ದರೋಡೆಕೋರರ ಬೆಂಗಳೂರೇ, ಹಳ್ಳದ ಬೆಂಗಳೂರೇ, ಕಸದ ಬೆಂಗಳೂರೇ: ಆರ್.ಅಶೋಕ್

Sampriya
ಶುಕ್ರವಾರ, 21 ನವೆಂಬರ್ 2025 (18:47 IST)
ಬೆಂಗಳೂರು: ಇದು ದರೋಡೆಕೋರರ ಬೆಂಗಳೂರೇ, ಹಳ್ಳದ ಬೆಂಗಳೂರೇ ಅಥವಾ ಕಸದ ಬೆಂಗಳೂರೇ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ ಅವರು ಪ್ರಶ್ನೆ ಹಾಕಿದ್ದಾರೆ. 

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವರು ಅಧಿಕಾರ ಹಂಚಿಕೆಯಲ್ಲಿದ್ದಾರೆ. ಹಳ್ಳ ಗುಂಡಿಗಳ ಕಡೆ ಗಮನ ಕೊಡುತ್ತಿಲ್ಲ; ಇದು ದುರಹಂಕಾರದ ಪರಮಾವಧಿ ಎಂದು ಟೀಕಿಸಿದರು. ಇಡೀ ಕರ್ನಾಟಕದಲ್ಲಿ ಹಳ್ಳ ಬಿದ್ದ ರಸ್ತೆಗಳು, ಕಸದ ರಾಶಿ, ಅಭಿವೃದ್ಧಿ ಶೂನ್ಯ, ಲೂಟಿ- ಇಷ್ಟೇನಾ ನಿಮ್ಮ ಎರಡೂವರೆ ವರ್ಷದ ಸಾಧನೆ ಎಂದು ಕೇಳಿದರು.

ಮಾನ ಮರ್ಯಾದೆ ಇದ್ದರೆ ಗುಂಡಿ ಮುಚ್ಚಬೇಕು. ರಸ್ತೆ ಡಾಂಬರೀಕರಣ ಮಾಡಿ ಎಂದು ಒತ್ತಾಯಿಸಿದರು. ಮಾತೆತ್ತಿದರೆ ಹಣ ಬಿಡುಗಡೆ ಮಾಡಿದ್ದೇವೆ ಎನ್ನುತ್ತಾರೆ. ಆ ಹಣ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದರು. ಕಳೆದ 4 ತಿಂಗಳಿನಿಂದ ಹಣ ಬಿಡುಗಡೆ ಮಾಡಿದ್ದೇವೆ ಎನ್ನುತ್ತೀರಲ್ಲವೇ?. ಇದು ಆಸ್ಪತ್ರೆ ರಸ್ತೆ. ಇಲ್ಲಿ ಪ್ರತಿಭಟನೆ, ಪರಿಶೀಲನೆಗೆ ಬಂದಿದ್ದೇವೆ ಎಂದು ತಿಳಿಸಿದರು. ಈ ರಸ್ತೆಯಲ್ಲಿ ಹೋದರೆ ತನ್ನಿಂತಾನೇ ಹೆರಿಗೆ ಆಗುತ್ತದೆ ಎಂದು ವ್ಯಂಗ್ಯವಾಗಿ ತಿಳಿಸಿದರು. ಒಂದು ಕಿಮೀ ರಸ್ತೆಯಲ್ಲಿ 400 ಹಳ್ಳ ಬಿದ್ದಿದೆ ಎಂದು ಗಮನ ಸೆಳೆದರು<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಾಂಗ್ಲಾದೇಶದಲ್ಲಿ ಸಂಭವಿಸಿದ ಭೂಕಂಪಕ್ಕೆ ಕೋಲ್ಕತ್ತಾದಲ್ಲೂ ಶೇಕ್‌

ಮುನ್ಸೂಚನೆಯಂತೆ ಸಿಲಿಕಾನ್ ಸಿಟಿಗೆ ತಂಪೆರೆದ ವರುಣ

ಉಡು‍ಪಿ: ನೌಕಾಪಡೆ ಹಡಗಿನ ಮಾಹಿತಿ ಸೋರಿಕೆ, ಇಬ್ಬರು ಅರೆಸ್ಟ್‌

ಕೇಂದ್ರದ ನಡೆಯಿಂದ ಮೆಕ್ಕೆಜೋಳ ರೈತರು ಸಂಕಷ್ಟಕ್ಕೆ: ಸಿಎಂ ಸಿದ್ದರಾಮಯ್ಯ

ಮುಂದೆಯೂ ನಾನೇ ಬಜೆಟ್ ಮಂಡಿಸುತ್ತೇನೆಂದ ಸಿಎಂ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments