Publish Date: Thu, 02 Jul 2020 (10:50 IST)
Updated Date: Thu, 02 Jul 2020 (10:52 IST)
ಬೆಂಗಳೂರು : ಮಾಸ್ಕ್ ಹಾಕಿಲ್ಲವೆಂದು ದಂಡ ವಿಧಿಸಿದ್ದಕ್ಕೆ ಬಿಬಿಎಂಪಿ ಅಧಿಕಾರಿಗಳಿಗೆ ವ್ಯಕ್ತಿಯೊಬ್ಬ ಆವಾಜ್ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿತ್ತು. ಆದರೆ ವ್ಯಕ್ತಿಯೊಬ್ಬ ಮಾಸ್ಕ್ ಧರಿಸದ ಕಾರಣ ಬಿಬಿಎಂಪಿ ಆರೋಗ್ಯ ಸಿಬ್ಬಂದಿ, ಮಾರ್ಷಲ್ ಆತನಿಗೆ ದಂಡ ವಿಧಿಸಿದ್ದಾರೆ.
ಇದರಿಂದ ಕೋಪಗೊಂಡ ಆತ, ನಾನು ಮಾಜಿ ಕಾರ್ಪೋರೇಟರ್, ನನಗೆ ದಂಡ ಹಾಕುತ್ತೀರಾ ಎಂದು ಆವಾಜ್ ಹಾಕಿ, ಬಳಿಕ 200ರೂ.ದಂಡ ಪಾವತಿಸಿ ತೆರಳಿದ್ದಾನೆ ಎನ್ನಲಾಗಿದೆ.