ಮರಗಳನ್ನ ಸ್ಥಳಾಂತರಿಸಲು ಬಿಬಿಎಂಪಿ ಪ್ಲಾನ್ ...!

Webdunia
ಶನಿವಾರ, 21 ಜನವರಿ 2023 (14:57 IST)
ಬಿಬಿಎಂಪಿ ರಸ್ತೆಗಳನ್ನ ಅಭಿವೃದ್ಧಿ ಪಡಿಸುವಲ್ಲಿ ಮರಗಳನ್ನ ಕಡಿದು ಕಾಮಗಾರಿಯನ್ನ ಮುಂದುವರೆಸಿತ್ತು. ಇದ್ರಿಂದ ಸಾರ್ವಜನಿಕರು ಮತ್ತು ಪರಿಸರವಾದಿಗಳು ಬಿಬಿಎಂಪಿ ವಿರುದ್ಧ ಆಕ್ರೋಶವನ್ನ ವ್ಯಕ್ತಪಡಿಸಿದ್ರು, ಆದ್ರೆ ಇದೀಗ ಮರಗಳನ್ನು ಉಳಿಸಿಕೊಳ್ಳಲು ಬಿಬಿಎಂಪಿ ಹೊಸ ಪ್ಲಾನ್ ಸಿದ್ದ ಮಾಡಿದೆ.
 
ಸಿಲಿಕಾನ್ ಸಿಟಿ ಯಲ್ಲಿ ಆಭಿವೃಧ್ಧಿ ಕಾಮಗಾರಿಯನ್ನು ಬಿಬಿಎಂಪಿ ಕೈಗೆತ್ತಿಕೊಂಡಿತ್ತು , ಸಿಲಿಕಾನ್ ಸಿಟಿಯನ್ನ ಸ್ಮಾರ್ಟ್ ಸಿಟಿ ಮಾಡುವ ಆತುರದಲ್ಲಿ ನೂರಾರು ಮರಗಳಿಗೆ ಕೊಡಲಿಯನ್ನ ಹಾಕಿತ್ತು ಬಿಬಿಎಂಪಿ. ಇದ್ರಿಂದ ಎಲ್ಲೆಡೆ ಸಾರ್ವಜನಿಕರು ಮತ್ತು ಪರಿಸರವಾದಿಗಳು ಬಿಬಿಎಂಪಿ ವಿರುದ್ಧ ಆಕ್ರೋಶವನ್ನ ವ್ಯಕ್ತ ಪಡಿಸಿದ್ರು. ಇದರಿಂದಾಗಿ ಮರಗಳಮನ್ನು ಕಡಿಯುವುದರ ಬದಲು ಮರಗಳನ್ನು ಸ್ಥಳಾಂತರಿಸಲು ಬಿಬಿಎಂಪಿ ಹೊಸ ಪ್ಲಾನ್ ರೆಡಿಮಾಡಿದ್ದು, ಮರಗಳ ಸ್ಥಳಾಂತರಕ್ಕೆ ಖಾಸಗಿ ಸಂಸ್ಥೆಗಳನ್ನು ನೇಮಕ ಮಾಡಲು ಬಿಬಿಎಂಪಿಅರಣ್ಯ ವಿಭಾಗ ಸಜ್ಜಾಗಿದೆ.
 
ಲನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆಗಾಗಿ ಬಿಬಿಎಂಪಿ ಹಲವು ರಸ್ತೆಗಳ ಅಗಲೀಕರಣ ಕಾಮಗಾರಿಗಳನ್ನ ಕೈಗೆತ್ತುಕೊಂಡಿದ್ದು, ನೂರಾರು ಮರಗಳನ್ನ ಕಡಿಯುವ ಪರಿಸ್ಥಿತಿ ಎದುರಾಗಿತ್ತು, ಆದರೆ ಇದೀಗ ಮರಗಳನ್ನ ಕಡಿಯುವ ಬದಲು ಸ್ಥಳಾಂತರಿಸಲು ಬಿಬಿಎಂಪಿ ಅರಣ್ಯ ಇಲಾಖೆ ಖಾಸಗಿ ಸಂಸ್ಥೆಗೆ ವಹಿಸಲು ಮುಂದಾಗಿದೆ.
 
ಇನ್ನು ಅರಣ್ಯ ವಿಭಾಗ ರೂಪಿಸಿರುವ ಯೋಜನೆಯಂತೆ 0.1 ರಿಂದ 0.99 ಮೀ ಸುತ್ತಳತೆಯ ಮರಗಳು ಹಾಗೂ 1 ರಿಂದ 1.99 ಮೀ ಸುತ್ತಳತೆಯ ಮರಗಳ ಆರೋಗ್ಯವನ್ನು ಗಮನಿಸಿ ಸ್ಥಳಾಂತರಿಸಲಾಗುತ್ತಿದೆ.ಇದಕ್ಕೆ ಸಂಬಂದಿಸಿದಂತೆ 3 ಪ್ಯಾಕೇಜ್ ಗಳ ಟೆಂಡರೆಗಳನ್ನ ಆಹ್ವಾನಿಸಲಾಗಿದೆ. ಗುತ್ತಿಗೆ ಪಡೆದವರು ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 50 ಮರಗಳನ್ನು ಸ್ಥಳಾಂತರಿಸಿ ಅವುಗಳನ್ನು ನಿರ್ವಹಣೆ ಮಾಡಬೇಕಾಗಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ನರೇಂದ್ರ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ

15 ವರ್ಷ ಅವಧಿ ಮೀರಿದ ಇಲಾಖಾ ವಾಹನಗಳು ಗುಜರಿಗೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಅನುದಾನದಲ್ಲಿ ವಿಪಕ್ಷಗಳ ಕ್ಷೇತ್ರಕ್ಕೆ ತಾರತಮ್ಯ ಯಾಕೆ: ಆರ್ ಅಶೋಕ್ ಗರಂ

ಗೃಹಲಕ್ಷ್ಮಿ ತಪ್ಪು ಮಾಹಿತಿ: ಕೊನೆಗೂ ಸದನಕ್ಕೆ ಬಂದು ತಪ್ಪು ಒಪ್ಪಿಕೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಕುಂದಾ ತಿಂದು ಹೋಗಲು ಬಂದಿದ್ದೀರಾ ಎಂದು ಜನರು ಕೇಳುವಂತಾಗಿದೆ ಅಧಿವೇಶನ: ಛಲವಾದಿ ನಾರಾಯಣಸ್ವಾಮಿ

ಮುಂದಿನ ಸುದ್ದಿ
Show comments