Select Your Language

Notifications

webdunia
webdunia
webdunia
webdunia

ರಾಜ್ಯದ ಎಲ್ಲಾ ನಾಯಕರ ಪರವಾಗಿ ನಾರಿಮನ್‌ ಕ್ಷಮೆ ಕೋರುತ್ತೇನೆ: ದೇವೇಗೌಡ

ರಾಜ್ಯದ ಎಲ್ಲಾ ನಾಯಕರ ಪರವಾಗಿ ನಾರಿಮನ್‌ ಕ್ಷಮೆ ಕೋರುತ್ತೇನೆ: ದೇವೇಗೌಡ
ಬೆಂಗಳೂರು , ಮಂಗಳವಾರ, 4 ಅಕ್ಟೋಬರ್ 2016 (18:22 IST)
ರಾಜ್ಯದ ನಾಯಕರ ಟೀಕೆಗಳಿಂದ ನಾರಿಮನ್ ಅವರ ಮನಸ್ಸಿಗೆ ತುಂಬಾ ನೋವಾಗಿದೆ. ರಾಜ್ಯದ ಎಲ್ಲಾ ನಾಯಕರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ. 
 
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠದ ಎದುರು ರಾಜ್ಯದ ಪರವಾಗಿ ವಕೀಲ ಫಾಲಿ ಎಸ್ ನಾರಿಮನ್ ಅವರು ಸಮರ್ಪಕವಾದ ಮಂಡಿಸಿದ್ದಾರೆ. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶ ಪಾಲಿಸುವುದು ಅನಿವಾರ್ಯ ಎಂದು ಹೇಳಿದರು.
 
ಜೀವನದ ಕೊನೆಗಾಲದಲ್ಲಿ ಕೈಮುಗಿದು ಪ್ರಾರ್ಥಿಸುತ್ತೇನೆ. ಕಾವೇರಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋರಾಡೋಣ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭಾವುಕರಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಯುವತಿಯರಿಗಾಗಿ ಮಿಡಿಯಿತು ಸುಷ್ಮಾ ಹೃದಯ