Select Your Language

Notifications

webdunia
webdunia
webdunia
webdunia

ನೇಹಾ ಹತ್ಯೆಗೂ ಮುನ್ನಾ ತಂದೆಯಾ ಮೇಲೂ ಹಲ್ಲೆ ಮಾಡಿದ್ದ ಫಯಾಜ್

Hubballi Neha Murder Case

Sampriya

ಹುಬ್ಬಳ್ಳಿ: , ಶನಿವಾರ, 20 ಏಪ್ರಿಲ್ 2024 (16:50 IST)
ಹುಬ್ಬಳ್ಳಿ: ಬಿವಿಬಿ ಕಾಲೇಜು ಆವರಣದಲ್ಲಿ ಸ್ನೇಹಿತನಿಂದಲೇ ಹತ್ಯೆಯಾದ ನೇಹಾ ಪ್ರಕರಣವು ಸದ್ಯ ದೇಶವನ್ನೇ ಬೆಚ್ಚಿಬೀಳಿಸಿದ್ದು, ಇದೀಗ ಹಂತಕ ಫಯಾಜ್‌ ಆಸ್ತಿಗಾಗಿ ತನ್ನ ತಂದೆಯ ಮೇಲು ಹಲ್ಲೆಗೆ ಯತ್ನಿಸಿದ್ದ ಎಂಬ ವಿಚಾರ ತಿಳಿದುಬಂದಿದೆ.

ಹತ್ಯೆಯಾದ ನೇಹಾ ಅವರ ತಂದೆ ನಿರಂಜನ್ ಅವರು ಮಾಧ್ಯಮದ ಮುಂದೆ ಮಾತನಾಡುವಾಗ ಹಂತಕ ಫಯಾಜ್ 3 ದಿನಗಳ ಹಿಂದೆ ಆಸ್ತಿಗಾಗಿ ತನ್ನ ತಂದೆಯಾ ಮೇಲೂ ಹಲ್ಲೆ ಮಾಡಿರುವುದು ತಿಳಿದಿದೆ.

ಪೊಲೀಸರ ಮುಂದೆಯೇ ತಂದೆಯಾ ಮೇಲೆ ಹಲ್ಲೆ ಮಾಡಿದ್ದಾನೆ.  ಪೊಲೀಸರು ಮುಚ್ಚಲಿಕೆ ಬರೆದು ಅವನನ್ನು ಕಳುಹಿಸಿದ್ದಾರೆ.
ಫಯಾಜ್ ತಂದೆ ಈ ವಿಚಾರ ನಮ್ಮ ಬಳಿ ಹೇಳಿಕೊಂಡಿದ್ದರೆ ನಾವು ಮುಂಜಾಗೃತ ಕ್ರಮ ಕೈಗೊಳ್ಳುತ್ತಿದ್ದೇವು. ನಮ್ಮ ಮಗಳನ್ನು ಕಾಪಾಡಿಕೊಳ್ಳುತ್ತಿದ್ದೆವು ಎಂದರು.

ಫಯಾಜ್ ತಂದೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಬ್ಬರು ಪ್ರೀತಿಯಲ್ಲಿದ್ದರು ಎಂಬುದು ಸುಳ್ಳು. ಇದೀಗ ತನಿಖೆಯ ದಿಕ್ಕನ್ನು ತಪ್ಪಿಸಲಾಗುತ್ತಿದೆ. ನಮ್ಮ ಮಗಳು ಆತನನ್ನು ಪ್ರೀತಿಸಿಲ್ಲ. ಇದು ವನ್‌ ಸೈಡ್ ಲವ್. ಫಯಾಜ್‌ನ ಮನಃಸ್ಥಿತಿ ಬಗ್ಗೆ ಅವರ ಪೋಷಕರು ನಮ್ಮ ಬಳಿ ಹೇಳಿಕೊಂಡಿದ್ದರೆ ನಮ್ಮ ಮಗಳನ್ನು ಹೇಗಾದರೂ ನಾವು ರಕ್ಷಿಸಿಕೊಳ್ಳುತ್ತಿದ್ದೆವು.

ಈಗ ಕ್ಷಮೆ ಕೇಳಿದರೆ ಏನು ಪ್ರಯೋಜನವಿಲ್ಲ. ನಮಗೆ ನಮ್ಮ ಮಗಳನ್ನು ವಾಪಾಸ್ ಪಡೆಯಕ್ಕೆ ಆಗಲ್ಲ. ಅವನಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಕ್ರೋಶ ಹೊರಹಾಕಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಾಪ್ ಸಿಂಹ, ಸದಾನಂದಗೌಡರಿಗೆ ಟಿಕೆಟ್ ತಪ್ಪಿಸಿ ಒಕ್ಕಲಿಗರಿಗೆ ಅನ್ಯಾಯ ಮಾಡಿದ್ದು ಯಾರು ದೇವೇಗೌಡರೇ? ಸಿದ್ದರಾಮಯ್ಯ ಪ್ರಶ್ನೆ