Select Your Language

Notifications

webdunia
webdunia
webdunia
Saturday, 5 April 2025
webdunia

ಯಲಹಂಕ ವಲಯದ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿದ ಬಿಬಿಎಂಪಿ ಆಯುಕ್ತ ಮೊಹ್ಮದ್

ಯಲಹಂಕ ವಲಯ
bangalore , ಮಂಗಳವಾರ, 7 ನವೆಂಬರ್ 2023 (14:22 IST)
ಯಲಹಂಕ ವಲಯ ಬಿಬಿಎಂಪಿ  ಅಯುಕ್ತ ಮೊಹ್ಮದ್ ನಯೀಮ್ ಕೋಗಿಲು ಸರ್ಕಲ್ ತಗ್ಗು ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಕೋಗಿಲು ಜಂಕ್ಷನ್ ಜಲಾವೃತವಾಗಿದೆ.ಏರ್ಪೋರ್ಟ್ ರಸ್ತೆ ಸಂಪರ್ಕ ಕಲ್ಪಿಸುವ ಕೋಗಿಲು ಸರ್ಕಲ್ ಜಾಮ್ ನಿಂದ ಪ್ರಯಾಣಿಕರ‌ ಪರದಾಟ ನಡೆಸಿದ್ದಾರೆ.

ಯಲಹಂಕದ ಕೆಂಪೇಗೌಡ ವಾರ್ಡ್ ಮತ್ತು ಚೌಡೇಶ್ವರಿ ವಾರ್ಡ್ ಗಳ ಜನರಿಗೆ ತೀವ್ರ ಸಂಕಷ್ಟ ಉಂಟಾಗಿದೆ.ಯಲಹಂಕ, ದೇವನಹಳ್ಳಿ, ಏರ್ಪೋರ್ಟ್, ಚಿಕ್ಕಬಳ್ಳಾಪುರ,ಶಿಡ್ಲಘಟ್ಟ, ವಿಜಯಪುರ ಗಳಿಗೆ ತೆರಳುವ ಜನ ಕೋಗಿಲು ಜಂಕ್ಷನ್ ಮೂಲಕವೆ ತೆರಳಬೇಕು.ಜಂಕ್ಷನ್ ಜಲಾವೃತ ಆದ ಕಾರಣ ಏರ್ಪೋರ್ಟ್ ಪ್ರಯಾಣಿಕರಿಗೂ ತೀವ್ರ ಸಂಕಷ್ಟ ಉಂಟಾಗಿದೆ.ಇದೀಗ ಸಮಸ್ಯೆಗಳ ಆಗರ ಕೋಗಿಲು ಜಂಕ್ಷನ್ ವಲಯ ಬಿಬಿಎಂಪಿ ಆಯುಕ್ತ ಮೊಹ್ಮದ್ ನಯೀಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಧಾನಿಯಲ್ಲಿ ನಿನ್ನೆ ಸುರಿದ ಭಾರಿ‌ ಮಳೆ