ಪ್ರಧಾನಿಗೆ ಗಂಡಾಂತರವಂತೆ… ಹೆಚ್ಡಿಕೆ ಸಿಎಂ ಆಗ್ತಾರಂತೆ…

Webdunia
ಶುಕ್ರವಾರ, 13 ಅಕ್ಟೋಬರ್ 2017 (09:40 IST)
ಹಾಸನ: ಪ್ರಧಾನಿ ನರೇಂದ್ರ ಮೋದಿಯವರಿಗೆ ಗಂಡಾಂತರ ಕಾದಿದೆಯಂತೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತೆ ಈ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂದು ಬ್ರಹ್ಮಾಂಡ ಗುರೂಜಿ ಖ್ಯಾತಿಯ ನರೇಂದ್ರ ಬಾಬು ಶರ್ಮಾ ಭವಿಷ್ಯ ನುಡಿದಿದ್ದಾರೆ.

ಹಾಸನಾಂಬೆ ದೇವಾಲಯದಲ್ಲಿ ಮಾತನಾಡಿದ ನರೇಂದ್ರ ಬಾಬು ಶರ್ಮಾ, ಪ್ರಧಾನಿ ಮೋದಿಯವರದ್ದು ವೃಶ್ಚಿಕ ರಾಶಿ. ಶನಿ ದೋಷವಿದೆ. ಶನಿ ಯಾರನ್ನೂ ಬಿಡಲ್ಲ. ಗುರು ತುಲಾ ರಾಶಿಗೆ ಪ್ರವೇಶಿಸಿದ್ದಾನೆ. ಹೀಗಾಗಿ ಉನ್ನತ ಸ್ಥಾನದಲ್ಲಿರುವ ಸೆಲೆಬ್ರಿಟಿ ಅಥವಾ ರಾಜಕಾರಣಿಗೆ ಗಂಡಾಂತರ ಕಾದಿದೆ ಎಂದು ಹೇಳಿದ್ದಾರೆ. ಇದಕ್ಕೆ ದೇವರ ಮೊರೆ ಹೋಗಿ ಪರಿಹಾರ ಕಂಡುಕೊಳ್ಳದಿದ್ದರೆ ಸಾವು ಸಂಭವಿಸಬಹುದು ಎಂದಿದ್ದಾರೆ.

ತಾಯಿ ಮತ್ತು ಪತ್ನಿಯಿಂದ ದೂರವಿರುವುದರಿಂದ ಶುಕ್ರ ದೋಷವೂ ಇದೆಯಂತೆ. ಗುಜರಾತ್‌ಮಹಿಳೆಯೊಬ್ಬಳು ಮೋಹಿಸಲಿದ್ದು, ಇದು ಮೋದಿಯವರಿಗೆ ಮುಳುವಾಗಲಿದೆ ಎಂದಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಹೆಚ್ ಡಿಕೆ ಕಿಂಗ್ ಮೇಕರ್ ಆಗಲಿದ್ದು, ಮತ್ತೊಮ್ಮೆ ಸಿಎಂ ಆಗೋ ಯೋಗವಿದೆ. ಹಾಲಿ ಸಿಎಂ ಸಿದ್ದರಾಮಯ್ಯ ಈವರೆಗೂ ಮಾಡಿರುವ ತಪ್ಪನ್ನು ಸರಿಪಡಿಸಿಕೊಳ್ಳಬೇಕು. ಇನ್ನು ಯಡಿಯೂರಪ್ಪ ಅವರದ್ದು ಹಿತ್ತಾಳೆ ಕಿವಿ. ಜೊತೆಯಲ್ಲಿ ವಿಷವಿಟ್ಟುಕೊಂಡು ಓಡಾಡುತ್ತಿದ್ದಾರೆ. ಪಕ್ಷದಲ್ಲಿ ಬಿಎಸ್ ವೈ ಸ್ಥಾನಪಲ್ಲಟ ಖಚಿತ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಾಂಗ್ಲಾದೇಶದಲ್ಲಿ ಸಂಭವಿಸಿದ ಭೂಕಂಪಕ್ಕೆ ಕೋಲ್ಕತ್ತಾದಲ್ಲೂ ಶೇಕ್‌

ಮುನ್ಸೂಚನೆಯಂತೆ ಸಿಲಿಕಾನ್ ಸಿಟಿಗೆ ತಂಪೆರೆದ ವರುಣ

ಉಡು‍ಪಿ: ನೌಕಾಪಡೆ ಹಡಗಿನ ಮಾಹಿತಿ ಸೋರಿಕೆ, ಇಬ್ಬರು ಅರೆಸ್ಟ್‌

ಕೇಂದ್ರದ ನಡೆಯಿಂದ ಮೆಕ್ಕೆಜೋಳ ರೈತರು ಸಂಕಷ್ಟಕ್ಕೆ: ಸಿಎಂ ಸಿದ್ದರಾಮಯ್ಯ

ಮುಂದೆಯೂ ನಾನೇ ಬಜೆಟ್ ಮಂಡಿಸುತ್ತೇನೆಂದ ಸಿಎಂ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments