Select Your Language

Notifications

webdunia
webdunia
webdunia
webdunia

ಗ್ಯಾರಂಟಿ ಬೇಡ ಎನ್ನಿ ಎಂದ ಬಸವರಾಜ ರಾಯರೆಡ್ಡಿ: ಈ ಕಂಡೀಷನ್ ಮೊದ್ಲೇ ಹೇಳ್ಬೇಕಿತ್ತು ಎಂದ ಜನ

Basavaraja Rayareddy

Krishnaveni K

ಬೆಂಗಳೂರು , ಸೋಮವಾರ, 7 ಜುಲೈ 2025 (11:05 IST)
ಬೆಂಗಳೂರು: ಗ್ಯಾರಂಟಿ ಬೇಡ ಎನ್ನಿ, ನಿಮಗೆ ಅದೇ ದುಡ್ಡಲ್ಲಿ ರಸ್ತೆ ಮಾಡಿಸ್ತೀವಿ ಎಂದು ಶಾಸಕ ಬಸವರಾಜ ರಾಯರೆಡ್ಡಿಗೆ ಜನ ಸೋಷಿಯಲ್ ಮೀಡಿಯಾದಲ್ಲಿತಿರುಗೇಟು ನೀಡಿದ್ದಾರೆ. ಈ ಕಂಡೀಷನ್ ಚುನಾವಣೆಗೆ ಮೊದಲೇ ಹೇಳಬೇಕಿತ್ತು ಎಂದಿದ್ದಾರೆ.
 

ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಬಸವರಾಜ ರಾಯರೆಡ್ಡಿ ಈ ಎಡವಟ್ಟು ಮಾಡಿದ್ದರು. ಗ್ಯಾರಂಟಿ ಬೇಡ ಎನ್ನಿ, ಅದೇ ದುಡ್ಡರಲ್ಲಿ ರಸ್ತೆ ಕಾಮಗಾರಿ ಮಾಡಿಕೊಡ್ತೀವಿ ಎಂದು ಹೇಳಿಕೆ ನೀಡಿದ್ದರು. ಅವರ ಹೇಳಿಕೆ ವಿಪಕ್ಷಗಳಿಗೆ ಅಸ್ತ್ರವಾಗಿತ್ತು.

ಸಾರ್ವನಿಕರೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವೇನು ಗ್ಯಾರಂಟಿ ಕೊಡಿ ಎಂದು ಕೇಳಿದ್ವಾ? ನೀವಾಗಿಯೇ ಗ್ಯಾರಂಟಿ ಕೊಡ್ತೀವಿ ಎಂದು ಅಧಿಕಾರಕ್ಕೆ ಬಂದ್ರಿ. ಇದೇ ಕಂಡೀಷನ್ ಚುನಾವಣೆಗೂ ಮೊದಲೇ ಹೇಳಬೇಕಿತ್ತು. ಹಣವಿಲ್ಲ ಎಂದರೆ ಗ್ಯಾರಂಟಿ ಯೋಜನೆ ಕೊಡ್ತೀವಿ ಎಂದಿದ್ದೇಕೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು, ವಿವಾದದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಲ್ಲ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂತೂ ಮುಖ್ಯಮಂತ್ರಿ ಪಟ್ಟ ಬಿಡುವ ಕಾಲ ಬಂತು: ನೆಟ್ಟಿಗರಿಂದ ಸಿದ್ದರಾಮಯ್ಯ ಟ್ರೋಲ್