Select Your Language

Notifications

webdunia
webdunia
webdunia
webdunia

ಆಟೋ ಪ್ರಯಾಣ ದರ ಬಲು ದುಬಾರಿ.‌!

ಆಟೋ ಪ್ರಯಾಣ ದರ ಬಲು ದುಬಾರಿ.‌!
bangalore , ಬುಧವಾರ, 1 ಡಿಸೆಂಬರ್ 2021 (19:49 IST)
ಬೆಂಗಳೂರು:  ಆಟೋ ಪ್ರಯಾಣ ದರ ಕನಿಷ್ಠ 25 ರೂಪಾಯಿ ಇರುವುದಿಲ್ಲ. ಬದಲಿಗೆ ಪರಿಷ್ಕೃತ ದರ ಜಾರಿಯಾಗಲಿದೆ.‌ ಕನಿಷ್ಠ ದರ  ಮೊದಲ 2 ಕಿಲೋಮೀಟರ್​​ಗೆ 30 ರೂ. ನೀಡಬೇಕಿದೆ. ನಂತರ ಪ್ರತಿ ಕಿಲೋ ಮೀಟರ್​ಗೆ 15 ರೂ. ದರ ನಿಗದಿಯಾಗಿದೆ.
ಗ್ಯಾಸ್ ದರ ಹೆಚ್ಚಳ ಬೆನ್ನಲ್ಲೇ ಆಟೋ ದರ ಪರಿಷ್ಕರಣೆಗೆ ಆಟೋ ಚಾಲಕರು ಪಟ್ಟು ಹಿಡಿದಿದ್ದರು. ಈ ಮೊದಲು ಕನಿಷ್ಠ 2 ಕಿಲೋ ಮೀಟರ್​ಗೆ ಪ್ರಯಾಣ ದರ 25 ರೂ. ಇತ್ತು. ಇದೀಗ ಆಟೋ ಪ್ರಯಾಣದ ಕನಿಷ್ಠ ದರವನ್ನು 5 ರೂ. ಏರಿಕೆ ಮಾಡಲಾಗಿದೆ.‌
ಬೆಂಗಳೂರಿನಲ್ಲಿ ಆಟೋ ದರ ಪರಿಷ್ಕರಣೆ ಮಾಡಿ ಹೊಸ ಆದೇಶ ಹೊರಡಿಸಿದ್ದು, ಬರೋಬ್ಬರಿ 8 ವರ್ಷದ ಬಳಿಕ ಆಟೋ ದರ ಪರಿಷ್ಕರಣೆ ಮಾಡಲಾಗಿದೆ. ಪ್ರಸುತ್ತ ಹೊಸ ಪರಿಷ್ಕರಣೆ ದರವೂ   ಅನ್ವಯವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸ್ ಅಧಿಕಾರಿ ಎಂದು ಹೇಲಿಕೊಂಡು ವಂಚಿಸುತ್ತಿದ್ದ ವ್ಯಕ್ತಿ