Select Your Language

Notifications

webdunia
webdunia
webdunia
webdunia

ಬೆಳಗಾವಿ ಪರಿಷತ್ ಫೈಟ್!

ಬೆಳಗಾವಿ ಪರಿಷತ್ ಫೈಟ್!
ಬೆಳಗಾವಿ , ಬುಧವಾರ, 17 ನವೆಂಬರ್ 2021 (08:15 IST)
ಬೆಳಗಾವಿ : ಬೆಳಗಾವಿ ಸ್ಥಳೀಯ ಸಂಸ್ಥೆಯಿಂದ ಡಿಸೆಂಬರ್ 10ಕ್ಕೆ  ಪರಿಷತ್ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಇದು ಬೆಳಗಾವಿ ಜಿಲ್ಲೆಯಲ್ಲಿ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಲಿದೆ. ಕಾಂಗ್ರೆಸ್, ಬಿಜೆಪಿ ಪಕ್ಷ ಇನ್ನೂ ತಮ್ಮ ಅಧಿಕೃತ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಆದರೆ ಕಾಂಗ್ರೆಸ್ ನಿಂದ ಚನ್ನರಾಜ್ ಹಟ್ಟಿಹೊಳಿ ಹಾಗೂ ಬಿಜೆಪಿಯಿಂದ ಮಹಾಂತೇಶ ಕವಟಗಿಮಠ ಕಣಕ್ಕೆ ಇಳಿಯೋದು ಬಹುತೇಕ ಖಚಿತವಾಗಿದೆ. ಇಬ್ಬರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಕಣಕ್ಕೆ ಇಳಿಯುತ್ತಿರೋದು ದೊಡ್ಡ ತಲೆನೋವು ಆಗಿದೆ.
ಫಲಿತಾಂಶದ ಮೇಲೆ ಪರಿಣಾಮ ಬೀರಲಿದ್ದು, ಇಬ್ಬರು ಆಕಾಂಕ್ಷಿಗಳನ್ನು ಗೊಂದಲ ಸೃಷ್ಟಿಯಾಗಿದೆ. ಮೂರು ಜನ ಜಾರಕಿಹೊಳಿ ಸಹೋದರರು ಈಗಾಗಲೇ ವಿಧಾನಸಭೆ ಸದಸ್ಯರಾಗಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಈಗ ಮತ್ತೊಬ್ಬ ಸಹೋದರ ಪರಿಷತ್ ಮೂಲಕ ರಾಜಕೀಯ ಪ್ರವೇಶಕ್ಕೆ ತಾಲೀಮು ಆರಂಭಿಸಿದ್ದಾರೆ. ಈ ಚುನಾವಣೆ ಜಾರಕಿಹೊಳಿ ಸಹೋದರರು ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಮತ್ತೊಂದು ಹೋರಾಟಕ್ಕೆ ಸಾಕ್ಷಿ ಆಗಲಿದೆ.
ಪಿ ಎಲ್ ಡಿ ಬ್ಯಾಂಕ್ ಬಳಿಕ ಬೆಳಗಾವಿ ಪರಿಷತ್ ಎರಡು ಸ್ಥಾನಗಳ ಚುನಾವಣೆ ಜಿದ್ದಾಜಿದ್ದಿನ ಹೋರಾಟಕ್ಕೆ ವೇದಿಕೆ ಆಗಲಿದೆ. ಜಾರಕಿಹೊಳಿ ಹಾಗೂ ಹೆಬ್ಬಾಳ್ಕರ್ ನಡುವೆ ಹೋರಾಟ ನಡೆಯಲಿದೆ. ಕುಟುಂಬ ರಾಜಕೀಯ ವಿಸ್ತರಣೆಗೆ ಪರಿಷತ್ ಚುನಾವಣೆ ವೇದಿಕೆಯಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೆಟ್ರೋ ಸಂಚಾರ ಅವಧಿ ವಿಸ್ತರಣೆ