ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮದರಸಾ ಸಂಪೂರ್ಣ ಬಂದ್ : ಯತ್ನಾಳ್

Webdunia
ಶುಕ್ರವಾರ, 17 ಮಾರ್ಚ್ 2023 (07:13 IST)
ಬೆಳಗಾವಿ : ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮದರಸಾ ಸಂಪೂರ್ಣ ಬಂದ್ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಬೆಳಗಾವಿಯಲ್ಲಿ ಶಿವಚರಿತ್ರೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ರೀತಿ ಕರ್ನಾಟಕದಲ್ಲಿ ಮದರಸಾ ಬಂದ್ ಮಾಡುತ್ತೇವೆ ಎಂದ ಅವರು, ಇವತ್ತು ನಾನು ಬಸನಗೌಡ ಪಾಟೀಲ್ ಯತ್ನಾಳ್ ಆಗಿ ಉಳಿಯಲು ಶಿವಾಜಿ ಮಹಾರಾಜರು ಕಾರಣರಾಗಿದ್ದಾರೆ.

ಇಲ್ಲವಾದರೆ ನಾನು ಬಶೀರ್ ಅಹ್ಮದ್ ಪಟೇಲ್ ಆಗಿರುತ್ತಿದ್ದೆ. ಅದೇ ರೀತಿ ಅಭಯ್ ಪಾಟೀಲ್, ಅಜರುದ್ದೀನ್ ಪಟೇಲ್ ಆಗಿ ಇರುತ್ತಿದ್ದರು ಎಂದರು. ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಹಾಡಿ ಹೊಗಳಿದ ಅವರು, ಅಸ್ಸಾಂ ಹಿಂದೂಸ್ತಾನ ಬಿಟ್ಟು ಹೋಗುವ ವಾತಾವರಣ ಇತ್ತು.

ಹಿಮಂತ ಬಿಸ್ವಾ ಶರ್ಮಾರಿಂದ ಅಸ್ಸಾಂನಲ್ಲಿ ಹಿಂದೂಗಳು ಜೀವನ ಮಾಡಲು ಸಾಧ್ಯವಾಯಿತು ಎಂದ ಅವರು, ನನಗೊಬ್ಬರು ಶಿವಾಜಿ ಮಹಾರಾಜರ ಬಗ್ಗೆ ಮಾತನಾಡುತ್ತೀಯಾ ಅವರಿಗೆ ಹುಟ್ಟಿದಿಯಾ ಎಂದು ಹೇಳಿದ್ದರು. ಹೌದು ನಾನು ಶಿವಾಜಿ ಸಂತಾನವಾಗಿದ್ದು, ಟಿಪ್ಪು ಸುಲ್ತಾನನ ಸಂತಾನವಲ್ಲ ಎಂದು ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನವೆಂಬರ್‌ನಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದಿದ್ದಕ್ಕೆ ಸಿಎಂ ಪ್ರತಿಕ್ರಿಯೆ ಹೀಗಿತ್ತು

ಈ ವಿಚಾರ ಯಾವಾ ಇಲಾಖೆಯಲ್ಲಿ ಗೊತ್ತಾದಲ್ಲಿ ಕಠಿಣ ಕ್ರಮ: ಜಿ ಪರಮೇಶ್ವರ್

ಬರೋಬ್ಬರಿ ನಾಲ್ಕು ಗಂಟೆ ತೆಂಗಿನ ಮರ ಏರಿ ಕುಳಿತ ವ್ಯಕ್ತಿ, ಕಾರಣ ಕೇಳಿದ್ರೆ ಶಾಕ್‌

ಅನಾರೋಗ್ಯ ಕಾರಣಕ್ಕೆ ತಾತ್ಕಾಲಿಕ ಬ್ರೇಕ್ ಪಡೆದ ಸಂಜಯ್ ರಾವುತ್‌ಗೆ ಮೋದಿ ವಿಶ್‌

ನವೆಂಬರ್ 1ರಂದು ಮೈಸೂರು ಝೂಗೆ ಹೋಗುವ 12ವರ್ಷದೊಳಗಿನ ಮಕ್ಕಳಿಗೆ ಗುಡ್‌ನ್ಯೂಸ್‌

ಮುಂದಿನ ಸುದ್ದಿ
Show comments