Select Your Language

Notifications

webdunia
webdunia
webdunia
webdunia

ಕೂಡಲಸಂಗಮದ ಸ್ವಾಮೀಜಿಯನ್ನು ಮುಗಿಸುವ ಯತ್ನ: ಅರವಿಂದ ಬೆಲ್ಲದ ಆರೋಪ

ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ

Sampriya

ಹುಬ್ಬಳ್ಳಿ , ಸೋಮವಾರ, 21 ಜುಲೈ 2025 (17:15 IST)
Photo Credit X
ಹುಬ್ಬಳ್ಳಿ: ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ವಿಷಪೂರಿತ ಆಹಾರ ಸೇವನೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ತಿನ್ನುವ ಆಹಾರದಲ್ಲಿ ವಿಷ ಬೆರೆಸಿರುವುದಾಗಿ ಸ್ವಾಮೀಜಿಯವರೇ ಸಂಶಯ ವ್ಯಕ್ತಪಡಿಸಿದ್ದು, ಇದು ಸತ್ಯವಾಗಿದ್ದರೆ ದೊಡ್ಡ ದೃಷ್ಕೃತ್ಯವಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಮುಗಿಸಿದರೆ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಬೇಡಿಕೆಯ ಹೋರಾಟ ಅಂತ್ಯವಾಗಲಿದೆ ಎಂದು ಈ ಮೂಲಕ ಕಾಂಗ್ರೆಸ್ ಸರ್ಕಾರ ಭಾವಿಸಿದಂತಿದೆ ಎಂದರು.

ಕೆಲ ದಿನಗಳ ಹಿಂದೆ ಪಂಚಮಸಾಲಿ ಮಠಕ್ಕೆ ಬೀಗ ಹಾಕಲಾಗಿತ್ತು. ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಸ್ವಾಮೀಜಿ ಮಠಕ್ಕೆ ಮರಳಿದ್ದರು. ಅಲ್ಲಿ ನಡೆಯುವ ಬೆಳವಣಿಗೆ ಗಮನಿಸಲು ಕೆಲವರು ಮುಸ್ಲಿಂ ಯುವಕರನ್ನು ಬಿಟ್ಟಿದ್ದರು. ಅವರು ಅಡುಗೆ ಮನೆಗೆ ಹೋಗಿದ್ದ ದಿನವೇ, ಸ್ವಾಮೀಜಿ ಅವರ ಆರೋಗ್ಯ ಹದಗೆಟ್ಟಿತ್ತು ಗಂಭೀರ ಆರೋಪ ಮಾಡಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯಗೆ ಮುಡಾ ರಿಲೀಫ್: ಸತ್ಯವೇ ಗೆದ್ದಿದೆ ಎಂದ ರಣದೀಪ್ ಸುರ್ಜೇವಾಲ