Webdunia - Bharat's app for daily news and videos

Install App

ಹಿಂದೂ ದೇವಾಲಯಗಳಿಗೆ ಭೇಟಿ ಕೊಡೋದು, ಅಧಿಕಾರ ಸಿಕ್ಕಾಗ ಸಾಬ್ರರ ಅಭಿವೃದ್ಧಿ ಮಾಡೋದು: ಬಸನಗೌಡ ಯತ್ನಾಳ್

Krishnaveni K
ಶನಿವಾರ, 28 ಸೆಪ್ಟಂಬರ್ 2024 (09:50 IST)
ಬೆಂಗಳೂರು: ಅಧಿಕಾರ ಹಿಡಿಯಲು ಹಿಂದೂ ದೇವಾಲಯಗಳಿಗೆ ಭೇಟಿ ಕೊಡೋದು, ಅಧಿಕಾರ ಸಿಕ್ಕಾಗ ಸಾಬ್ರರ ಅಭಿವೃದ್ಧಿ ಮಾಡೋದು ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಮುಂದಿನ ಸಲ ಗಣೇಶ ಹಬ್ಬಕ್ಕೆ ಗಣೇಶ ಕೂರಿಸಲು ಪರ್ಮಿಷನ್ ಬೇಡ. ಯಾಕೆಂದರೆ ಮುಂದಿನ ಸಲ ನಾವೇ ಅಧಿಕಾರದಲ್ಲಿರ್ತೇವೆ. ನಾವು ಅಧಿಕಾರಕ್ಕೆ ಬಂದ ಮೇಲೆ ಗಣೇಶ ಹಬ್ಬಕ್ಕೆ ಫುಲ್ ಸೆಕ್ಯುರಿಟಿ ಕೊಡ್ತೇವೆ. ಅವರ ಕೆಲಸ ಮಸೀದಿಯಿಂದ ಕಲ್ಲು ತೂರಾಟವಾಗದಂತೆ ನೋಡಿಕೊಳ್ಳೋದು ಅಷ್ಟೇ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೆಳಿದ್ದಾರೆ.

ನಾನೇನಾದರೂ ಮುಖ್ಯಮಂತ್ರಿಯಾದರೆ ಪೊಲೀಸರಿಗೆ ಎಕೆ47 ಗನ್ ಕೊಡ್ತೇನೆ. ಯಾರದ್ರೂ ಪಾಕಿಸ್ತಾನ್ ಜಿಂದಾಬಾದ್ ಎನ್ನಬೇಕು. ಅಲ್ಲಿಗೇ ಅವರ ಕತೆ ಮುಗಿಯುತ್ತದೆ. ಪಾಕಿಸ್ತಾನ್ ಜಿಂದಾಬಾದ್ ಎನ್ನುವವರು ಅಲ್ಲಿಗೇ ಹೋಗಲಿ ಎಂದು ಯತ್ನಾಳ್ ಖಡಕ್ ಆಗಿ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ, ಇಲ್ಲಿ ನಾವು ಇರ್ತೇವೆ ಎಂದು ಗುಡುಗಿದ್ದಾರೆ.

ಇನ್ನು, ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿರುವ ಯತ್ನಾಳ್, ಸಿದ್ದರಾಮಯ್ಯನವರು ಹಿಂದೂ ದೇವಾಲಯಗಳಿಗೆ ಹೋದರೆ ಕುಂಕುಮ ಇಟ್ಟುಕೊಳ್ಳಲೂ ಹಿಂದು ಮುಂದೆ ನೋಡುತ್ತಾರೆ. ಅದೇ ಸಾಬ್ರರ ಅಭಿವೃದ್ಧಿಗೆ 10 ಸಾವಿರ ಕೋಟಿ ಮೀಸಲಿಡುತ್ತೇನೆ ಅಂತಾರೆ. ನಾವು ಹಿಂದೂಗಳೆಲ್ಲಾ ಒಗ್ಗಟ್ಟಾಗಬೇಕು ಎಂದು ಯತ್ನಾಳ್ ಕರೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೊಹ್ಲಿ, ಅನುಷ್ಕಾ ಆಶೀರ್ವಾದ ಪಡೆದಿದ್ದ ಪ್ರೇಮಾನಂದ ಮಹಾರಾಜ್ ಬಾಯಿಂದ ಇದೆಂಥಾ ಮಾತು

ಆಪರೇಷನ್ ಸಿಂದೂರ್‌ನಿಂದ ಪಾಕ್‌ ಉಗ್ರರರು ಇನ್ನೂ ನಿದ್ರೆಯಿಲ್ಲದ ರಾತ್ರಿ ಕಳೆಯುತ್ತಿದ್ದಾರೆ: ಮೋದಿ

ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಕಿರುಕುಳ: ಸಕಲೇಶಪುರ ವ್ಯಕ್ತಿ ಅರೆಸ್ಟ್‌

ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ವಿಜಯೇಂದ್ರ ಮೋದಿ ಮನೆ ಮುಂದೆ ಪ್ರತಿಭಟಿಸಲಿ: ಶಿವರಾಜ ತಂಗಡಗಿ

ಕಲಾಸಿಪಾಳ್ಯ ಬಿಎಂಟಿಸಿ ಬಸ್ ಸ್ಟ್ಯಾಂಡ್‌ನಲ್ಲಿ ಸ್ಪೋಟಕ ಪತ್ತೆ ಕೇಸ್: ಮೂವರು ಅರೆಸ್ಟ್

ಮುಂದಿನ ಸುದ್ದಿ
Show comments