ಆಟೋ ಚಾಲಕರಿಗೆ ಶಾಕ್ ನೀಡಿದ ನಮ್ಮ ಮೆಟ್ರೋ

Webdunia
ಬುಧವಾರ, 5 ಅಕ್ಟೋಬರ್ 2022 (14:48 IST)
ರಾಜಧಾನಿ ಬೆಂಗಳೂರಿನಲ್ಲಿ ಆಟೋ ಚಾಲಕರ ಸುಲಿಗೆಗೆ ನಮ್ಮ ಮೆಟ್ರೋ ನಿಗಮದಿಂದಲೇ ಬ್ರೇಕ್ ಬಿದ್ದಿದೆ. ಬಿಎಂ ಆರ್ ಸಿಎಲ್ ನಿರ್ಧಾರದಿಂದ ಇದೀಗ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಆದರೆ ಆಟೋ ಚಾಲಕರಿಗೆ ಮಾತ್ರ ಈ ನಿರ್ಧಾರ ಶಾಕ್ ನೀಡಿದೆ.
ಮೆಟ್ರೋ ನಿಲ್ದಾಣದಲ್ಲಿ ಪ್ರೀಪೇಡ್ ಆಟೋ ವ್ಯವಸ್ಥೆ ಮಾಡಲಾಗುವುದು. ಆಟೋ ಚಾಲಕರ ಸುಲಿಗೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬಿಎಂಆರ್ ಸಿಎಲ್ ಈ ನಿರ್ಧಾರ ಕೈಗೊಂಡಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಹೊರ ಬೀಳಲಿದೆ.
 
ಇನ್ನು ಮುಂದೆ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಪ್ರಿಪೇಯ್ಡ್ ಆಟೋ ಸೇವೆ ಲಭ್ಯವಾಗಲಿದೆ. ಡಿಸೆಂಬರ್ ಒಂದರಿಂದಲೇ ಪ್ರಿಪೇಡ್ ಆಟೋ ಸೇವೆ ಆರಂಭವಾಗುವ ನಿರೀಕ್ಷೆ ಇದೆ. ಬನಶಂಕರಿ, ಬೈಯಪ್ಪನಹಳ್ಳಿ, ನಾಗಸಂದ್ರ, ಮೆಜೆಸ್ಟಿಕ್ ನಲ್ಲಿ ಪ್ರಾಯೋಗಿಕ ಪ್ರೀ ಪೇಯ್ಡ್ ಆಟೋ ಆರಂಭವಾಗಲಿದೆ. RTO ನಿಗದಿ ಪಡಿಸಿರುವ ಮೀಟರ್ ದರಕ್ಕೆ ಅನುಗಗುಣವಾಗಿಯೇ ಪ್ರೀ ಪೇಯ್ಡ್ ಆಟೋ ದರ ನಿಗದಿ ಮಾಡಲಾಗುವುದು. ರಾತ್ರಿ ಹೊತ್ತು ಒಂದೂವರೆ ಪಟ್ಟು ದರ ಪಾವತಿಸಬೇಕಾಗುತ್ತದೆ. ನಮ್ಮ ಮೆಟ್ರೋ ಪ್ರಯಾಣಿಕರಿಗೆ ದಿನದ 24 ತಾಸೂ ಕೂಡ ಆಟೋ ಸೇವೆ ಲಭ್ಯವಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆನಂದಪುರ ಅಗ್ನಿ ಅವಘಡ, ಮೃತರ ಕುಟುಂಬಕ್ಕೆ ಪ್ರಧಾನಿ ಮೋದಿ ಪರಿಹಾರ ಘೋಷಣೆ

ಕರ್ಹಾ, ನೀರಾ ನದಿ ಸಂಗಮದಲ್ಲಿ ಅಜಿತ್ ಪವಾರ್ ಅಸ್ತಿ ವಿಸರ್ಜನೆ

ಆತ್ಮಹತ್ಯೆಗೆ ಶರಣಾದ ಸಿಜೆ ರಾಯ್ ಬಿಗ್-ಬಜೆಟ್ ಸಿನಿಮಾಕ್ಕೂ ಬಂಡವಾಳ ಹೂಡಿದ್ದರು

ವಾಕಿಂಗ್ ಮಾಡುತ್ತಿದ್ದ ಮಹಿಳೆ ಮೇಲೆ ಸಾಕು ನಾಯಿ ದಾಳಿ, ಸಾರ್ವಜನಿಕ ವಲಯದಲ್ಲಿ ಆತಂಕ

BigBreaking: ಕಾನ್ಫಿಡೆಂಟ್‌ ಗ್ರೂಪ್‌ನ ಮಾಲೀಕ ಸಿಜೆ ರಾಯ್ ಆತ್ಮಹತ್ಯೆ

ಮುಂದಿನ ಸುದ್ದಿ
Show comments