Webdunia - Bharat's app for daily news and videos

Install App

ರಾಹುಲ್ ಗಾಂಧಿ ಅರೆಹುಚ್ಚ, ಜಿಲೇಬಿ ಫ್ಯಾಕ್ಟರಿ ಮಾಡ್ತಾನಂತ: ಬಸನಗೌಡ ಪಾಟೀಲ್ ಯತ್ನಾಳ್

Krishnaveni K
ಶುಕ್ರವಾರ, 8 ನವೆಂಬರ್ 2024 (16:31 IST)
ಶಿಗ್ಗಾಂವಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಮತ್ತೊಮ್ಮೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿಯನ್ನು ಅರೆಹುಚ್ಚ ಎಂದಿದ್ದಾರೆ.

ಶಿಗ್ಗಾಂವಿಯಲ್ಲಿ ಇಂದು ಭರತ್ ಬೊಮ್ಮಾಯಿ ಪರ ಪ್ರಚಾರ ಮಾಡಿದ ಬಸನಗೌಡ ಪಾಟೀಲ್ ಯತ್ನಾಳ್ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ‘ರಾಹುಲ್ ಗಾಂಧಿಯಂತಹ ಅರೆಹುಚ್ಚನ ಬಗ್ಗೆ ಏನು ಮಾತಾಡೋದು. ಜಿಲೇಬಿ ಕಾ ಫ್ಯಾಕ್ಟಿ ಬನೂಂಗಾ ಅಂತಾನೆ. ಏನು ಹೊಲದಾಗೆ ಬದನೆಕಾಯಿ ತೆಗೆದಾಂಗೆ ಅನ್ಕೊಂಡಾನಾ’ ಎಂದು ವ್ಯಂಗ್ಯ ಮಾಡಿದ್ದಾರೆ.

‘ಇದಕ್ಕೆ ಮೊದಲು ಆಲೂಗಡ್ಡೆಯಿಂದ ಚಿನ್ನ ತೆಗೀತೀನಿ ಅಂದಿದ್ದ. ಇಂತಹ ವ್ಯಕ್ತಿ ಹೋಗಿ ನಮ್ಮ ದೇಶ ಆಳುತ್ತಾನಂತೆ’ ಎಂದು ರಾಹುಲ್ ವಿರುದ್ಧ ಯತ್ನಾಳ್ ವ್ಯಂಗ್ಯ ಮಾಡಿದ್ದಾರೆ. ಈ ಹಿಂದೆಯೂ ಇದೇ ರೀತಿ ರಾಹುಲ್ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ್ದಕ್ಕೆ ಯತ್ನಾಳ್  ವಿರುದ್ಧ ಕೇಸ್ ದಾಖಲಾಗಿತ್ತು.

ಇಂದು ತಮ್ಮ ವ್ಯಂಗ್ಯ  ಭರಿತ ಶೈಲಿಯಲ್ಲಿ ಮಾತನಾಡಿದ ಯತ್ನಾಳ್, ಸಿದ್ದರಾಮಯ್ಯಗೂ ಟಾಂಗ್ ಕೊಟ್ಟರು. 2000 ರೂ. ಫ್ರೀ ಕೊಡೋದು ಅಲ್ಲ. ದುಡಿದು ತಿನ್ನಲು ಮಾರ್ಗ ತೋರಿಸಬೇಕು ಎಂದರು. ಅಲ್ಲದೆ, ಉಚಿತ ಬಸ್ ಗ್ಯಾರಂಟಿ ನಿಲ್ಲಿಸುವ ಘೋಷಣೆ ಮಾಡಿದ್ದ ಡಿಕೆ ಶಿವಕುಮಾರ್ ಹೇಳಿಕೆ ಪ್ರಸ್ತಾಪಿಸಿದ ಯತ್ನಾಳ್, ದುಡ್ಡಿದ್ದಷ್ಟೇ ಫ್ರೀ ಕೊಡಬೇಕು. ಇಲ್ಲಾಂದ್ರೆ  ಹೀಗೇ ಆಗೋದು ಎಂದು ಕಾಲೆಳೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments