Select Your Language

Notifications

webdunia
webdunia
webdunia
webdunia

ಬೆಳ್ತಂಗಡಿ: ತಲೆಗೆ ಕಲ್ಲು ಎತ್ತಿ ಹಾಕಿ ನಿವೃತ್ತ ಶಿಕ್ಷಕನ ಹತ್ಯೆ

Belthangady Taluk Crime Case

Sampriya

ಬೆಳ್ತಂಗಡಿ , ಮಂಗಳವಾರ, 20 ಆಗಸ್ಟ್ 2024 (19:31 IST)
ಬೆಳ್ತಂಗಡಿ: ನಿವೃತ್ತ ಶಿಕ್ಷಕರೊಬ್ಬರ ತಲೆಗೆ ಕಲ್ಲು ಎತ್ತು ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಬೆಳಾಲು ಗ್ರಾಮದಲ್ಲಿ ನಡೆದಿದೆ.

ಶಿಕ್ಷಕರ ಮನೆಯೇ ಮುಂದೆಯೇ ಭೀಕರವಾಗಿ ಹತ್ಯೆ ಮಾಡಿದ್ದು, ಮೃತರನ್ನು ಎಸ್ ಪಿ ಬಾಲಕೃಷ್ಣ ಭಟ್ (73) ಎಂದು ಗುರುತಿಸಲಾಗಿದೆ.

ಇನ್ನೂ ಈ ಹತ್ಯೆ ಹಿಂದಿನ ಕಾರಣ ಏನು ಎಂಬುದು ತನಿಖೆಯಿಂದಷ್ಟೇ ತಿಳಿದುಬರಬೇಕಿದೆ. ಬೆಳಾಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿರುವ ಮನೆಯ ಆವರಣದಲ್ಲೇ ಕೊಲೆ ಮಾಡಿ, ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ.

ಈ ಪ್ರಕರಣ ಬೆಳ್ತಂಗಡಿ ವೃತ್ತ ನಿರೀಕ್ಷಕರ ಅಧೀನದಲ್ಲಿರುವ ಧರ್ಮಸ್ಥಳ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಸ್ಪೃಶ್ಯರಿಗೆ ಪೂಜೆ ಮಾಡುವ ಹಕ್ಕು ನೀಡಿದ ನಾರಾಯಣ ಗುರುಗಳಿಗೆ ಸಿಎಂ ಸಿದ್ದರಾಮಯ್ಯ ನಮನ