Select Your Language

Notifications

webdunia
webdunia
webdunia
webdunia

ಅನ್ನಭಾಗ್ಯ ಪಡಿತರದಲ್ಲಿ ಕಳಪೆ ಬೇಳೆ: ಜನರ ಆಕ್ರೋಶ

ಅನ್ನಭಾಗ್ಯ ಪಡಿತರದಲ್ಲಿ ಕಳಪೆ ಬೇಳೆ: ಜನರ ಆಕ್ರೋಶ
ಮಂಡ್ಯ , ಬುಧವಾರ, 18 ಜುಲೈ 2018 (16:42 IST)
ಅನ್ನಭಾಗ್ಯ ಪಡಿತರ ವಿತರಣೆಯಲ್ಲಿ ಕಳಪೆ ತೊಗರಿಬೇಳೆ ವಿತರಣೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ  ಸರ್ಕಾರದ  ಕನಸಿನ ಅನ್ನಭಾಗ್ಯ ಯೋಜನೆಯಲ್ಲಿ ಕಳಪೆ ಪಡಿತರ ವಿತರಣೆಯಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ‌.

ಮಂಡ್ಯ ತಾಲ್ಲೂಕಿನ  ಸಾತನೂರು ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ  ಕನಸಿನ ಅನ್ನಭಾಗ್ಯ ಯೋಜನೆಯಲ್ಲಿ ಕಳಪೆ ಪಡಿತರ ವಿತರಣೆಯಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ‌. ಆಹಾರ  ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ತೊಗರಿ ಬೇಳೆ  ಸರಬರಾಜಾಗಿದ್ದು, ಇದು ಕಳಪೆ  ತೊಗರಿ ಬೇಳೆ ಎಂದು  ಗ್ರಾಹಕರು ವಿರೋಧ ವ್ಯಕ್ಯಪಡಿಸುತ್ತಿದ್ದಾರೆ.

ಇಂತಹ  ಕಳಪೆ ವಸ್ತುಗಳನ್ನು ಕೊಡುವ ಬದಲು  ಇಂತಹ ಪದಾರ್ಥಗಳನ್ನು ಕೊಡದೆ ನಿಲ್ಲಿಸುವುದು ಉತ್ತಮ ಎನ್ನುತ್ತಿದ್ದಾರೆಇದರಿಂದ ಆರೋಗ್ಯ ಹಾಳಾದರೂ ಇದಕ್ಕೆ ಪರಿಹಾರ ನೀಡುವವರು ಯಾರು?  ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಮಂಡ್ಯ ತಾಲ್ಲೂಕಿನ ಸಾತನೂರಿನ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಬಂದಿರುವ ದಾಸ್ತಾನಿನಲ್ಲಿ ಕಳಪೆ ತೊಗರಿ ಬೇಳೆ ಪ್ಯಾಕೆಟ್ ದೊರೆತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಜು.20ರಿಂದ ದೇಶವ್ಯಾಪಿ ಲಾರಿ ಮುಷ್ಕರ