ಕೋವಿಡ್ ರೂಪಾಂತರಿ ವೈರಾಣು ತಡೆಗಟ್ಟುವ ನವೋದ್ಯಮ ಕೋವಿಡ್ ಕಾರ್ಯಕ್ರಮ ಸಮಿತಿಯೊಂದಿಗೆ ಇಂದು ಸಭೆ ನಡೆಸಲಾಗಿದೆ, ತಜ್ಞರು ಸೂಚಿಸಿರುವ ಸೂಕ್ತ ಸಲಹೆ/ಸೂಚನೆಗಳನ್ನು ಜಾರಿಗೆ ತರಲು ಮುಖ್ಯ ಆಯುಕ್ತರು ಶ್ರೀ ಗೌರವ್ ಗುಪ್ತ ರವರು ಆರೋಗ್ಯ ವಿಭಾಗದ ವಿಶೇಷ ಆಯುಕ್ತರಿಗೆ ಸೂಚನೆ.
ನಗರದಲ್ಲಿ ಕೋವಿಡ್ ರೂಪಾಂತರಿ ಸೇರಿದಂತೆ ಇನ್ನಿತರೆ ವೈರಾಣು ತಡೆಗಟ್ಟುವ ಸಂಬಂಧ ಕೋವಿಡ್ ತಜ್ಞರ ಸಮಿತಿ ಜೊತೆ ನಡೆದ ಪರಿಶೀಲನಾ ಸಭೆಯಲ್ಲಿ, ಕೋವಿಡ್ ರೂಪಾಂತರಿ ವೈರಾಣುವಿನಿಂದ ವಿಶ್ವದಾದ್ಯಂತ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ನಗರದಲ್ಲಿ ಕೋವಿಡ್ ರೂಪಾಂತರಿಯನ್ನು ನಿಯಂತ್ರಿಸಲು ಯಾವ ರೀತಿ ಕಾರ್ಯೋನ್ಮುಖರಾಬೇಕು, ಯಾವೆಲ್ಲಾ ಬದಲಾವಣೆ ಮಾಡಬೇಕು ಎಂಬ ವಿಷಯಗಳ ಬಗ್ಗೆ ತಜ್ಞರು ಹಲವು ಸಲಹೆ/ಸೂಚನೆಗಳನ್ನು ನೀಡಿದರು.
ತಜ್ಞರ ಸಮಿತಿಯು ಸಭೆಯಲ್ಲಿ ನೀಡಿರುವ ಪ್ರಮುಖ ಸಲಹೆ-ಸೂಚನೆಗಳು:
• ವಿದೇಶದಿಂದ ಬರುವ ಪ್ರಯಾಣಿಕರಿಗೆ ಟೆಸ್ಟಿಂಗ್ ಮಾಡುವುದು, ಕ್ವಾರಂಟೈನ್ ಮಾಡುವುಡು, ಸಂಗ್ರಹಿಸಿರುವ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸುವುದು.
• ನಗರದಲ್ಲಿರುವ ಕಂಟೈನ್ಮೆಂಟ್ ಜೋನ್ ಗಳ ಮೇಲೆ ನಿಗಾವಹಿಸುವುದು.
• ಕ್ಲಸ್ಟರ್ ಗಳಾದರೆ ಅದರ ಮೇಲೆ ಹೆಚ್ಚು ಗಮನ ಹರಿಸುವುದು.
• ಸಭೆ-ಸಮಾರಂಭಗಳು, ಪಾರ್ಟಿ, ಕಾರ್ಯಕ್ರಮಗಳಲ್ಲಿ ಕೋವಿಡ್ ನಿಯಮಗಳನ್ನು ಅನುಸರಿಸಿ ಆದಷ್ಟು ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸುವುದು.
• ಅವಶ್ಯಕತೆ ಬಿದ್ದಲ್ಲಿ ಕೋವಿಡ್ ಟೆಸ್ಟಿಂಗ್ ಪ್ರಮಾಣವನ್ನು ಹೆಚ್ಚಿಸುವುದು.
• ನಗರದ ಉದ್ಯಾನ, ಚಿತ್ರಮಂದಿರ, ಮಾಲ್ ಸೇರಿದಂತೆ ಇನ್ನಿತರೆ ಸಾರ್ವಜನಿಕ ಸ್ಥಳಗಳಿಗೆ ಎರಡೂ ಡೋಸ್ ಲಸಿಕೆ ಪಡೆದವರಿಗೆ ಪ್ರವೇಶ ನೀಡುವುದು.
• ಹೊಸದಾಗಿ ಬಂದಿರುವ ಓಮೈಕ್ರಾನ್ ಹಾಗೂ ಇನ್ನಿತರೆ ವೈರಾಣು ಹರಡದಂತೆ ಪೂರ್ವ ಸಿದ್ದತೆ ಮಾಡಿಕೊಳ್ಳುವುದು.
• ಶಾಲೆಗಳಲ್ಲಿ ಕನಿಷ್ಠ ತಿಂಗಳಿಗೊಮ್ಮೆ ಶೇ.10 ರಷ್ಟು ಮಕ್ಕಳಿಗೆ ಪರೀಕ್ಷೆ ಮಾಡುವುದು ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಸಲಹೆ/ಸೂಚನೆಗಳನ್ನು ನೀಡಿದರು.
ತಜ್ಞರ ಸಮಿತಿ ನೀರಿಡಿರುವ ಸಲಹೆ/ಸೂಚನೆಗಳಿಗೆ ಸಂಬಂಧಿಸಿದಂತೆ ಸೂಕ್ತವಾಗಿರುವ ಅಂಶಗಳನ್ನು ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಗೆ ತರಲು ಮುಖ್ಯ ಆಯುಕ್ತರು ವಿಶೇಷ ಆಯುಕ್ತರಿಗೆ ಸೂಚನೆ ನೀಡಿದರು.
ನಗರದಲ್ಲಿ ಕೋವಿಡ್ ನಿಯಮಗಳನ್ನು ಅನುಸರಿಸುವ, ಪ್ರತಿಯೊಬ್ಬ ಅರ್ಹ ಫಲಾನುವಿಗಳು ಕಡ್ಡಾಯವಾಗಿ ಎರಡೂ ಡೋಸ್ ಪಡೆಯುವ ಸಂಬಂಧ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ(RWAs), ಹೋಟೆಲ್/ವ್ಯಾಪಾರಿ ಸೇರಿದಂತೆ ಇನ್ನಿತರೆ ಸಂಘಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲು ವಿಶೇಷ ಆಯುಕ್ತರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ವಿಶೇಷ ಆಯುಕ್ತರು(ಆರೋಗ್ಯ) ಡಾ. ತ್ರಿಲೋಕಚಂದ್ರ, ಮುಖ್ಯ ಆರೋಗ್ಯಾಧಿಕಾರಿಗಳಾದ ಡಾ. ಬಾಲಸುಂದರ್, ನಿರ್ಮಲಾ ಬುಗ್ಗಿ, ಕೋವಿಡ್‌ಗಾಗಿ ಸಮಿತಿ ಸದಸ್ಯರು ಹಾಗೂ ಇತರರು.