ಹಾಸನ ಜಿಲ್ಲೆಯ ಶಾಂತಿ ಗ್ರಾಮದ ದೇವಿಹಳ್ಳಿಯ ಸೈನಿಕ ಸಂದೀಪ್ ಶೆಟ್ಟಿ (28) ಅವರು ಜಮ್ಮು ಕಾಶ್ಮೀರದ ಗಾಂಧರ್ಬಲ್‌ನಲ್ಲಿ ನಡೆದ ಹಿಮಪಾತದಲ್ಲಿ ವೀರಮರಣ ಹೊಂದಿದ್ದಾರೆ. ಇಂದು ಅವರ ಮೃತದೇಹವನ್ನು ಸ್ವಂತಗ್ರಾಮಕ್ಕೆ ತರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಬುಧವಾರ ಸೇನಾ ಕ್ಯಾಂಪ್ ಮೇಲೆ ಹಿಮಬಂಡೆ ಉರುಳಿದ ಪರಿಣಾಮವಾಗಿ ಸಂದೀಪ್ ಶೆಟ್ಟಿ ಸೇರಿದಂತೆ 13 ಸೈನಿಕರು ವೀರಮರಣ ಹೊಂದಿದ್ದರು.
ಸೈನಿಕ ಸಂದೀಪ್ ಶೆಟ್ಟಿ ಅವರು ಮುಂದಿನ ವಾರ ಮನೆಗೆ ಮರಳುವವರಿದ್ದರು ಎಂದು ತಿಳಿದು ಬಂದಿದ್ದು, 8 ವರ್ಷಗಳ ಹಿಂದೆ ಸೈನ್ಯ ಸೇರಿದ್ದ ಇವರಿಗೆ ಫೆಬ್ರವರಿ 22ಕ್ಕೆ ಮದುವೆ ನಿಶ್ಚಯವಾಗಿತ್ತು.
ದುರ್ಘಟನೆಗೆ ಬಲಿಯಾಗುವ ಮುನ್ನ ಮನೆಗೆ ಫೋನ್ ಕರೆ ಮಾಡಿದ್ದ ಸಂದೀಪ್ ಹಿಮಪಾತವಾಗುತ್ತಿರುವ ಬಗ್ಗೆ ಹೇಳಿದ್ದ. ಫೆಬ್ರವರಿ 8 ಅಥವಾ 9 ಕ್ಕೆ ಮನೆಗೆ ಬರುತ್ತೇನೆ. ಶಬರಿಮಲೆಗೆ ಹೋಗಬೇಕು ಎಂದಿದ್ದ ಎಂದು ಆತನ ಸಂಬಂಧಿಕರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ