Select Your Language

Notifications

webdunia
webdunia
webdunia
webdunia

ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿ ಪಾದಯಾತ್ರೆ ಶುರು ಮಾಡಿದ ಬಿ ವೈ ವಿಜಯೇಂದ್ರ

BY Vijayendra pooja

Krishnaveni K

ಮೈಸೂರು , ಶನಿವಾರ, 3 ಆಗಸ್ಟ್ 2024 (09:56 IST)
ಮೈಸೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮುಡಾ ಹಗರಣದ ವಿರುದ್ಧ ಮೈಸೂರು ಚಲೋ ಪಾದಯಾತ್ರೆ ಹಮ್ಮಿಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಇಂದಿನಿಂದ ಪಾದಯಾತ್ರೆ ಆರಂಭಿಸಿದ್ದಾರೆ.

ಇಂದು ಬೆಳಿಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಪತ್ನಿ ಸಮೇತರಾಗಿ ನಾಡದೇವತೆ ಮೈಸೂರಿನ ಚಾಮುಂಡಿ ತಾಯಿಯ ದರ್ಶನ ಪಡೆದು ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ. ಈ ಪಾದಯಾತ್ರೆಯ ಯಶಸ್ಸಿಗಾಗಿ ಚಾಮುಂಡಿ ತಾಯಿಗೆ ವಿಜಯೇಂದ್ರ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಮುಡಾ ಹಗರಣ, ವಾಲ್ಮೀಕಿ ಹಗರಣ ಮತ್ತು ಎಸ್ಸಿ, ಎಸ್ಟಿ ಸಮುದಾಯದವರಿಗೆ ಮೀಸಲಿದ್ದ ಹಣ ದುರ್ಬಳಕೆ ವಿರುದ್ಧ ಬಿಜೆಪಿ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಮೊದಲು ಈ ಪಾದಯಾತ್ರೆಯಲ್ಲಿ ಭಾಗಿಯಾಗಲು ಮಿತ್ರ ಪಕ್ಷ ಜೆಡಿಎಸ್ ಹಿಂದೇಟು ಹಾಕಿತ್ತು. ಕುಮಾರಸ್ವಾಮಿ ಬಹಿರಂಗವಾಗಿಯೇ ಬಿಜೆಪಿ ವಿರುದ್ಧ ಕಿಡಿ ಕಾರಿದ್ದರು.

ಆದರೆ ಸಂಧಾನದ ಬಳಿಕ ಕುಮಾರಸ್ವಾಮಿ ಮುನಿಸು ತಣ್ಣಗಾಗಿದ್ದು, ಇದೀಗ ಜೆಡಿಎಸ್ ನಾಯಕರೂ ಪಾದಯಾತ್ರೆಯಲ್ಲಿ ಭಾಗಿಯಾಗುತ್ತಿದ್ದಾರೆ. ಇಂದು ಕೆಂಗೇರಿಯ ಕೆಂಪಮ್ಮ ದೇಗುಲದಿಂದ ಆರಂಭವಾಗುವ ಪಾದಯಾತ್ರೆ ಆಗಸ್ಟ್ 10 ರಂದು ಮುಕ್ತಾಯವಾಗಲಿದೆ. ಪ್ರತಿನಿತ್ಯ 20 ಕಿ.ಮೀ. ನಡಿಗೆ ಮಾಡಲಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್‌ನಿಂದ ವಯನಾಡಿನಲ್ಲಿ 100 ಮನೆಗಳ ನಿರ್ಮಾಣ: ರಾಹುಲ್ ಗಾಂಧಿ