Webdunia - Bharat's app for daily news and videos

Install App

ಈಶ್ವರಪ್ಪ ವಿರುದ್ಧ ಆಯನೂರು ಗರಂ

Webdunia
ಗುರುವಾರ, 23 ಮಾರ್ಚ್ 2023 (16:30 IST)
ಶಿವಮೊಗ್ಗದಲ್ಲಿ ಯುಗಾದಿ ಶುಭಾಶಯ ಕೋರಿ ಫ್ಲೆಕ್ಸ್ ಅಳವಡಿಸಿದ್ದ ವಿಚಾರ ಕುರಿತು MLC ಆಯನೂರ್​​ ಮಂಜುನಾಥ್​​
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದಾರೆ. ​ಫ್ಲೆಕ್ಸ್ ಹಾಕಿದ್ದಕ್ಕೆ ಕೆಲವರಿಗೆ ಬೇಸರವಾಗಿದೆ, ಇನ್ನೂ ಕೆಲವರಿಗೆ ನನ್ನ ಫ್ಲೆಕ್ಸ್​ನಿಂದ ಖುಷಿಯಾಗಿದೆ. ಬಹಳಷ್ಟು ಜನರು ನನಗೆ ಫೋನ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಪರೋಕ್ಷವಾಗಿ ಮಾಜಿ ಸಚಿವ K.S. ಈಶ್ವರಪ್ಪಗೆ ಮಂಜುನಾಥ್ ತಿರುಗೇಟು ನೀಡಿದ್ದಾರೆ. 32 ವರ್ಷಗಳ ಕಾಲ K.S ಈಶ್ವರಪ್ಪನವರಿಗೆ ಪಕ್ಷ ಅಧಿಕಾರ ನೀಡಿದೆ. ಅವರು ಸುರಕ್ಷಿತ ಕ್ಷೇತ್ರದಲ್ಲಿ ಗೂಟ ಹಾಕಿಕೊಂಡು ಕುಳಿತಿದ್ದಾರೆ. ಅನೇಕ ಹಿರಿಯರು ಸಮರ್ಥರು ಪಕ್ಷದಲ್ಲಿದ್ದಾರೆ. ಸಿದ್ದರಾಮಣ್ಣ, ಭಾನುಪ್ರಕಾಶ್, ರುದ್ರೇಗೌಡ ಸೇರಿದಂತೆ ಅನೇಕರಿದ್ದಾರೆ. ಅವರೆಲ್ಲರನ್ನೂ ಬಿಟ್ಟು ಈಶ್ವರಪ್ಪ ತಮ್ಮ ಮಗನಿಗೆ ಟಿಕೆಟ್ ಕೇಳುತ್ತಿದ್ದಾರೆ ಎಂದು ಕಿಡಿಕಾರಿದ್ರು. ಹೀಗಾಗಿ ನಾನು ಟಿಕೆಟ್ ಕೇಳುತ್ತಿದ್ದೇನೆ.
 
ಲಜ್ಜೆ, ನಾಚಿಕೆ ಪಟ್ಟು ಇರದ ವ್ಯಕ್ತಿಗಳಿಂದ ರಾಜಕೀಯ ಕಲುಷಿತಗೊಂಡಿದೆ. ನಾನು ಬಿಸ್ಕೆಟ್​ಗಾಗಿ ಜೀವನ ನಡೆಸಿಲ್ಲ.
ಕೆಲವರು ಕೆಲವರ ಬಿಸ್ಕೆಟ್ ತಿಂದು ನನ್ನ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ವಿರುದ್ಧ ಕಟುವಾಗಿ ಟೀಕಿಸಿದ್ರು.
ನನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾದರೆ ಟೀಕೆ ಮಾಡಿಕೊಳ್ಳಿ. ಆದರೆ, ನನ್ನ ವಿರುದ್ಧ ಅಶ್ಲೀಲ ಪದಗಳ ಬಳಕೆ ಬೇಡ ಎಂದು ಹೇಳಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments