ನೀವು ಚಪ್ಪರಿಸಿಕೊಂಡು ತಿನ್ನುವ ಪಾನಿಪೂರಿಗೆ ನಿಷೇಧ, ಇಂದು ನಿರ್ಧಾರ

Krishnaveni K
ಸೋಮವಾರ, 1 ಜುಲೈ 2024 (11:47 IST)
ಬೆಂಗಳೂರು: ನೀವು ಚಪ್ಪರಿಸಿಕೊಂಡು ತಿನ್ನುವ ಪಾನಿಪೂರಿಗೆ ನಿಷೇಧ ಹೇರುವ ಬಗ್ಗೆ ಇಂದು ಅಂತಿಮ ನಿರ್ಣಯ ಹೊರಬೀಳಲಿದೆ. ಪಾನಿಪೂರಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾದ ಹಿನ್ನಲೆಯಲ್ಲಿ ಈ ಕ್ರಮಕ್ಕೆ ಮುಂದಾಗಲಾಗುತ್ತಿದೆ.

ಪಾನಿಪೂರಿಗೆ ಬಳಸಲಾಗುವ ಸಾಸ್  ನಲ್ಲಿ ಕ್ಯಾನ್ಸರ್ ಗೆ ಕಾರಣವಾಗಬಲ್ಲ ಅಂಶ ಪತ್ತೆಯಾಗಿರುವ ಹಿನ್ನಲೆಯಲ್ಲಿ ಇಂತಹ ಅಸುರಕ್ಷಿತ ವಸ್ತು ಬಳಕೆ ಮಾಡುವುದಕ್ಕೆ ನಿಷೇಧ ಹೇರುವ ಸಾಧ್ಯತೆಯಿದೆ. ಈ ಬಗ್ಗೆ ಆಹಾರ ಸುರಕ್ಷತಾ ಮತ್ತ ಗುಣಮಟ್ಟ ಇಲಾಖೆ ಪರೀಕ್ಷೆ ನಡೆಸಿ ವರದಿ ನೀಡಿತ್ತು.

ರಾಜ್ಯಾದ್ಯಂತ ಸುಮಾರು 78 ಪಾನಿಪೂರಿ ಮಾದರಿ ಪರೀಕ್ಷಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವರದಿ ಪ್ರಕಾರ 18 ಮಾದರಿಗಳು ಮನುಷ್ಯರ ಸೇವನೆಗೆ ಯೋಗ್ಯವಲ್ಲ ಎಂದು ತಿಳಿದುಬಂದಿತ್ತು. ಈ ಸಂಬಂಧ ಇಂದು ಅಧಿಕಾರಿಗಳು ಸಭೆ ನಡೆಸಲಿದ್ದು, ನಿಷೇಧ ಹೇರುವ ಕುರಿತು ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

ಪಾನಿಪೂರಿಯ ರುಚಿ ಹೆಚ್ಚಿಸುವ ಕಟ್ಟಾ-ಮೀಟಾ ಸಾಸ್ ನಲ್ಲಿ ಹಾನಿಕಾರಕ ಅಂಶವಿರುವುದು ಪತ್ತೆಯಾಗಿದೆ. ಪೂರಿಯ ಮಾದರಿಯನ್ನೂ ಪರೀಕ್ಷೆಗೊಳಪಡಿಸಲಾಗಿತ್ತು. ಆದರೆ ಇದರಲ್ಲಿ ಯಾವುದೇ ಅಸುರಕ್ಷಿತ ಸಾಧನ ಕಂಡುಬಂದಿಲ್ಲ. ಆದರೆ ಅದಕ್ಕೆ ಬಳಸುವ ಸಾಸ್ ಗಳು ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದುಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಯಾರಿಗೆ ಬಿಪಿ, ಶುಗರ್, ಹೃದಯ ಸಮಸ್ಯೆ ಬರುವ ಸಾಧ್ಯತೆ ಹೆಚ್ಚು: ಡಾ ಸಿಎನ್ ಮಂಜುನಾಥ್

ಡಾ ಕೃತಿಕಾ ರೆಡ್ಡಿ ಪೋಸ್ಟ್ ಮಾರ್ಟಂ ಮಾಡದಂತೆ ಡಾ ಮಹೇಂದ್ರ ರೆಡ್ಡಿ ಮಾಡಿದ್ದ ಉಪಾಯವೇನು

ಡಾ ಕೃತಿಕಾ ರೆಡ್ಡಿ ಮರ್ಡರ್ ಕೇಸ್ ಗೆ ಟ್ವಿಸ್ಟ್: ಪತಿ ಮಹೇಂದ್ರ ರೆಡ್ಡಿ ಬಗ್ಗೆ ಮತ್ತೊಂದು ಸ್ಪೋಟಕ ಸತ್ಯ

ರಷ್ಯಾದಿಂದ ಭಾರತ ತೈಲ ಖರೀದಿಸಲ್ಲ ಎಂದು ಮೋದಿ ಒಪ್ಪಿಕೊಂಡಿದ್ದಾರೆ: ಟ್ರಂಪ್ ಸ್ವಯಂ ಘೋಷಣೆ

ಮುಂದಿನ ಸುದ್ದಿ
Show comments