂಗಳೂರಿನ ನಾಯಂಡಹಳ್ಳಿಯ ಅಪಾರ್ಟ್ ಮೆಂಟ್ ಒಂದರಲ್ಲಿ ನಡೆದಿದೆ.
ಬಹುಮಹಡಿ ಅಪಾರ್ಟ್ ಮೆಂಟ್ ನ ಮೂರನೇ ಮಹಡಿಯಲ್ಲಿ ಮಗುವಿನ ಮನೆಯಿತ್ತು. ಇಲ್ಲಿ ಬಾಲ್ಕನಿ ಬಳಿ ಮಗು ಆಟವಾಡಿಕೊಂಡಿತ್ತು. ಅಕಸ್ಮಾತ್ತಾಗಿ ಕಾಲು ಜಾರಿ ಕೆಳಕ್ಕೆ ಬಿದ್ದಿದೆ. ಕೆಳಗೆ ಸಿಮೆಂಟ್ ರಸ್ತೆಗೆ ಬಿದ್ದ ಕಾರಣ ಮಗುವಿಗೆ ಭಾರೀ ಏಟಾಗಿದೆ.
ಮೇಲೆ ಏಳಲೂ ಆಗದ ಪರಿಸ್ಥಿತಿಯಾಗಿತ್ತು. ತಕ್ಷಣವೇ ಅಲ್ಲಿದ್ದ ಜನರು ಆಕೆಯನ್ನು ಎತ್ತಿಕೊಂಡಿದ್ದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಗುವಿನ ಪರಿಸ್ಥಿತಿ ಈಗ ಗಂಭೀರವಾಗಿದೆ ಎಂದು ತಿಳಿದುಬಂದಿದೆ.