Select Your Language

Notifications

webdunia
webdunia
webdunia
webdunia

ಎಂಥಾ ಹೃದಯವಂತ ಮಹಿಳೆ ಈಕೆ... ಆಟೋ ಚಾಲಕನ ಜೊತೆ ನಡೆದುಕೊಂಡ ರೀತಿಗೆ ನೀವೂ ಫಿದಾ ಆಗ್ತೀರಿ Video

Viral video auto
Photo Credit: X
ಬೆಂಗಳೂರು: ನಿತ್ಯವೂ ಗಡಿಬಿಡಿ, ಟ್ರಾಫಿಕ್ ಕಿರಿಕಿರಿ ಮತ್ತು ಸಣ್ಣಪುಟ್ಟ ಜಗಳಗಳಿಗೆ ಹೆಸರಾಗಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ, ಸಣ್ಣ ಮಾನವೀಯತೆ ಮತ್ತು ಸೌಜನ್ಯದ ಘಟನೆಯೊಂದು ಸಾರ್ವಜನಿಕರ ಮನ ಗೆದ್ದಿದೆ.

ಬೆಂಗಳೂರಿನಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು ದಾರಿಯಲ್ಲಿ ಐಸ್‌ಕ್ರೀಮ್ ಪಾರ್ಲರ್ ಕಂಡು ಆಟೋ ನಿಲ್ಲಿಸಲು ಕೋರಿದಾಗ ಆರಂಭವಾದ ಈ ಸಂಭಾಷಣೆ, ಕೊನೆಗೆ ಇಬ್ಬರ ಮುಖದಲ್ಲೂ ಮುಗುಳುನಗೆ ತರಿಸುವಂತೆ ಮುಕ್ತಾಯವಾಗಿದೆ.

ಪ್ರಯಾಣ ಮಾಡುತ್ತಿರುವಾಗ ದಾರಿ ಪಕ್ಕದಲ್ಲೇ ಐಸ್ ಕ್ರೀಂ ಅಂಗಡಿ ನೋಡಿ ಮಹಿಳೆ ಅಣ್ಣಾ ಐದು ನಿಮಿಷ ಆಟೋ ನಿಲ್ಲಿಸ್ತೀರಾ, ಇಲ್ಲಿ ಐಸ್ ಕ್ರೀಂ ಚೆನ್ನಾಗಿರುತ್ತದೆ’ ಎಂದಿದ್ದಾರೆ. ಇದಕ್ಕೆ ಆಟೋ ಚಾಲಕ ‘ಖಂಡಿತಾ ಮೇಡಂ, ತೊಂದರೆಯಿಲ್ಲ’ ಎಂದಿದ್ದಾನೆ. ಬಳಿಕ ಅಂಗಡಿಗೆ ಹೋದ ಮಹಿಳೆ ತನಗೆ ಮಾತ್ರವಲ್ಲ, ಆಟೋ ಚಾಲಕನಿಗೂ ಐಸ್ ಕ್ರೀಂ ತಂದಿದ್ದಾಳೆ. ‘ನಿಮಗೂ ಒಂದು ಐಸ್ ಕ್ರೀಂ ತಂದಿದ್ದೀನಿ, ದಯವಿಟ್ಟು ತಗೊಳ್ಳಿ. ಇಲ್ಲಿ ಐಸ್ ಕ್ರೀಂ ತುಂಬಾ ಚೆನ್ನಾಗಿರುತ್ತದೆ, ಥ್ಯಾಂಕ್ಯೂ’ ಎಂದು ಕೊಟ್ಟಿದ್ದಾಳೆ. ಆದರೆ ಮೊದಲು ಆಟೋ ಚಾಲಕ ಬೇಡ ಎನ್ನುತ್ತಾನೆ. ಬಳಿಕ ಮಹಿಳೆ ಪರವಾಗಿಲ್ಲ ತಗೊಳ್ಳಿ ಎಂದು ಒತ್ತಾಯ ಮಾಡಿದ ಮೇಲೆ ತೆಗೆದುಕೊಳ್ಳುತ್ತಾನೆ. ‘ನಿಜವಾಗಿ ನಾನೇ ನಿಮಗೆ ಥ್ಯಾಂಕ್ಯೂ ಹೇಳಬೇಕು ಮೇಡಂ’ ಎನ್ನುತ್ತಾನೆ.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಣ್ಣ ಸೌಜನ್ಯದ ಮಾತುಗಳು ಮತ್ತು ಇಂತಹ ಸಣ್ಣ ಉಡುಗೊರೆಗಳು ದಿನಪೂರ್ತಿ ದುಡಿಯುವ ಆಟೋ ಚಾಲಕರ ಮುಖದಲ್ಲಿ ಎಷ್ಟೊಂದು ಸಂತಸ ತರಬಲ್ಲವು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಈ ಸಂಭಾಷಣೆ ಹಾಗೂ ಘಟನೆಯ ಚಿತ್ರಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, "ಬೆಂಗಳೂರಿನಲ್ಲಿ ಇನ್ನೂ ಮಾನವೀಯತೆ ಮತ್ತು ಪ್ರೀತಿ ಜೀವಂತವಾಗಿದೆ", "ಶ್ರಮಜೀವಿಗಳಿಗೆ ನೀಡುವ ಸಣ್ಣ ಗೌರವವೂ ದೊಡ್ಡ ಮಟ್ಟದ ಬದಲಾವಣೆ ತರುತ್ತದೆ" ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.


pic.twitter.com/nxzi8qf4oV

 

— Lakshay Mehta (@lakshaymehta08) August 6, 2026

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಿಗೆ ಗುಡುಗು ಸಹಿತ ಮಳೆ ಸಾಧ್ಯತೆ