Webdunia - Bharat's app for daily news and videos

Install App

ರೇಂಜರ್ ಸ್ವಿಂಗ್‌ ರೈಡ್‌ನಲ್ಲಿ ಕುಳಿತುಕೊಳ್ಳುವ ಮುನ್ನಾ ಹುಷಾರ್‌

Sampriya
ಬುಧವಾರ, 23 ಅಕ್ಟೋಬರ್ 2024 (17:04 IST)
Photo Courtesy X
ವಿಜಯಪುರ: ಇಲ್ಲಿ ನಡೆಯುತ್ತಿರುವ ಪ್ರದರ್ಶನದ ವೇಖೆ ರೇಂಜರ್ ಸ್ವಿಂಗ್ ರೈಡ್‌ನಿಂದ 21 ವರ್ಷದ ಯುವತಿ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

ವಿಜಯಪುರ ನಗರದ ನವಭಾಗ್ ರಸ್ತೆಯಲ್ಲಿರೋ ಫಿಶ್ ಟನಲ್ ಎಕ್ಪೋದಲ್ಲಿ ಈ ಅವಘಡವೊಂದು ಸಂಭವಿಸಿದೆ. ಮೃತ ಯುವತಿಯನ್ನು 21 ವರ್ಷ ಯುವತಿ ನಿಖಿತಾ ಬಿರಾದರ್ ಎಂದು ಗುರುತಿಸಲಾಗಿದೆ.

ಮೂಲಗಳ ಪ್ರಕಾರ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಶಿಕ್ಷಕ ಅರವಿಂದ ಬಿರಾದರ ಪತ್ನಿ ಗೀತಾ ಪುತ್ರಿ ನಿಖಿತಾ ಬಿರಾದರ ಹಾಗೂ ನೆರೆಯ ಮನೆ ಮಂದಿ ಅಕ್ಟೋಬರ್ 20ರಂದು ಆಗಮಿಸಿದ್ದರು. ಈ ವೇಳೆ ನಿಖಿತಾ ಹಾಗೂ ಆಕೆಯ ಇಬ್ಬರು ಗೆಳೆತಿಯರು ರೇಂಜರ್ ಸ್ವಿಂಗ್ ನಲ್ಲಿ ಕುಳಿತಿದ್ದರು.

ಈ ವೇಳೆ ರೇಂಜರ್‌ನಲ್ಲಿ ಕುಳಿತುಕೊಳ್ಳುವಾಗ ನಿಖಿತಾ ತಾಯಿ ಆಫರೇಟ್ ಬಳಿ ಎಲ್ಲವೂ ಸರಿಯಾಗಿದೆಯಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.  ಆಗ ಆರಪೇಟರ್ ರಮೇಶ ರಾಯ್ ಎಲ್ಲ ಸರಿಯಾಗಿದೆ ಎಂದು ಹೇಳಿದ್ದ.

ರೇಂಜರ್ ಸ್ವಿಂಗ್ ಆರಂಭವಾಗುತ್ತಿದ್ದಂತೆ ನಿಖಿತಾ ಕುಟುಂಬದವರು ಹಾಗು ಆಕೆ ಗೆಳತಿ ರೇಂಜರ್ ಸ್ವಿಂಗ್ ನಲ್ಲಿ ಕುಳಿತಿದ್ದವರ ವಿಡಿಯೋ ಮಾಡುತ್ತಿದ್ದರು. ರೇಂಜರ್ ಸ್ವಿಂಗ್ ಆನ್ ಆಗಿ ತೆಲೆ ಕೆಳಗಾಗಿ ಮಾಡುತ್ತಿದ್ದಂತೆ ಅದರಲ್ಲಿದ್ದವರು ಭಯದಿಂದ ಕಿರುಚಾಡಿದರು. ಮಕ್ಕಳು ಕಿರುಚಿಕೊಳ್ಳುತ್ತಲೇ ನಿಖಿತಾ ತಾಯಿ ಎಲ್ಲರೂ ಭಯಗೊಂಡಿದ್ದಾರೆ. ರೇಂಜರ್ ಸ್ವಿಂಗ್ ಬಂದ್ ಮಾಡಿ ಎಂದು ಆಪರೇಟರ್ ಗೆ ಪರಿ ಪರಿಯಾಗಿ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಆವರ ಮಾತನ್ನು ಆಪರೇಟರ್ ರಮೇಶ್ ರಾಯ್ ಕೇಳಿಲ್ಲ.

ಇದೇ ವೇಳೆ ನಿಖಿತಾಗೆ ಹಾಕಿದ್ದ ಸೇಪ್ಟಿ ಬೆಲ್ಟ್ ಸಡಿಲಾಗಿ ಕಟ್ ಆಗಿದೆ. ಕೂಡಲೇ ಆಕೆ ಮೇಲಿಂದ ಕೆಳಗೆ ಬಿದ್ದಿದ್ದಾಳೆ. ಈ ಹಿನ್ನೆಲೆಯಲ್ಲಿ ತಲೆ ಹಾಗೂ ಕಾಲುಗಳಿಗೆ ಗಂಭೀರ ಗಾಯವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ನಿಖಿತಾ ಕೊನೆಯುಸಿರೆಳೆದಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅತ್ಯಾಚಾರ ಪ್ರಕರಣದಲ್ಲಿ ಬಿಜೆಡಿ ಕಾರ್ಪೊರೇಟರ್ ಬಂಧನ, ಪಕ್ಷದಿಂದ ಅಮಾನತು

ತಮಿಳುನಾಡಿನ ಚೋಳರ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಭೇಟಿ: 140 ಕೋಟಿ ಭಾರತೀಯರ ಕಲ್ಯಾಣಕ್ಕೆ ಪ್ರಾರ್ಥನೆ

ಹರಿದ್ವಾರ ಕಾಲ್ತುಳಿತ, ಇದು ಅಪಘಾತವಲ್ಲ, ಆಡಳಿತ ವ್ಯವಸ್ಥೆಯ ವೈಫಲ್ಯ: ಕೇಜ್ರಿವಾಲ್

ರಾಜ್ಯದಲ್ಲಿ ರಸಗೊಬ್ಬರದ ಕಾಳದಂಧೆ: ಸರ್ಕಾರದ ವಿರುದ್ಧ ಜು.28ರಂದು ಪ್ರತಿಭಟನೆ, ವಿಜಯೇಂದ್ರ

ಎಚ್ಚರಿಕೆ ಬಳಿಕವು ನಿಷೇಧಿತ ಬಣ್ಣ ಬಳಕೆ: 6 ಎಂಫೈರ್ ಹೊಟೇಲ್ ವಿರುದ್ಧ ಕ್ರಮಕ್ಕೆ ಚಿಂತನೆ

ಮುಂದಿನ ಸುದ್ದಿ
Show comments