ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆಲ್ಲಾ ಬೆಲೆಯಿಲ್ಲ: ಬಿವೈ ವಿಜಯೇಂದ್ರ

Krishnaveni K
ಮಂಗಳವಾರ, 5 ನವೆಂಬರ್ 2024 (15:33 IST)
ಬೆಂಗಳೂರು: ತಮ್ಮ ಬಗ್ಗೆ ಸದಾ ಕೆಂಡ ಕಾರುವ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಯತ್ನಾಳ್, ಜಾರಕಿಹೊಳಿ ಮಾತಿಗೆಲ್ಲಾ ಕವಡೆ ಕಾಸಿನ ಕಿಮ್ಮತ್ತಿಲ್ಲ. ಉಪಚುನಾವಣೆ ಮೇಲೆ ಇವರ ಹೇಳಿಕೆಗಳೆಲ್ಲಾ ಪರಿಣಾಮ ಬೀರಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೆ ಈ ಇಬ್ಬರೂ ನಾಯಕರೂ ಅವರ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ.

ಇದೀಗ ವಿಜಯೇಂದ್ರ  ಬಿಜೆಪಿ ರಾಜ್ಯಧ್ಯಕ್ಷರಾಗಿರುವವರೆಗೂ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದರು. ಇದಕ್ಕೆ ವಿಜಯೇಂದ್ರ ಪ್ರತಿಕ್ರಿಯಿಸಿದ್ದು ಇಂಥಹ ಹೇಳಿಕೆಗಳಿಗೆಲ್ಲಾ ತಲೆಯೇ ಕೆಡಿಸಿಕೊಳ್ಳಲ್ಲ ಎಂದಿದ್ದಾರೆ.ಇವರ ಆಟ ಬಹಳ ದಿನ ನಡೆಯಲ್ಲ. ಪ್ರಚಾರಕ್ಕಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದಿದ್ದಾರೆ.

ಉಪಚುನಾವಣೆಯಲ್ಲಿ ನಮ್ಮ ಜೊತೆ ಕಾರ್ಯಕರ್ತರಿದ್ದಾರೆ. ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮೂರೂ ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರೇ ಗೆಲ್ಲಿಸುತ್ತಾರೆ, ನಾವೇ ಗೆಲ್ಲುವುದು ಎಂದು ವಿಜಯೇಂದ್ರ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಚಲಿಸುತ್ತಿರುವ ಕಾರಿನ ಮೇಲೇ ಬಿತ್ತು ವಿಮಾನ: ಭಯಾನಕ ವಿಡಿಯೋ ಇಲ್ಲಿದೆ

ಧರ್ಮಸ್ಥಳ ವಿರುದ್ಧ ಷಡ್ಯಂತ್ರ: ಡಿಕೆ ಶಿವಕುಮಾರ್‌

ಕನ್ನಡ ರಾಮಯ್ಯ ಅನಿಸ್ಕೊಳ್ತೀರಿ, ಕನ್ನಡ ಸಮ್ಮೇಳನಕ್ಕೆ ದುಡ್ಡಿಲ್ವಾ: ಆರ್ ಅಶೋಕ್ ವ್ಯಂಗ್ಯ

ಐದು ವರ್ಷ ಸಿಎಂ ಆಗಿ ಮುಂದುವರಿಯುತ್ತೀರಾ ಸಾರ್ ಎಂದು ಕೇಳಿದ್ದಕ್ಕೆ ಸಿದ್ದರಾಮಯ್ಯ ಉತ್ತರವೇನು ಗೊತ್ತಾ

ಪಾಕಿಸ್ತಾನದ ಸೇನಾಧಿಕಾರಿಯೋ, ಬೀದಿ ಕಾಮಣ್ಣನೋ..: ಮಹಿಳಾ ಪತ್ರಕರ್ತೆಗೆ ಪಬ್ಲಿಕ್ ನಲ್ಲಿ ಮಾಡಿದ್ದೇನು video

ಮುಂದಿನ ಸುದ್ದಿ
Show comments