Select Your Language

Notifications

webdunia
webdunia
webdunia
webdunia

ಕೆಜೆಪಿ ಬಿಟ್ಟು 'ಕೈ' ಹಿಡುಯುತ್ತಾರಾ ಬಿ.ಆರ್.ಪಾಟೀಲ್?

ಕೆಜೆಪಿ ಬಿಟ್ಟು 'ಕೈ' ಹಿಡುಯುತ್ತಾರಾ ಬಿ.ಆರ್.ಪಾಟೀಲ್?
ಕಲಬುರ್ಗಿ , ಸೋಮವಾರ, 16 ಜನವರಿ 2017 (11:04 IST)
ದೇಶದಲ್ಲಿ ಜಾತ್ಯತೀತತೆ ಉಳಿಯಬೇಕಾದರೆ ಬಿಜೆಪಿಯೇತರ ಪಕ್ಷಗಳ ಒಗ್ಗೂಡುವಿಕೆಯ ಅಗತ್ಯವಿದೆ. ಬದಲಾವಣೆ ಬಯಸಿ ರಾಜಕೀಯಕ್ಕೆ ಬಂದ ತಮಗೆ ಕಾಂಗ್ರೆಸ್ ಪಕ್ಷ ಸೇರುವುದು ಅನಿವಾರ್ಯ ಎಂದು ಹೇಳುವ ಮೂಲಕ ಕೆಜೆಪಿ ಶಾಸಕ ಬಿ.ಆರ್.ಪಾಟೀಲ್ 'ಕೈ' ಹಾಳಯ ಸೇರುವ ಕುರಿತು ಇಂಗಿತ ವ್ಯಕ್ತಪಡಿಸಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಿಡನ್ ಅಜೆಂಡಾ ಇಟ್ಟಕೊಂಡು ಕೆಟ್ಟ ಸಂಪ್ರದಾಯದಂದಿಗೆ ಹೆಜ್ಜೆ ಇಡುತ್ತಿದೆ. ನೋಟ್ ಬ್ಯಾನ್ ಹಾಗೂ ಮಹಾತ್ಮ ಗಾಂಧಿ ಅವರನ್ನು ಅಪಮೌಲ್ಯಗೊಳಿಸಲು ಬಿಜೆಪಿ ಹೊರಟಿದೆ. ಇದು ದೇಶದಲ್ಲಿ ದುರಂತ. ರಾಷ್ಟ್ರಮಟ್ಟದಲ್ಲಿ ಬಿಜೆಪಿಯೇತರ ಪರ್ಯಾಯ ಪಕ್ಷ ತಲೆ ಎತ್ತಬೇಕು ಎಂದು ಅಭಿಪ್ರಾಯಪಟ್ಟರು. 
 
ಮುಂದೆ ರಾಜಕಾರಣ ಮಾಡಬೇಕಾದರೆ ಕಾಂಗ್ರೆಸ್ ಪಕ್ಷ ಸೇರುವ ಅನಿವಾರ್ಯತೆ ಇದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಸೇರಲು ನಿರ್ಧರಿಸಿದ್ದೇನೆ. ಇದಕ್ಕೆ ಕಾಂಗ್ರೆಸ್ ಮುಖಂಡರು ಅಡ್ಡಿಪಡಿಸುವುದಿಲ್ಲ ಎಂಬ ವಿಶ್ವಾಸ ಇದೆ ಎಂದರು. 
 
ರಾಯಣ್ಣ ಬ್ರಿಗೇಡ್ ಬಿಕ್ಕಟ್ಟು ಕುರಿತು ಪ್ರತಿಕ್ರಿಯೆ ನೀಡಿರುವ ಕೆಜೆಪಿ ಶಾಸಕ ಬಿ.ಆರ್.ಪಾಟೀಲ್, ಬಿದೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ನಡುವಿನ ಜಗಳ ಮುಂದುವರೆದರೆ ಮೂರನೇಯವರಿಗೆ ಲಾಭ ಖಚಿತ ಎಂದು ಭವಿಷ್ಯ ನುಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಸಿಬ್ಬಂದಿ