Webdunia - Bharat's app for daily news and videos

Install App

ಬೈಕ್ ಅಡ್ಡಗಟ್ಟಿ ವ್ಯಕ್ತಿಯ ಬರ್ಬರ ಹತ್ಯೆ

Webdunia
ಗುರುವಾರ, 23 ಫೆಬ್ರವರಿ 2023 (19:46 IST)
ಅದು ಫೆಬ್ರವರಿ 22 ,ರಾತ್ರಿ 8.20 ರ ಸಮಯ.ತನ್ನ ಮನೆಗೆ ಬಂದ ವ್ಯಕ್ತಿ ತರಕಾರಿ ಬ್ಯಾಗ್ ಮಗಳ ಕೈಗೆ ಕೊಟ್ಟಿದ್ದ‌.ಅರ್ಜೆಂಟ್ ಕೆಲಸ ಇದೆ ಹೋಗಿಬರ್ತಿನಿ ಅಂತಾ ಹೋದವನು,ವಾಪಸ್ಸು ಬಂದಿದ್ದು ಮಾತ್ರ ಹೆಣವಾಗಿ ನೆತ್ತರು..ಬಿಸಿ ನೆತ್ತರು..ರಸ್ತೆ ಮೇಲೆ ರಕ್ತದ ಕೋಡಿಯೇ ಹರಿದಿದೆ..ಪಕ್ಕದಲ್ಲೇ ವ್ಯಕ್ತಿಯೊಬ್ಬ ಹೆಣವಾಗಿ ಮಲಗಿದ್ದಾನೆ‌.ಪೊಲೀಸರ ತಂಡವೇ ಬಂದಿದ್ದು ಇಂಚಿಂಚು ಶೋಧಿಸುತ್ತಿದೆ.ಮನೆಗೆ ತರಕಾರಿ ಕೊಟ್ಟು ಬಂದವನು ಹೆಣವಾಗಿ ಹೋಗಿದ್ದಾನೆ.ಹೀಗೆ ರಕ್ತದ ಮಡುವಲ್ಲಿ ಶವವಾಗಿ ಬಿದ್ದವನ ಹೆಸರು ದಿನೇಶ್ ಕುಮಾರ್.ಮಂಗನಹಳ್ಳಿಯ ಬಾಡಿಗೆ ಮನೆಯೊಂದರಲ್ಲಿ ಪತ್ನಿ ಹಾಗೂ ಮಕ್ಕಳ ಜೊತೆಗಿದ್ದ ದಿನೇಶ್ ಕಾರ್ಪೆಂಟರ್ ಹಾಗೂ ಮನೆ ತೋರಿಸುವ ಬ್ರೋಕರ್ ಆಗಿ ಕೆಲಸ ಮಾಡಿಕೊಂಡಿದ್ದ.

ಹೌದು..ರಾತ್ರಿ 9 ಗಂಟೆಯ ಸಮಯ..ಜ್ಙಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಸರ್.ಎಂ ವಿಶ್ವೇಶ್ವರಯ್ಯ ಲೇಔಟ್ ನ ದೊಡ್ಡಬಸ್ತಿ ರಸ್ತೆಯಲ್ಲಿರುವ ನಿರ್ಜನ ಪ್ರದೇಶ.ಬೈಕ್ ನಲ್ಲಿ ತೆರಳ್ತಿದ್ದ ದಿನೇಶ್ ನನ್ನ ಆರೋಪಿಗಳು ಅಡ್ಡಗಟ್ಟಿದ್ದಾರೆ‌‌.ಲಾಂಗ್ ನಿಂದ ಹಲ್ಲೆ ಮಾಡಿದ್ದು ಕತ್ತು ಸೀಳಿ ಕೊಲೆಗೈದಿದ್ದಾರೆ.ನಂತರ ಪಕ್ಕದಲ್ಲೇ ಲಾಂಗ್ ಬಿಸಾಡಿ ಪರಾರಿಯಾಗಿದ್ದಾರೆ.ಮನೆಯಲ್ಲಿ ಅರ್ಜೆಂಟ್ ಕೆಲಸ ಇದೆ.ಹೊರಗೆ ಹೋಗಿಬರ್ತಿನಿ ಅಂತಾ ಹೋದವನು ಹೆಣವಾಗಿ ಹೋಗಿದ್ದಾನೆ.

 
ವಿಚಾರಗೊತ್ತಾಗ್ತಿದ್ದಂತೆ ಸ್ಥಳಕ್ಕಾಗಮಿಸಿದ ಜ್ಙಾನಭಾರತಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಕೊಲೆ‌ ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.ಈ ವೇಳೆ ಕೊಲೆಗೂ ಮುನ್ನ  ದಿನೇಶ್ ಗೆ ಬಾಪೂಜಿನಗರ ನಿವಾಸಿ ಪೇಂಟರ್ ಆಗಿದ್ದ ಅರುಣ್ ಎಂಬಾತ ನಾಲ್ಕೈದು ಬಾರಿ ಕರೆ ಮಾಡಿದ್ದ.ಆದ್ರೆ ಈಗ ಫೋನ್ ಸ್ವಿಚ್ ಆಫ್ ಆಗಿದ್ದು ಮನೆ ಬಿಟ್ಟು ತೆರಳಿದ್ದಾನೆ.ಹಾಗಾಗಿ ಅರುಣ್ ಮೇಲೆ ಅನುಮಾನ ವ್ಯಕ್ತವಾಗಿದ್ದು ಆತನ ಪತ್ತೆಗಾಗಿ ಬಲೆ ಬೀಸಿದ್ದಾರೆ.

ದಿನೇಶ್ ಪತ್ನಿ‌‌ ಲಕ್ಷ್ಮಿ ನೀಡಿದ ದೂರಿನ ಆಧಾರದ ಮೇಲೆ ಜ್ಙಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ತನಿಖೆ ಮುಂದುವರೆದಿದೆ.ಏನೆ ಹೇಳಿ ಅರ್ಜೆಂಟ್ ಕೆಲಸ ಇದೆ ಹೋಗಿ ಬರ್ತಿನಿ ಅಂತಾ ಹೋದವನು ಹೆಣವಾಗಿಹೋಗಿದ್ದು ಮಾತ್ರ ನಿಜಕ್ಕೂ ವಿಪರ್ಯಾಸ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗಿದ್ದಕ್ಕೆ ರಮ್ಯಾಗೆ ಖುಷಿ

ನಾವು ಬೀದಿಗಿಳಿದರೆ ನಿಮ್ಮನ್ನು ಮನೆಗೆ ಕಳುಹಿಸಲು ನಮಗೆ ಗೊತ್ತಿದೆ:ಎ.ನಾರಾಯಣಸ್ವಾಮಿ

ಧರ್ಮಸ್ಥಳದಲ್ಲಿ ಅಗೆಯುವ ಸ್ಥಳದಲ್ಲಿ ಇವರಿಂದಲೇ ಪೊಲೀಸರಿಗೆ ದೊಡ್ಡ ಸಮಸ್ಯೆ

ನ್ಯಾಯಾಧೀಶರು ತೀರ್ಪು ಪ್ರಕಟಿಸುತ್ತಿದ್ದಂತೇ ಪ್ರಜ್ವಲ್ ರೇವಣ್ಣ ಏನು ಮಾಡಿದ್ರು

ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಮಹತ್ವದ ತೀರ್ಪು ಕೊಟ್ಟ ಕೋರ್ಟ್

ಮುಂದಿನ ಸುದ್ದಿ
Show comments