Publish Date: Wed, 26 Jul 2017 (08:59 IST)
Updated Date: Wed, 26 Jul 2017 (09:02 IST)
ಬೆಂಗಳೂರು: ದ.ಕ. ಜಿಲ್ಲೆಯಲ್ಲಿ ಕೋಮು ಗಲಭೆಗಳಿಗೆ ಉಸ್ತುವಾರಿ ಸಚಿವ ರಮಾನಾಥ್ ರೈ ಅವರೇ ಕಾರಣ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸುತ್ತಿದ್ದರೆ, ಅದೇ ಸಚಿವರಿಗೆ ರಾಜ್ಯದ ಗೃಹ ಇಲಾಖೆಯ ಹೊಣೆ ನೀಡಲಾಗಿದೆ.
ಜಿ. ಪರಮೇಶ್ವರ್ ರಿಂದ ತೆರವಾದ ಗೃಹ ಸಚಿವರ ಪಟ್ಟಕ್ಕೆ ರಮಾನಾಥ್ ರೈ ಅವರನ್ನು ಸಿಎಂ ಸಿದ್ದರಾಮಯ್ಯ ನೇಮಿಸಿದ್ದಾರೆ. ಇದರೊಂದಿಗೆ ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಗಲಭೆಗಳನ್ನು ನಿಯಂತ್ರಿಸಲು ಸಚಿವರಿಗೇ ಹೊಣೆ ನೀಡಲಾಗಿದೆ.
ಕಳೆದ ಎರಡು ದಿನಗಳಿಂದ ರಮಾನಾಥ್ ರೈ ಗೃಹ ಸಚಿವರಾಗುತ್ತಾರೆ ಎಂಬ ಸುದ್ದಿಯಿತ್ತಾದರೂ. ಅದು ದೃಢಪಟ್ಟಿರಲಿಲ್ಲ. ಇದೀಗ ಸ್ವತಃ ಸಿಎಂ ಸಿದ್ದರಾಮಯ್ಯ ತಮ್ಮ ನಿವಾಸಕ್ಕೆ ರಮಾನಾಥ್ ರೈ ಅವರನ್ನು ಕರೆಸಿಕೊಂಡು, ಪಕ್ಷದ ಹಾಗೂ ಸರ್ಕಾರದ ನಿರೀಕ್ಷೆಗಳನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ಈ ಮಹತ್ವದ ಜವಾಬ್ದಾರಿ ವಹಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ