ವೀಕೆಂಡ್ ಕರ್ಫ್ಯೂ ತೆರವು ಪೊಲೀಸ್ ಬಿಬಿಎಂಪಿ ಕಮಿಷನೇರ್ ಸಭೆ

Webdunia
ಶುಕ್ರವಾರ, 21 ಜನವರಿ 2022 (14:56 IST)
ವೀಕೆಂಡ್​​​ ಕರ್ಫ್ಯೂ ಸಭೆ ಮುನ್ನ ಪೂರ್ವಭಾವಿಯಾಗಿ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಬಿಬಿಎಂಪಿ ಆಯುಕ್ತ, ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್ ಹಾಗೂ ಬೆಂಗಳೂರು ಡಿಸಿ ಸಭೆ ನಡೆಸಿದ್ದಾರೆ.
ವಾರಂತ್ಯದ ಕರ್ಫ್ಯೂ ಬಗ್ಗೆ ಇಂದು ರಾಜ್ಯ ಸರ್ಕಾರವು ಸಭೆ ನಡೆಸುತ್ತಿದ್ದು, ಪೂರ್ವಭಾವಿಯಾಗಿ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ, ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್ ಹಾಗೂ ಬೆಂಗಳೂರು ಡಿಸಿ ಮಂಜುನಾಥ್ ಸಭೆ ನಡೆಸಿದ್ದಾರೆ.
ಮಾಧ್ಯಮಗಳೊಂದಿಗೆ ಬಿಬಿಎಂಪಿ ಕಮಿಷನರ್ ಹಾಗೂ ಪೊಲೀಸ್ ಕಮೀಷನರ್
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗೌರವ್ ಗುಪ್ತ, ಸಿಎಂ ಜೊತೆಯಲ್ಲಿ ಸಭೆಯಿದೆ. ಈ ಹಿನ್ನೆಲೆಯಲ್ಲಿ ಪೂರ್ವಾಭಾವಿಯಾಗಿ ಸಭೆಯನ್ನು ಮಾಡಿದ್ವಿ. ಯಾವ್ಯಾವ ಕ್ರಮಕೈಗೊಳ್ಳುವುದರ ಬಗ್ಗೆ ತೀರ್ಮಾನ ಮಾಡಬೇಕಿದೆ. ನಮ್ಮ ಸಲಹೆಯನ್ನು ಮುಖ್ಯಮಂತ್ರಿ ಅವರ ಮುಂದೆ ಇಡ್ತೀವಿ. ವೀಕೆಂಡ್​​​ ಕರ್ಫ್ಯೂ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ಆಧರಿಸಿ ನಮ್ಮ‌ ಸಲಹೆಗಳನ್ನು ಸಭೆಯಲ್ಲಿ ತಿಳಿಸುವುದಾಗಿ ಹೇಳಿದರು.
ಕಮಲ್ ಪಂತ್​​ ಮಾತನಾಡಿ, ನಮ್ಮ ಸಲಹೆಗಳು ಏನು ಇಲ್ಲ. ತಜ್ಞರು ಏನು ಮಾತನಾಡ್ತಾರೆ ನೋಡಿಕೊಂಡು ನಾವು ಅಭಿಪ್ರಾಯ ಹೇಳ್ತೀವಿ. ಸರ್ಕಾರ ಯಾವ ಕ್ರಮಕೈಗೊಳ್ಳಲಿ ಅಂತಾರೆ ಅದನ್ನ ತೆಗೆದುಕೊಳ್ಳುತ್ತೇವೆ. ಸರ್ಕಾರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಮಾಡ್ತೀವಿ‌. ನಮ್ಮ ಮಾಹಿತಿಯನ್ನು ಮುಂದೆ ಇಡ್ತೀವಿ, ವೀಕೆಂಡ್ ಕರ್ಫ್ಯೂ ಬಗ್ಗೆ ತಜ್ಞರು ವರದಿ ಕೊಡ್ತಾರೆ.
ನೈಟ್ ಕರ್ಫ್ಯೂ ಬಗ್ಗೆಯೂ ಮಾತನಾಡ್ತಾ ಇದ್ದೀವಿ ಸರ್ಕಾರದ ನಿರ್ಧಾರಕ್ಕೆ ನಾವು ಬದ್ಧ ಎಂದು ತಿಳಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರೈಲಿನ ಎಸಿ ಕೋಚ್‌ನಲ್ಲಿ ಕೆಟಲ್‌ನಲ್ಲಿ ನೂಡಲ್ಸ್ ಮಾಡಿದ ಮಹಿಳೆಗೆ ಇದೀಗ ಢವಢವ

ನವೆಂಬರ್ ಕ್ರಾಂತಿ ಬಿಸಿ ನಡುವೆ ಹೊಸ ಬಾಂಬ್ ಸಿಡಿಸಿದ ಎಚ್ ಡಿ ಕುಮಾರಸ್ವಾಮಿ

ORS ಬ್ರ್ಯಾಂಡ್‌ನ ಪೇಯಗಳನ್ನು ಹಿಂಪಡೆಯಲು FSSAI ಸೂಚನೆ

ಡಿಕೆ ಬ್ರದರ್ಸ್ ತಲೆ ಮೇಲೆ ಕೈಯಿಟ್ಟು ಆಣೆ ಮಾಡಿದ್ರು ಸಿದ್ದರಾಮಯ್ಯ: ಎಚ್ ವಿಶ್ವನಾಥ್ ಹೊಸ ಬಾಂಬ್

ಎಟಿಎಂ ವ್ಯಾನ್‌ನ 7.11 ಕೋಟಿ ದರೋಡೆ ಪ್ರಕರಣ, ತನಿಖೆಯಲ್ಲಿ ಮಹತ್ವದ ಬೆಳವಣಿಗೆ

ಮುಂದಿನ ಸುದ್ದಿ
Show comments