ಮತ್ತೊಂದು ಅಭಿಯಾನ ಆರಂಭಿಸಿದ ಆಟೋ ಚಾಲಕರು

Webdunia
ಮಂಗಳವಾರ, 28 ಮಾರ್ಚ್ 2023 (14:43 IST)
ಆಟೋ ಚಾಲಕರ ಅಭಿಯಾನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.ಆಟೋ ಚಾಲಕರ ಹೆಂಡತಿ, ಮಕ್ಕಳ ವಿಡಿಯೋ ಹಾಕಿ ನಮ್ಮ ಫ್ಯಾಮಿಲಿ ಈ ಬಾರಿ ಎಲೆಕ್ಷನ್ ನಲ್ಲಿ ಓಟ್ ಹಾಕಲ್ಲ ಎಂದು ವಿಡಿಯೋ ‌ಮಾಡಿ ಆಟೋ ಚಾಲಕರು ಪೋಸ್ಟ್ ಮಾಡುತ್ತಿದ್ದಾರೆ. 
 
ರ್ಯಾಪಿಡೋ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡಲಿಲ್ಲ ಅಂದರೆ ಈ ಬಾರಿಯ ಚುನಾವಣಾ ಬಹಿಷ್ಕಾರ ಮಾಡುವ ಎಚ್ಚರಿಕೆ ಕೊಟ್ಟಿದ್ದಾರೆ.ರ್ಯಾಪಿಡೋ ಬೈಕ್ ಟ್ಯಾಕ್ಸಿಯಿಂದ ಮಕ್ಕಳಿಗೆ ಸ್ಕೂಲ್ ಫೀಸ್ ಕಟ್ಟಲು ಆಗ್ತಿಲ್ಲ.ತಂದೆ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು ಅವರಿಗೆ ಮೆಡಿಸಿನ್ ಕೊಡಿಸಲು ಆಗ್ತಿಲ್ಲ.ರ್ಯಾಪಿಡೋ ‌ಬೈಕ್ ಟ್ಯಾಕ್ಸಿ ಯಿಂದ ಆಟೋ ಚಾಲಕರು ಜೀವನ ನಡೆಸಲು ಆಗ್ತಿಲ್ಲ.ದಯವಿಟ್ಟು ಸಾರಿಗೆ ಸಚಿವ ಶ್ರೀ ರಾಮುಲು ರ್ಯಾಪಿಡೋ ಬೈಕ್ ಟ್ಯಾಕ್ಸಿ ಬ್ಯಾನ್ ಎಂದು ಚಾಲಕರು ಮನವಿ ಮಾಡಿದಾರೆ.
 
ಈಗಾಗಲೇ ಸಾರಿಗೆ ಸಚಿವ ಶ್ರೀ ರಾಮುಲು ಕಳೆದ ವಾರ ಬಳ್ಳಾರಿಯಲ್ಲಿ ಎಲೆಕ್ಷನ್ ಒಳಗೆ ಆಟೋ ಚಾಲಕರಿಗೆ ಸಿಹಿಸುದ್ದಿ ನೀಡ್ತಿನಿ , ರ್ಯಾಪಿಡೋ ಬೈಕ್ ಟ್ಯಾಕ್ಸಿ ಬ್ಯಾನ್ ‌ಮಾಡಲು ಸಾರಿಗೆ ಇಲಾಖೆಯ ಕಾರ್ಯದರ್ಶಿ  ಮತ್ತು ಆರ್ಟಿಓ ಕಮೀಷನರ್ ಗೆ ಹೇಳಿದ್ದೀನಿ ಎಂದು ಹೇಳಿಕೆ ನೀಡಿದ್ರು .ಆದರೆ ಒಂದು ವಾರ ಕಳೆದ್ರು ಇನ್ನೂ ಯಾವುದೇ ರ್ಯಾಪಿಡೋ ಬ್ಯಾನ್ ಮಾಡುವ ಆದೇಶ ಹೊರಡಿಸಿಲ್ಲ .ಹಾಗಾಗಿ ಆಟೋ ಚಾಲಕರು ಮಾತು ತಪ್ಪಿದ ಶ್ರೀ ರಾಮುಲು ಎಂದು ಹೆಂಡತಿ ಮಕ್ಕಳೊಂದಿಗೆ ವಿಡಿಯೋ ಮಾಡುವ ಮೂಲಕ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.29 ರಂದು ರ್ಯಾಪಿಡೋ ಬೈಕ್ ಟ್ಯಾಕ್ಸಿ ಸಂಬಂಧಿಸಿದಂತೆ ‌ವಿಚಾರಣೆಯಿದ್ದು,ಅಂದು ಚಾಲಕರಿಗೆ ಕೋರ್ಟ್ ನಲ್ಲಿ ನ್ಯಾಯ ಸಿಗುತ್ತದೆ ‌ಎಂದಿರುವ ಆರ್ಟಿಓ ಅಧಿಕಾರಿಗಳು ಈ ಹಿನ್ನೆಲೆಯಲ್ಲಿ 29 ರಂದು ಕೋರ್ಟ್ ನಲ್ಲಿ ಚಾಲಕರಿಗೆ ನ್ಯಾಯ ಸಿಗಲಿಲ್ಲ ಎಂದರೆ 30 ರಂದು ಏರ್ಪೋರ್ಟ್ ರೋಡ್ ಮತ್ತು ಕಾರ್ಪೋರೇಷನ್ ಸರ್ಕಲ್ ನಲ್ಲಿ ಆಟೋಗಳನ್ನು ನಿಲ್ಲಿಸಿ ರೋಡ್ ಬಂದ್ ಮಾಡ್ತಿವಿ ಎಂದು ಆಟೋಚಾಲಕರು ಎಚ್ಚರಿಕೆ ನೀಡಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಿಕೆ ಶಿವಕುಮಾರ್ ಶಿಕಾರಿಪುರದಲ್ಲಿ ಸ್ಪರ್ಧಿಸಲಿ: ವಿಜಯೇಂದ್ರ ಸವಾಲು

ಕಮಿಷನರ್ ಗೆ ಜೀವಬೆದರಿಕೆ ಹಾಕಿದ ಕೈ ನಾಯಕ ರಾಜೀವ್ ಗೌಡ ಬಂಧನವಾಗಬೇಕು: ಛಲವಾದಿ ನಾರಾಯಣಸ್ವಾಮಿ

ರಾಹುಲ್ ಗಾಂಧಿ ಜೊತೆ ಏನು ಚರ್ಚೆ ಮಾಡಿದ್ರಿ ಎಂದರೆ ಡಿಕೆ ಶಿವಕುಮಾರ್ ಹೇಳಿದ್ದೇನು

ಕಾಂಗ್ರೆಸ್ ಕುರ್ಚಿ ಕದನಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ: ಬಿವೈ ವಿಜಯೇಂದ್ರ

ಶಬರಿಮಲೆಯಲ್ಲಿ ಕನ್ನಡಿಗರ ವಾಹನ ತಡೆದು ಕೇರಳ ಉದ್ಧಟತನ: ಜೆಡಿಎಸ್ ಆಕ್ರೋಶ

ಮುಂದಿನ ಸುದ್ದಿ
Show comments