Webdunia - Bharat's app for daily news and videos

Install App

Bangalore Air Quality: ಬೆಂಗಳೂರಿನಲ್ಲಿ ಉಸಿರಾಡುವ ಗಾಳಿಯೂ ಅಪಾಯಕಾರಿ, ಹುಷಾರ್

Krishnaveni K
ಶುಕ್ರವಾರ, 6 ಡಿಸೆಂಬರ್ 2024 (10:10 IST)
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಉಸಿರಾಡುವ ಗಾಳಿಯೂ ಅಪಾಯಕಾರಿ ಮಟ್ಟ ತಲುಪಿದೆ.  ನಗರದಲ್ಲಿ ಗಾಳಿಯ ಗುಣಮಟ್ಟ ಕಡಿಮೆಯಾಗಿದೆ ಎಂದು ವರದಿಯಾಗಿದೆ.

ಬೆಂಗಳೂರಿನ ವಾರ್ಷಿಕ ಸರಾಸರಿ ನೈಟ್ರೋಜನ್ ಡೈ ಆಕ್ಸೈಡ್ ಸಾಂದ್ರತೆಯು 2023 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಮಾನದಂಡಗಳಿಗಿಂತ ಸುಮಾರು ಎರಡು ಪಟ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಬೆಂಗಳೂರಿನಲ್ಲಿ ಮೆಜೆಸ್ಟಿಕ್ ಸಿಟಿ ರೈಲ್ವೇ ನಿಲ್ದಾಣ ಏರಿಯಾ ಅತೀ ಹೆಚ್ಚು ಮಾಲಿನ್ಯ ಭರಿತ ಸ್ಥಳವಾಗಿದೆ ಎಂದು ವರದಿ ಹೇಳಿದೆ.

ಬೆಂಗಳೂರು ಮಾತ್ರವಲ್ಲ ದೇಶದ ಪ್ರಮುಖ ನಗರಗಳಾದ ಜೈಪುರ, ಪುಣೆ, ಮುಂಬೈ, ಕೋಲ್ಕತ್ತಾ, ಹೈದರಾಬಾದ್, ಚೆನ್ನೈ ನಗರಗಳಲ್ಲೂ ವಾಯುಮಾಲಿನ್ಯ ಮಿತಿ ಮೀರಿದೆ ಎಂದು ವರದಿ ಹೇಳಿದೆ. ಈ ನಗರಗಳಲ್ಲೂ ನೈಟ್ರೋಜನ್ ಡೈಆಕ್ಸೈಡ್ ಅಂಶ ಹೆಚ್ಚಾಗಿದೆ ಎನ್ನಲಾಗಿದೆ.

ನೈಟ್ರೋಜನ್ ಡೈ ಆಕ್ಸೈಡ್ ಪರಿಣಾಮಗಳು
ನೈಟ್ರೋಜನ್ ಡೈ ಆಕ್ಸೈಡ್ ಪರಿಣಾಮದಿಂದ ಉಸಿರಾಟದ ಸಮಸ್ಯೆ, ಶೀತ, ಕೆಮ್ಮು ಮುಂತಾದ ಆರೋಗ್ಯ ಸಮಸ್ಯೆ ಬರಲಿದೆ. ಇದಲ್ಲದೆ, ವಾಸನೆ ಗ್ರಹಿಸುವ ಶಕ್ತಿ, ಕಣ್ಣಿನ ಸಮಸ್ಯೆ, ಶ್ವಾಸಕೋಶ ಸಂಬಂಧೀ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಮೆಜೆಸ್ಟಿಕ್ ಸಿಟಿ ರೈಲ್ವೇ ನಿಲ್ದಾಣದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡವನ್ನೂ ಮೀರಿದ ಪ್ರಮಾಣದಲ್ಲಿ ನೈಟ್ರೋಜನ್ ಡೈಆಕ್ಸೈಡ್ ಪತ್ತೆಯಾಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments