ಕಾವೇರಿ ಜಲಾನಯನ ಪ್ರದೇಶ ದಲ್ಲೂ ಬಂದ್ ಆಗಿದೆ.ಜನರು ಆಕ್ರೋಶ ಇವತ್ತು ಹೊರಗೆ ಹಾಕಿದ್ದಾರೆ.ಇಷ್ಟಾದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ.ಹಲವಾರು ಬಾರಿ ಬೆಂಗಳೂರಲ್ಲಿ ಬಂದ್ ಆಗಿದೆ.ನಾವೆಂದು ಕೂಡ ಸರ್ಕಾರ ಇದ್ದಾಗ ಹತ್ತಿಕ್ಕುವ ಕೆಲಸ ಮಾಡಿಲ್ಲ.ಆದರೆ ಈ ಸರ್ಕಾರ ಹತ್ತಿಕ್ಕಲ್ಲ ಎಂದು ಹೇಳಿತ್ತು.ಆದರೆ ಹಿಂದೆಂದು ಕಾರ್ಯಾಚರಣೆ ಮಾಡದ ರೀತಿಯಲ್ಲಿ ಪೊಲೀಸರ ಕಾರ್ಯಾಚರಣೆ ಮಾಡಿದ್ದಾರೆ.ನಾವು ನೋಡಿದ್ವಿ, ಬೀದಿಗೆ ಬಂದ ಪ್ರತಿಭಟನಾ ಕಾರರನ್ನು ಬಂಧಿಸಿದ್ದಾರೆ.ಈ ಬಂದ್ ಯಶಸ್ವಿ ಯಾಗಬಾರದು ಎಂಬುದು ಸರ್ಕಾರದ ಉದ್ದೇಶ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಬೊಮ್ಮಯಿ ವಾಗ್ದಾಳಿ ನಡೆಸಿದ್ದಾರೆ.
ಇಷ್ಟಾದರೂ ಕೂಡ ಜನರು ಸ್ವಯಂ ಪ್ರೇರಿತವಾಗಿ ಬಂದ್ ಗೆ ಸಹಕಾರ ಕೊಟ್ಟು, ಯಶಸ್ವಿ ಗೊಳಿಸಿದ್ದಾರೆ.ಮೇಕೆದಾಟು ಚಳುವಳಿ ಮಾಡಿದ್ರಿ, ಕೊವೀಡ್ ಇದ್ದರೂ ಅದನ್ನು ಲೆಕ್ಕಿಸದೇ ರಾಜ ಕಾರಣಕ್ಕಾಗಿ ಮೊಂಡು ವಾದ ಮಾಡಿ ಪಾದಯಾತ್ರೆ ಮಾಡಿದ್ರಿ.ಬೆಂಗಳೂರಲ್ಲಿ ಸಭೆಗೆ ಅವಕಾಶ ಇಲ್ಲ ಅಂದ್ರೂ ಪ್ರತಿಭಟನಾ ಸಭೆ ಮಾಡಿದ್ರಿ.ಆದರೆ ಇವತ್ತು ಕುರುಬೂರು ಶಾಂತಕುಮಾರ ರ ಮೆರವಣಿಗೆಗೆ ಅವಕಾಶ ಕೊಟ್ಟಿಲ್ಲ.ಹೋರಾಟ ಗಾರರು ಏನಾದರೂ ನಿಮ್ಮಿಂದ ರಾಜೀನಾಮೆ ಕೇಳಿದ್ರಾ ಅಥವಾ ಅಧಿಕಾರ ಕೇಳಿದ್ರಾ..?ನೀರು ರಕ್ಷಣೆ ಮಾಡುವಲ್ಲಿ ಸರ್ಕಾರ ವಿಫಲ ವಾಗಿದೆ ಎಂದು ಹೇಳಿದ್ದಕ್ಕೆ ಬಂಧಿಸಿದ್ದೀರಿ.ಇವತ್ತು ರಾಜ್ಯದಲ್ಲಿ ಪೊಲೀಸ್ ಸರ್ಕಾರ ಇದೆ.ಇವತ್ತು ಸಿಡಬ್ಲೂ ಏನಾದರೂ ಹೇಳಲಿ, ನೀವು ಮಾತ್ರ ಸುಪ್ರೀಂಕೋರ್ಟ್ ಗೆ ಐಎ ಹಾಕಬೇಕು.ಯಾವುದೇ ಕಾರಣಕ್ಕೂ ನೀರನ್ನು ತಮಿಳುನಾಡಿಗೆ ಬಿಡಬಾರದು.ರಾಮನಗರ ಮಂಡ್ಯ ಕೆಲವು ಕಡೆ ಪ್ರತಿಭಟನೆ ಆಗಿದೆ
ಬಂದ್ ಆಗಿದೆ.ರೈತರ ಆಕ್ರೋಶ ಹೊರ ಬಿದ್ದಿದೆ.ಆದರೂ ಸರಕಾರ ಎಚ್ಚೆತ್ತು ಕೊಂಡಿಲ್ಲ.ಕನ್ನಡ ಪರ ಸಂಘಟನೆ ಸೇರಿ ಅನೇಕ ಬಾರಿ ಪ್ರತಿಭಟನೆ ಆಗಿದೆ.ನಾವು ಅಧಿಕಾರದಲ್ಲಿ ಇದ್ದಾಗ ಹೋರಾಟ ಧಮನ ಮಾಡುವ ಪ್ರಯತ್ನ ಮಾಡಿಲ್ಲ.ಆದರೆ ಈ ಸರ್ಕಾರ ಹಿಂದೆಂದು ಕಾಣದ ರೀತಿ ಪೊಲೀಸ್ ಕಾರ್ಯಾಚರಣೆ ಆಗಿದೆ.ಈ ಪ್ರತಿಭಟನೆ ಮಾಡೋರನ್ನು ಎತ್ತಾಕೊಂಡು ಹೋಗ್ತಿದ್ದಾರೆ
ಬೆಳಗ್ಗೆ ಆರು ಗಂಟೆ ಇಂದಲೆ ಶುರುವಾಗಿದೆ.ಪ್ರತಿಭಟನೆ ಯಶಸ್ವಿ ಆಗಬಾರದು ಎಂದು ಸರ್ಕಾರ ಪ್ರಯತ್ನ ಮಾಡ್ತಾ ಇದೆ.ಆದರೂ ಬಂದ್ ಯಶಸ್ವಿ ಆಗಿದೆ ಎಂದು ಬೆಂಗಳೂರಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.