Webdunia - Bharat's app for daily news and videos

Install App

ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಗ್ಗೆ ಸಹೋದರ ಬಾಲಚಂದ್ರ ಹೇಳಿದ್ದೇನು?

Webdunia
ಬುಧವಾರ, 3 ಮಾರ್ಚ್ 2021 (10:29 IST)
ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣದ ಬಗ್ಗೆ ಸಹೋದರ ಬಾಲಚಂದ್ರ ಜಾರಕಿಹೊಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.


ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಬೇಕು ಎಂದು ವಿಪಕ್ಷಗಳು ತೀವ್ರ ಒತ್ತಾಯ ಮಾಡುತ್ತಿವೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಹೋದರ ಬಾಲಚಂದ್ರ ಜಾರಕಿಹೊಳಿ ಇದೆಲ್ಲಾ ನಕಲಿ ವಿಡಿಯೋ ಎಂದಿದ್ದಾರೆ.

ಯಾರೋ ಬೇಕೆಂದೇ ಹೆಸರು ಕೆಡಿಸಲು ಈ ರೀತಿ ಮಾಡಿದ್ದಾರೆ. ಈ ಬಗ್ಗೆ ಸಿಒಡಿ ಅಥವಾ ಸಿಬಿಐ ತನಿಖೆ ನಡೆಯಬೇಕು. ಆಗ ಸತ್ಯ ಬಹಿರಂಗವಾಗುತ್ತದೆ. ಆಗ ವಿಡಿಯೋ ನೈಜವೋ, ಸೃಷ್ಟಿ ಮಾಡಿದ್ದೋ ಗೊತ್ತಾಗುತ್ತದೆ. ಸಿಡಿ ಬಿಡುಗಡೆ ಮಾಡಿದವರ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ಮಾಡುತ್ತಿದ್ದೇವೆ. ಈ ವಿಡಿಯೋ ವಿದೇಶದಲ್ಲೂ ಬಿಡುಗಡೆಯಾಗಿದೆ. ಹೀಗಾಗಿ ಇದರ ಸತ್ಯಾಸತ್ಯತೆ ಬಯಲಿಗೆ ಬರಬೇಕು. ಸಂತ್ರಸ್ತ ಮಹಿಳೆಯೇ ದೂರು ಕೊಟ್ಟಿಲ್ಲ. ಒಂದು ವೇಳೆ ಆಕೆಯೇ ಬಂದು ದೂರು ಕೊಟ್ಟರೆ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡಬಹುದು. ಯಾರೋ ಒಬ್ಬರು ಬಂದು ದೂರು ಕೊಟ್ಟರು ಎಂಬ ಮಾತ್ರಕ್ಕೆ ರಾಜೀನಾಮೆ ಕೊಡಲು ಸಾಧ‍್ಯವಿಲ್ಲ’ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಮೆರಿಕಾಗೆ ತಕ್ಕ ತಿರುಗೇಟು ಕೊಟ್ಟ ಭಾರತ: ಯುದ್ಧ ವಿಮಾನ ಖರೀದಿ ಡೀಲ್ ಕ್ಯಾನ್ಸಲ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

ಧರ್ಮಸ್ಥಳದಲ್ಲಿ ಇಂದು ಯಾವ ಪಾಯಿಂಟ್ ನಲ್ಲಿ ಎಸ್ಐಟಿ ಶೋಧ ನಡೆಸಲಿದೆ

ಡೊನಾಲ್ಡ್ ಟ್ರಂಪ್ ದುಬಾರಿ ಸುಂಕ ಇಂದಿನಿಂದ ಜಾರಿಗೆ: ಭಾರತದ ಯಾವ ಉದ್ಯಮಗಳಿಗೆ ಹೊಡೆತ

ಮುಂದಿನ ಸುದ್ದಿ
Show comments