ರಾಜಕೀಯಕ್ಕೆ ಬರ್ತಾರಾ ಪ್ರೇಮ್..?

Webdunia
ಭಾನುವಾರ, 20 ಫೆಬ್ರವರಿ 2022 (10:09 IST)
ಬೆಂಗಳೂರು : ಭವಿಷ್ಯದಲ್ಲಿ ರಾಜಕೀಯಕ್ಕೆ ಬರಲು ಅವಕಾಶ ಸಿಕ್ಕರೆ ನೋಡೋಣ ಎನ್ನುವ ಮೂಲಕ ರಾಜಕೀಯ ಪ್ರವೇಶದ ಬಗ್ಗೆ ಚಂದನವನದ ನಟ, ನಿರ್ದೇಶಕ ಪ್ರೇಮ್ ಸುಳಿವನ್ನು ನೀಡಿದರು.

‘ಏಕ್ ಲವ್ ಯಾ’ ಸಿನಿಮಾ ಪ್ರಚಾರಕ್ಕಾಗಿ ಬಂದ ಪ್ರೇಮ್ ರಾಜಕೀಯ ಎಂಟ್ರಿ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನಾವು ಚುನಾವಣೆಗೆ ನಿಲ್ಲದಿದ್ದರೂ, ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ.

ಪ್ರೇಮ್ ಫೌಂಡೇಶನ್ ಟ್ರಸ್ಟ್ ಮಾಡಿದ್ದೇವೆ. ಈ ಮೂಲಕ ಹಲವು ಜನರಿಗೆ ಸಹಾಯ ಮಾಡಿದ್ದೇವೆ. ನನ್ನ ತಾಯಿ ಹೆಸರಲ್ಲಿ ವಿದ್ಯಾರ್ಥಿಗಳಿಗೆ, ರೈತರಿಗಾಗಿ ಸಹಾಯ ಮಾಡಿದ್ದೇವೆ. ಇದನ್ನು ನಾವು ಹೇಳಿಕೊಳ್ಳಬೇಕು ಎಂಬುದಿಲ್ಲ ಎಂದು ತಿಳಿಸಿದರು.

ಸಮಾಜಸೇವೆ ಎಂದರೆ ಜನರು ಇರುವಲ್ಲಿಗೆ ಹೋಗಿ ಮಾಡಬೇಕು ಎಂದು ಇಲ್ಲ. ನಮ್ಮ ಕೈಯಲ್ಲಿ ಆದ ಸಹಾಯವನ್ನು ನಾವು ಮಾಡುತ್ತಿದ್ದೇವೆ. ಅದಕ್ಕೆ ರಾಜಕೀಯಕ್ಕೆ ಬಂದು ಮಾಡಬೇಕು ಎಂಬುದಿಲ್ಲ ಎಂದು ನಕ್ಕರು.

ರಾಜಕೀಯ ವಿಷಯಕ್ಕೆ ಬಂದ್ರೆ. ನಾನು ಮಂಡ್ಯದಲ್ಲಿ ಚುನಾವಣೆಗೆ ನಿಲ್ಲುತ್ತೇನೆ ಎಂದೇ ಎಷ್ಟೋ ಜನರು ಹೇಳುತ್ತಿದ್ದರು. ಆದರೆ ಅಲ್ಲಿ ನನ್ನ ಅಣ್ಣ ರೆಬೆಲ್ ಸ್ಟಾರ್ ಅಂಬಿ ಇರುವವರೆಗೂ ನಾನು ಆ ಕ್ಷೇತ್ರದಲ್ಲಿ ನಿಲ್ಲುವುದಿಲ್ಲ ಎಂಬುದು ಸಹ ಎಲ್ಲರಿಗೂ ತಿಳಿದಿತ್ತು. ಅವರಿಟ್ಟ ಹೆಜ್ಜೆಯನ್ನು ನಾವು ತುಳಿಯುವುದಕ್ಕೆ ಆಗುವುದಿಲ್ಲ. ಅವರು ಮಹಾನ್ ವ್ಯಕ್ತಿ. ಭವಿಷ್ಯದಲ್ಲಿ ಏನಾದರೂ ಅವಕಾಶ ಬಂದ್ರೆ ನೋಡೋಣ ಎಂದು ರಾಜಕೀಯಕ್ಕೆ ಎಂಟ್ರಿ ಬಗ್ಗೆ ಸುಳಿವನ್ನು ಕೊಟ್ಟರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳದ ಸೌಜನ್ಯಾ ಪ್ರಕರಣ: ಸಿಬಿಐ ತನಿಖಾ ವೈಖರಿಗೆ ಸುಪ್ರೀಂ ಕೆಂಡಾಮಂಡಲ, ಮರು ತನಿಖೆಗೆ ತಾತ್ವಿಕ ಒಪ್ಪಿಗೆ

ಕಳೆದ ದಶಕದಲ್ಲಿ 152 ಬಾರಿ ಪ್ರಶ್ನೆಪತ್ರಿಕೆ ಸೋರಿಕೆ: ರಾಹುಲ್ ಗಾಂಧಿ

ಶಾಲಾ ಬಸ್ ಮೇಲೆ ಬಿದ್ದ ಬೃಹತ್ ಮರ, ಯುಕೆಜಿ ಬಾಲಕಿ ಸಾವು, ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

NEET UG Paper Leak: ಸರ್ಕಾರ ಚರ್ಚೆಗೆ ಸಿದ್ಧವಿದ್ದರೂ ಹೊಸ ಷರತ್ತುಗಳನ್ನು ಹಾಕಬಾರದು

ಜಂತರ್‌ ಮಂತರ್‌ನಲ್ಲಿ ಲಾಠಿಚಾರ್ಜ್‌ ವೇಳೆ ಹೆಣ್ಣುಮಕ್ಕಳನ್ನು ಅಸಭ್ಯವಾಗಿ ಮುಟ್ಟಿಲಾಗಿದೆ: ಬಿಕೆ ಹರಿಪ್ರಸಾದ್

ಮುಂದಿನ ಸುದ್ದಿ
Show comments