ಕಾರಿನ ಟಯರ್ ಬ್ಲಾಸ್ಟ್ ನಡುವೆಯೂ ಬೇಕಾಬಿಟ್ಟಿ ಚಾಲನೆ

Webdunia
ಶನಿವಾರ, 25 ಮಾರ್ಚ್ 2023 (20:20 IST)
ಟಯರ್ ಬ್ಲಾಸ್ಟ್ ಆದರೂ ಸಹ ಚಾಲಕನೊಬ್ಬ ಕಿ.ಮೀಟರುಗಟ್ಟಲೇ ರಿಮ್ ನಲ್ಲಿ ಅತಿವೇಗವಾಗಿ ಕಾರು ಚಲಾಯಿಸಿದ ಘಟನೆ ಇಂದು ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಂದಿರಾನಗರದಿಂದ ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ಯುವಕನೊಬ್ಬ ಮನಸೋ ಇಚ್ಚೆ ತನ್ನ ಟಯೋಟಾ ಗ್ಲಾಂಜಾ ಕಾರು ಚಲಾಯಿಸಿದ್ದು ಕಾರಿನ ವೇಗಕ್ಕೆ ಟಯರ್ ಬ್ಲಾಸ್ಟ್ ಆಗಿದೆ. ಆದರೂ ಸಹ ರಿಮ್ ನಲ್ಲೆ  ಕಾರು ಚಲಾಯಿಸಿದ್ದಾನೆ.
 
ಸುಮಾರು 100-120 ಕಿಲೋಮೀಟರ್ ವೇಗದಲ್ಲಿ ಸಾಗುತ್ತಿದ್ದ ಕಾರನ್ನ ಕಂಡು ಜನ  ಭಯಭೀತರಾಗಿದ್ದಾರೆ. ಕಾರಿನ ವೇಗ ನೋಡಿದ ರಾತ್ರಿ ಪಾಳಿ ಪೊಲೀಸರು ಸುಮಾರು 2-3 ಕಿ.ಮೀ ದೂರು ಸಹ ಕಾರನ್ನ ಫಾಲೋ ಮಾಡಿದ್ದಾರೆ. ಕೊನೆಗೆ ಕಾರಿನ ಆಕ್ಸೆಲ್ ಕಟ್ ಆಗಿದ್ದಕ್ಕೆ ಮುನಿಯಪ್ಪ ಸರ್ಕಲ್ ಬಳಿ ಕಾರು ನಿಂತಿದೆ. ಮದ್ಯದ ಅಮಲಿನಲ್ಲಿ ಪುಂಡಾಟವೆಸಗಿದ ಅನುಮಾನದಲ್ಲಿ ತಕ್ಷಣವೇ ಆರೋಪಿ ಯುವಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಪೊಲೀಸ್ ಹೊಯ್ಸಳದಲ್ಲಿ ಠಾಣೆಗೆ ಹೋದ ಯುವಕ ಕೆಲವೇ ಸಮಯದಲ್ಲಿ ತನ್ನ ಮನೆಗೆ ವಾಪಾಸಾಗಿದ್ದಾನೆ‌. ಐಷಾರಾಮಿ ಕಾರಿನಲ್ಲಿ ಬಂದ ಯುವಕನ ಕಡೆಯವರನ್ನ ನೋಡಿದ ಪೊಲೀಸರು ಆತನನ್ನ ಬಿಟ್ಟು ಕಳುಹಿಸಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬರ ಪರಿಸ್ಥಿತಿಯಿಂದ ಕುಡಿಯುವ ನೀರಿಗೆ ತೊಂದರೆ ಆಗಬಾರದೆಂದು ಡಿಕೆ ಶಿವಕುಮಾರ್ ಮಹತ್ವದ ಘೋಷಣೆ

ಬಂಟ್ವಾಳದ ಲಾವಣ್ಯ ಹತ್ಯೆ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ನೀಡಿದವರಿಗೆ ಬಿಗ್ ಶಾಕ್

ಅಯೋಧ್ಯೆ ರಾಮಮಂದಿರದ ದೇಣಿಗೆ 'ಕಳ್ಳತನ': ಪ್ರಧಾನಿ ಮೋದಿಗೆ ಪತ್ರ ಬರೆದ ರಾಹುಲ್‌, ಖರ್ಗೆ

ದೀರ್ಘಕಾಲದ ಸಂಗಾತಿ ಕಳೆದುಕೊಂಡ ದೇವೇಗೌಡರ ಕಣ್ಣೀರು ಒರೆಸಿ ಸಂತೈಸಿದ ಮಾಜಿ ಸಿಎಂ ಸಿದ್ದರಾಮಯ್ಯ

ರಾಮಮಂದಿರ ದೇಣಿಗೆ ವಿವಾದ, ಪ್ರಧಾನ ಮಂತ್ರಿಯವರೇ, ಮೌನ ಮುರಿಯಿರಿ: ಜೈರಾಮ್ ರಮೇಶ್

ಮುಂದಿನ ಸುದ್ದಿ
Show comments