Webdunia - Bharat's app for daily news and videos

Install App

ವಾಲ್ಮೀಕಿ ನಿಗಮದ ಹಗರಣ: ಬಳ್ಳಾರಿ ಸಂಸದ, ಶಾಸಕರ ರಾಜೀನಾಮೆಗೆ ಬಿ.ಶ್ರೀರಾಮುಲು ಆಗ್ರಹ

Krishnaveni K
ಬುಧವಾರ, 2 ಜುಲೈ 2025 (20:52 IST)
ಬೆಂಗಳೂರು: ವಾಲ್ಮೀಕಿ ನಿಗಮದ 187 ಕೋಟಿ ರೂ. ಹಗರಣದಲ್ಲಿ ಎಸ್‍ಐಟಿಗೆ ಕಪಾಳಮೋಕ್ಷ ಮಾಡುವ ಕೆಲಸವನ್ನು ಹೈಕೋರ್ಟ್ ಮಾಡಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಅವರು ತಿಳಿಸಿದ್ದಾರೆ.
 
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣದ ತನಿಖೆಯನ್ನು ರಾಜ್ಯ ಹೈಕೋರ್ಟ್ ಸಿಬಿಐಗೆ ನೀಡಿದೆ ಎಂದು ತಿಳಿಸಿದರು. ಎಸ್‍ಐಟಿ ರಚನೆ ಮೂಲಕ ಕ್ಲೀನ್ ಚಿಟ್ ಕೊಡಲಾಗಿತ್ತು. ಹಗರಣವನ್ನು ಅಧಿಕಾರಿಗಳ ಮೇಲೆ ಹೊತ್ತು ಹಾಕುವ ಪ್ರಯತ್ನ ಆಗಿತ್ತು ಎಂದು ಆರೋಪಿಸಿದರು.

ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿ, ಸರಕಾರದ ಹಣವನ್ನು ನುಂಗಿ ಚುನಾವಣೆಗೆ ಬಳಸಿದ್ದರು. ಈ ಹಗರಣಕ್ಕೆ ಹಣಕಾಸು ಇಲಾಖೆ ನಿರ್ವಹಿಸುವ ಮುಖ್ಯಮಂತ್ರಿಗಳೂ ಜವಾಬ್ದಾರರು ಎಂದ ಅವರು, ಬಳ್ಳಾರಿ ಸಂಸದರು ರಾಜೀನಾಮೆ ನೀಡಲಿ; ನಾಗೇಂದ್ರ, ಗಣೇಶ್, ಡಾ.ಶ್ರೀನಿವಾಸ್, ಭರತ್ ರೆಡ್ಡಿ ಎಲ್ಲರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ರಾಜಕಾರಣದಲ್ಲಿ ಗೆಲುವು ಶಾಶ್ವತವೇ ಎಂದು ಸಿದ್ದರಾಮಯ್ಯನವರಿಗೆ ಪ್ರಶ್ನೆ ಮಾಡಿದ ಅವರು, ಒಬ್ಬ ಮನುಷ್ಯ ಗೆಲ್ಲಲು ಇನ್ನೊಬ್ಬ ಸೋಲಲೇಬೇಕು. ಪ್ರಧಾನಿ, ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದವರೂ ಸೋತಿದ್ದಾರೆ. 2018ರಲ್ಲಿ ಸಿದ್ದರಾಮಯ್ಯನವರು ಬಾದಾಮಿ- ಚಾಮುಂಡಿಯಲ್ಲಿ ಸ್ಪರ್ಧಿಸಿದ್ದರು. ಬಾದಾಮಿಯಲ್ಲಿ ಕೇವಲ 1700 ಮತದಿಂದ ಗೆದ್ದಿದ್ದಾರೆ. ನಾನು ಎರಡು ಕಡೆ ಸ್ಪರ್ಧೆ ಮಾಡಿದ್ದೆ. ನನ್ನ ವಿರುದ್ಧ ಗೆದ್ದವರು 1700 ಮತ ಹೆಚ್ಚು ಪಡೆದರು. ಅದರಲ್ಲಿ ಸಾವಿರ ಮತ ನನಗೆ ಬರುತ್ತಿದ್ದರೆ, ನೀವು ಮುಖ್ಯಮಂತ್ರಿ ಆಗಲು ಸಾಧ್ಯವಿತ್ತೇ ಎಂದು ಕೇಳಿದರು.

ಚಾಮುಂಡಿ ಕ್ಷೇತ್ರದಲ್ಲಿ ಸುಮಾರು 40 ಸಾವಿರ ಮತದಿಂದ ನೀವು ಸೋಲಲಿಲ್ಲವೇ ಎಂದು ಪ್ರಶ್ನೆ ಮಾಡಿದರು. ಸಿದ್ದರಾಮಯ್ಯನವರ ಜನಪ್ರಿಯತೆ ದಿನೇದಿನೇ ಕಡಿಮೆ ಆಗುತ್ತಿದೆ. ರಾಜಕಾರಣದಲ್ಲಿ ಯಾವುದು ಕೂಡ ಶಾಶ್ವತ ಅಲ್ಲ ಎಂದು ಪ್ರತ್ಯುತ್ತರ ನೀಡಿದರು. ಗೆದ್ದಾಗ ಸಂತಸ; ಸೋತಾಗ ದುಃಖ ಪಡುವುದಲ್ಲ ಎಂದು ತಿಳಿಸಿದರು.

ವಾಲ್ಮೀಕಿ ನಿಗಮದ 187 ಕೋಟಿಯನ್ನು ಬಳಸಿಕೊಂಡು ಗೆದ್ದಿದ್ದೀರಿ. ಇದು ನನಗೆ ಮೋಸ ಮಾಡಿ ಗೆದ್ದಂತೆ ಅಲ್ಲವೇ ಎಂದು ಪ್ರಶ್ನಿಸಿದರು. ಸೋತವರನ್ನು ಗೇಲಿ ಮಾಡದಿರಿ ಎಂದು ಮನವಿ ಮಾಡಿದರು. ವಿಪಕ್ಷದಲ್ಲಿ ಇದ್ದವರು ಆಡಳಿತ ಪಕ್ಷದವರನ್ನು ತಪ್ಪು ಆದಾಗ, ಕೆಲವೊಂದು ವಿಷಯದಲ್ಲಿ ಟೀಕಿಸುತ್ತಾರೆ. ಆಡಳಿತ ಪಕ್ಷಕ್ಕೂ ತಾಳ್ಮೆ ಬೇಕು ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.

ವಾಲ್ಮೀಕಿ ನಿಗಮದ ಹಗರಣದ ಸಂದರ್ಭದಲ್ಲಿ ಸಾಕಷ್ಟು ರೈತರ ಖಾತೆಗೆ ಹಣ ಜಮಾ ಮಾಡಿದ್ದಾರೆ. ಅವರ ಖಾತೆ ಸ್ಥಗಿತವಾಗಿದ್ದು, ಅದರಲ್ಲಿ ವ್ಯವಹಾರ ಮಾಡಲಾಗದೆ ರೈತರು ಈಗ ಕಣ್ಣೀರು ಹಾಕುತ್ತಿದ್ದಾರೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
 
 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 6 ಪ್ರಾಣಿಗಳು ಸಾವು, ಪ್ರಾಣಿ ಪ್ರಿಯರಲ್ಲಿ ಆತಂಕ

ಮದುವೆಯಾಗುವುದಾಗಿ ಗರ್ಭಿಣಿ ಮಾಡಿ ವಂಚನೆ: ಮಗನ ಪರಾರಿಗೆ ಸಹಾಯ ಮಾಡಿದ ಬಿಜೆಪಿ ಮುಖಂಡ ಅರೆಸ್ಟ್‌

90ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ದಲೈ ಲಾಮಾ: 130 ವರ್ಷಗಳ ಕಾಲ ಬದುಕುವ ವಿಶ್ವಾಸ

ಮರಾಠಿ ಮಾತನಾಡಲ್ಲ ಎಂದ ಉದ್ಯಮಿ ಕಚೇರಿ ಮೇಲೆ ಕಲ್ಲೆಸೆದ ಎಂಎನ್‌ಎಸ್ ಕಾರ್ಯಕರ್ತರು

ಅರಣ್ಯ ಇಲಾಖೆಯ‌ಲ್ಲಿ ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್‌ನ್ಯೂಸ್‌, 6000ಹುದ್ದೆಗಳು ಶೀಘ್ರದಲ್ಲೇ ಭರ್ತಿ

ಮುಂದಿನ ಸುದ್ದಿ
Show comments