Select Your Language

Notifications

webdunia
webdunia
webdunia
webdunia

ಏಕಕಾಲಕ್ಕೆ15ಕ್ಕೂ ಹೆಚ್ಚು ಕಡೆ ದಾಳಿ,ವೈದ್ಯೆ ಸೇರಿ ಹಲವು ಮಂದಿಗೆ ಶಾಕ್

ಏಕಕಾಲಕ್ಕೆ15ಕ್ಕೂ ಹೆಚ್ಚು ಕಡೆ ದಾಳಿ,ವೈದ್ಯೆ ಸೇರಿ ಹಲವು ಮಂದಿಗೆ ಶಾಕ್
bangalore , ಬುಧವಾರ, 4 ಅಕ್ಟೋಬರ್ 2023 (17:22 IST)
ಬೆಂಗಳೂರಿನಲ್ಲಿ ಇಂದು ಐಟಿ ಅಧಿಕಾರಿಗಳಿಂದ ಬೃಹತ್‌ ದಾಳಿ ನಡೆದಿದೆ. ಏಕಕಾಲಕ್ಕೆ ನಗರದ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆದಿದ್ದು, ವಿಜಯನಗರ ಬಿಟಿಎಂ, ಹುಳಿಮಾವು, ಸದಾಶಿವನಗರ, ಸ್ಯಾಂಕಿ ಟ್ಯಾಂಕ್ ಸೇರಿದಂತೆ ಹಲವೆಡೆ ದಾಳಿಯಾಗಿದೆ. 15 ಕ್ಕೂ ಹೆಚ್ಚು ಐಟಿ ಅಧಿಕಾರಿಗಳ‌ ತಂಡಗಳಿಂದ ದಾಳಿ ನಡೆದಿದೆ. ಈ ಮೆಗಾ ರೇಡ್ ಗೆ ಚೆನ್ನೈ, ದೆಹಲಿಯಿಂದ ರಾತ್ರೋರಾತ್ರಿ ಬೆಂಗಳೂರಿಗೆ ಐಟಿ ಅಧಿಕಾರಿಗಳು ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತೆರಿಗೆ ವಂಚನೆ ಮಾಡಿರೋ ಖಾಸಗಿ ಕಂಪನಿಗಳು, ಅದರ ಮಾಲೀಕರು ಹಾಗೂ ಚಿನ್ನದ ವ್ಯಾಪಾರಿಗಳ‌ ಮನೆ ಮೇಲೆ ದಾಳಿ‌ ನಡೆಸಿರುವ ಬಗ್ಗೆ ಮಾಹಿತಿ ಇದೆ. ಸದ್ಯ ಮನೆ ಹಾಗೂ ಕಚೇರಿಗಳ‌‌ ಮೇಲೆ ದಾಳಿ ‌ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಿಂದ ಇನ್ನೂ ಹೋಗಿಲ್ಲ ಮುಂಗಾರು