Select Your Language

Notifications

webdunia
webdunia
webdunia
webdunia

3 ವರ್ಷಗಳ ಬಳಿಕ ಎಟಿಎಂ ಹಲ್ಲೆಕೋರ ಅರೆಸ್ಟ್

3 ವರ್ಷಗಳ ಬಳಿಕ ಎಟಿಎಂ ಹಲ್ಲೆಕೋರ ಅರೆಸ್ಟ್
bengaluru , ಶನಿವಾರ, 4 ಫೆಬ್ರವರಿ 2017 (16:13 IST)
ಬೆಂಗಳೂರಿನ ಕಾರ್ಪೋರೇಶನ್ ಬಳಿಯ ಕಾರ್ಪೊರೇಶನ್ ಎಟಿಎಂನಲ್ಲಿ ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದ ವ್ಯಕ್ತಿಯನ್ನ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿಯಲ್ಲಿ ಬಂಧಿಸಲಾಗಿದೆ. ಬಂಧಿತನನ್ನ ಮಧುಕರ್ ರೆಡ್ಡಿ ಎಂದು ಗುರ್ತಿಸಲಾಗಿದೆ.
ಮಧುಕರ ರೆಡ್ಡಿ

ಬಂಧಿತ ಆರೋಪಿಯು ಮದನಪಲ್ಲಿ ಪೊಲೀಸರ ವಶದಲ್ಲಿದ್ದಾನೆ. ಸ್ಥಳೀಯ ಕೋರ್ಟ್`ಗೆ ಹಾಜರುಪಡಿಸಿದ ಬಳಿಕ ಬೆಂಗಳೂರು ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಈಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ. ಪರಮೇಶ್ವರ್, ಕರ್ನಾಟಕ ಮತ್ತು ಆಂಧ್ರಪ್ರದೇಶ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಎಟಿಎಂ ಹಲ್ಲೆಕೋರನನ್ನ ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪತ್ತೆಯಾಗಿದ್ದು ಹೇಗೆ..?: ಮದನಪಲ್ಲಿಯಲ್ಲಿ ರಸ್ತೆ ಬದಿ ನಿಂತಿದ್ಧ ಮಧುಕರರೆಡ್ಡಿಯನ್ನ ಗುರ್ತಿಸಿದ ಟ್ರಾಫಿಕ್ ಪೊಲೀಸ್ ಒಬ್ಬರು ಸಮೀಪಕ್ಕೆ ಹೋಗಿ ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ. ಬೆಂಗಳೂರಲ್ಲಿ ಮಹಿಳೆ ಮೇಲೆ ನಡೆಸಿದ್ದು ತಾನೇ ಎಂದು ವಿಚಾರಣೆ ವೇಳೆ  ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ದಾಳಿ ನಡೆದಿದ್ದು ಯಾವಾಗ..?: 2013 ನವೆಂಬರ್ 19ರಂದು ಬೆಳ್ಳಬೆಳಗ್ಗೆ 7.15ರ ಸುಮಾರಿಗೆ ಎಟಿಎಂಗೆ ಬಂದಿದ್ದ ಜ್ಯೋತಿ ಉದಯ್ ಎಂಬುವವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ.  ಪ್ರಕರಣ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ದೇಶದ ಹಲವೆಡೆ ಹುಡುಕಿದರೂ ಈತನನ್ನ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.

ಚಹರೆ: ದಾಳಿ ವೇಳೆ ಎಟಿಎಂ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿರುವ ವಿಡಿಯೋ ಆಧರಿಸಿ ಚಹರೆ ಪತ್ತೆಹಚ್ಚಲಾಗಿದೆ. ಅಂದು ಕೊಂಚ ಗಡ್ಡಬಿಟ್ಟಿದ್ದ ರೆಡ್ಡಿ, ಇವತ್ತು ಗಡ್ಡ ಬೋಳಿಸಿದ್ದಾನೆ. ಗುರುತು ಸಿಗದಂತೆ 2 ಹಲ್ಲನ್ನೂ ಉದುರಿಸಿಕೊಂಡಿದ್ದಾನೆ. ವಿವಿಧ ಆಂಗಲ್`ಗಳಲ್ಲಿ ಪರಿಶೀಲಿಸಿದ ಬಳಿಕ ಈತ ಆತನೇ ಎಂಬುದು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಶ್ಚಿತಾರ್ಥಕ್ಕೂ ಮೂರು ದಿನ ಮೊದಲು .....ಆಗಿದ್ದೇನು?