Select Your Language

Notifications

webdunia
webdunia
webdunia
webdunia

ಇಂದಿರಾ ಕ್ಯಾಂಟೀನ್ ಊಟ, ಉಪಹಾರ ದರ ಪರಿಷ್ಕರಣೆಗೆ ಬಿಬಿಎಂಪಿ ಚಿಂತನೆ

ಇಂದಿರಾ ಕ್ಯಾಂಟೀನ್ ಊಟ, ಉಪಹಾರ ದರ ಪರಿಷ್ಕರಣೆಗೆ ಬಿಬಿಎಂಪಿ ಚಿಂತನೆ
ಬೆಂಗಳೂರು , ಶನಿವಾರ, 29 ಫೆಬ್ರವರಿ 2020 (11:09 IST)
ಬೆಂಗಳೂರು : ಇಂದಿರಾ ಕ್ಯಾಂಟೀನ್ ನಿಂದ ಬಿಬಿಎಂಪಿಗೆ ಆರ್ಥಿಕ ಹೊರೆಯಾಗುತ್ತಿರುವ ಹಿನ್ನಲೆ ಆರ್ಥಿಕ ಹೊರೆ ತಗ್ಗಿಸಿಕೊಳ್ಳಲು ಬಿಬಿಎಂಪಿ ಹೊಸ ಪ್ಲ್ಯಾನ್  ಮಾಡಿದೆ.


ಇಂದಿರಾ ಕ್ಯಾಂಟೀನ್ ಊಟ, ಉಪಹಾರ ದರ ಪರಿಷ್ಕರಣೆಗೆ ಬಿಬಿಎಂಪಿ ಚಿಂತನೆ ನಡೆಸಿದೆ. 10ರೂ ಊಟ, 5ರೂ ಉಪಹಾರ ಬೆಲೆ ಶೀಘ್ರದಲ್ಲಿಯೇ ಏರಿಕೆ ಮಾಡಲಿದೆ. ಉಪಹಾರದ ಬೆಲೆ 5ರೂಪಾಯಿಯಿಂದ 10ರೂಗೆ ಏರಿಕೆ ಹಾಗೂ ಊಟದ ಬೆಲೆ 10ರೂ ನಿಂದ 15 ರೂ.ಗೆ ಏರಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.


ಗುತ್ತಿಗೆದಾರರಿಗೆ ಒಂದು ಊಟಕ್ಕೆ 22 ರೂ ನೀಡಲಾಗುತ್ತಿತ್ತು. ಗ್ರಾಹಕರಿಂದ 10ರೂ ಪಡೆದರೆ, ಸರ್ಕಾರದಿಂದ 12ರೂ ನೀಡಲಾಗುತ್ತಿತ್ತು. ಆದರೆ ಒಂದು ವರ್ಷದಿಂದ ಸರ್ಕಾರ ಅನುದಾನ ನೀಡದ ಹಿನ್ನಲೆ ಬಿಬಿಎಂಪಿಯೇ ಇಂದಿರಾ ಕ್ಯಾಂಟೀನ್ ನಿರ್ವಹಣೆ ಮಾಡ್ತಿದೆ. ಹೀಗಾಗಿ ಬಿಬಿಎಂಪಿಗೆ ಆರ್ಥಿಕ ಹೊರೆಯಾಗುತ್ತಿದ್ದ ಕಾರಣ ಅದನ್ನು ತಗ್ಗಿಸಿಕೊಳ್ಳಲು ಬಿಬಿಎಂಪಿ ಹೊಸಬರಿಗೆ ಗುತ್ತಿಗೆ, ಹೊಸ ದರ ಜಾರಿ ಮಾಡಲು ಚಿಂತನೆ ನಡೆಸಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯನ ಈ ನಡೆಗೆ ಸ್ವಪಕ್ಷೀಯ ನಾಯಕರಿಂದಲೇ ಅಸಮಾಧಾನ