Daily Horoscope
✕

ಬಂಡೀಪುರ ಸಂಚಾರ ಸಂಪೂರ್ಣ ಬಂದ್ ಮಾಡ್ತೇವೆ ಅಂದೋರಾರು?

Webdunia
ಸೋಮವಾರ, 30 ಸೆಪ್ಟಂಬರ್ 2019 (17:31 IST)
ಬಂಡೀಪುರದಲ್ಲಿ ರಾತ್ರಿ ಸಂಚಾರ ಬೇಡವೇ ಬೇಡ. ಪ್ರಸ್ತುತ ಇರುವ ಹಾಗೆ ಯತಾಸ್ಥಿತಿ ಕಾಪಾಡಬೇಕು. ಒಂದು ವೇಳೆ ಮತ್ತೆ ವೈನಾಡಿನಲ್ಲಿ ರಸ್ತೆ ವಿಚಾರವಾಗಿ ಗಲಭೆ ಎಬ್ಬಿಸಿದ್ದೇ ಆದ್ರೆ, ಬಂಡೀಪುರ ರಾತ್ರಿಯಲ್ಲ ಹಗಲು ಸಂಚಾರವೂ ಬಂದ್ ಮಾಡಬೇಕಾಗುತ್ತದೆ. ಹೀಗಂತ ಖಡಕ್ ಎಚ್ಚರಿಕೆ ನೀಡಲಾಗಿದೆ.

ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದು, ಕೇರಳಿಗರು ಮರದ ದಂಧೆ ನಡೆಸುವ ಸಲುವಾಗಿ ರಾತ್ರಿ ಸಂಚಾರ ಕೇಳುತ್ತಿದ್ದಾರೆ.
ಸಾವಿರಾರು ಕೋಟಿ ಲೂಟಿ ಮಾಡುವ ಮರದ ಮಾಫಿಯಾ ಇದೆ. ಬೇರೆ ರಸ್ತೆ ಮಾಡಿದ್ರೆ ಸಾಕಷ್ಟು ಅರಣ್ಯ ಪ್ರದೇಶ, ಪ್ರಾಣಿ- ಪಕ್ಷಿ ಸಂಕುಲ ನಾಶ ಆಗುತ್ತೆ. ಮೇಲ್ಸೇತುವೆ ನಿರ್ಮಾಣ ಮಾಡಿದ್ರೆ, ಹೆಚ್ಚು ಲೈಟ್ ಬೆಳಕಿನಿಂದ ಪ್ರಾಣಿಗಳಿಗೆ ತೊಂದರೆಯಾಗುತ್ತೆ. ಅಂಡರ್ ಗ್ರೌಂಡ್ ರಸ್ತೆ ಮಾಡಿದ್ರೂ ಅದು ದೊಡ್ಡ ದುರಂತವಾಗುತ್ತೆ. ಹಾಗಾಗಿ ಬಂಡೀಪುರದಲ್ಲಿ ಯಾವುದೇ ಕಾರಣಕ್ಕೂ ರಾತ್ರಿ ಸಂಚಾರ ಬೇಡ ಎಂದ್ರು.  

ಕರ್ನಾಟಕ ಸರ್ಕಾರ ಬಹಳ ಗಂಭೀರವಾಗಿ ಚಿಂತನೆ ಮಾಡಬೇಕಿತ್ತು. ಇಲ್ಲಿ ಹೆಚ್ಚು ಹುಲಿಗಳಿವೆ,  ಆನೆಗಳಿವೆ, ಇವೆಲ್ಲವನ್ನೂ ನಾವು ರಕ್ಷಿಸಬೇಕು. ಕೇರಳದವರಿಗೆ ಪ್ರಾಣಿ ಪಕ್ಷಿ ಅರಣ್ಯ ನಾಶವಾದ್ರೇನು, ಅವರಿಗೆ ರಸ್ತೆ ಬೇಕು ಅಂತಿದ್ದಾರೆ. ಯಾವುದೇ ಕಾರಣಕ್ಕೂ ರಾತ್ರಿ ಸಂಚಾರಕ್ಕೆ  ಅವಕಾಶ ಇಲ್ಲ. ಅದನ್ನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದ್ರು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments