Publish Date: Fri, 31 Mar 2017 (13:06 IST)
Updated Date: Fri, 31 Mar 2017 (13:18 IST)
ಗುತ್ತಿಗೆದಾರರಿಂದ ಲಂಚ ಸ್ವೀಕರಿಸುವಾಗ ಕಾರ್ಪೊರೇಟರ್ ಒಬ್ಬರು ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕಾರ್ಪೊರೇಟರ್ ಜಿ. ಕೃಷ್ಣಮೂರ್ತಿ 15 ಲಕ್ಷ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಗುತ್ತಿಗೆದಾರ ಧನಂಜಯನಾಯ್ಡುಗೆ 3 ಕೋಟಿ ರೂಪಾಯಿ ಗುತ್ತಿಗೆ ಹಣದ ಬಿಡುಗಡೆಗೆ ಕಾರ್ಪೊರೇಟರ್ 23 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಇದರ ಮೊದಲ ಕಂತಾಗಿ 10 ಲಕ್ಷ ಸ್ವೀಕರಿಸುವಾಗ ಬಲೆಗೆ ಬಿದ್ದಿದ್ದಾರೆ. ಇದರ ತೆಗೆ ಕೃಷ್ಣಮೂರ್ತಿ ಮನೆಯಲ್ಲಿ ಇನ್ನಷ್ಟು ಹಣ ಎಸಿಬಿಗೆ ಸಿಕ್ಕಿದೆ
ಎಸಿಬಿ ಎಸ್ಪಿ ಗಿರೀಶ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಕಾರ್ಪೊರೇಟರ್ ಮತ್ತು ಡೀಲ್`ಗೆ ಸಹಕರಿಸಿದ ಎಇಇ ಒಬ್ಬರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.