ಕೆ.ಎಚ್.ಮುನಿಯಪ್ಪ ಮೇಲೆ ಅಟ್ರಾಸಿಟಿ ಕೇಸ್

Webdunia
ಮಂಗಳವಾರ, 26 ಮಾರ್ಚ್ 2019 (14:20 IST)
ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಸಂಸದ ಕೆ.ಎಚ್.ಮುನಿಯಪ್ಪ ಅತ್ಯಂತ ಸಿರಿವಂತರಾಗಿದ್ದಾರೆ.
ಕೆ.ಎಚ್.ಮುನಿಯಪ್ಪಗಿಂತ ಪತ್ನಿ ನಾಗರತ್ನಮ್ಮ ಸಿರಿವಂತೆಯಾಗಿದ್ದಾರೆ. ಕೆ.ಎಚ್.ಮುನಿಯಪ್ಪ 96.35 ಲಕ್ಷ ರುಪಾಯಿ ಚರಾಸ್ತಿ ಹೊಂದಿದ್ದರೆ, ಪತ್ನಿ ನಾಗರತ್ನಮ್ಮ ಬಳಿ 3.45 ಕೋಟಿ ರುಪಾಯಿ ಚರಾಸ್ತಿ ಇದೆ.

ಕೆ.ಎಚ್.ಮುನಿಯಪ್ಪ ಬಳಿ 8.50 ಕೋಟಿ ಸ್ಥಿರಾಸ್ತಿ ಇದ್ದರೆ, ಪತ್ನಿ ಹೆಸರಿನಲ್ಲಿ 14.11 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ.

ಕೆ.ಎಚ್.ಮುನಿಯಪ್ಪ ಹೆಸರಿನಲ್ಲಿ 8 ಎಕರೆ 18 ಗುಂಟೆ ಜಮೀನು ಇದೆ. ಪತ್ನಿ ನಾಗರತ್ನಮ್ಮ ಹೆಸರಿನಲ್ಲಿ 243  ಎಕರೆ 2 ಗುಂಟೆ ಜಮೀನು ಇದೆ. ಕೆ.ಎಚ್.ಮುನಿಯಪ್ಪ ಕೈಯಲ್ಲಿ 15.75 ಲಕ್ಷ ನಗದು ಇದ್ದರೆ, ಪತ್ನಿ ನಾಗರತ್ನಮ್ಮ 1.22 ಲಕ್ಷ ರೂಗಳ ನಗದು ಹೊಂದಿದ್ದಾರೆ. ಕೆ.ಎಚ್.ಮುನಿಯಪ್ಪರ ಬಳಿ ಇನ್ನೋವ ಕಾರು, 3 ಲಕ್ಷ ಮೌಲ್ಯದ 100 ಗ್ರಾಂ ಚಿನ್ನವಿದೆ. ಪತ್ನಿಯ ಬಳಿ 865 ಗ್ರಾಂ ಚಿನ್ನಾಭರಣ ಮತ್ತು 2.49 ಲಕ್ಷ ಮೌಲ್ಯದ 6 ಕೆಜಿ ಬೆಳ್ಳಿ ಆಭರಣಗಳಿವೆ. 14.37 ಕೋಟಿ ರೂಪಾಯಿ ಸಾಲವನ್ನ ಕೆ.ಎಚ್.ಮುನಿಯಪ್ಪ, ಪತ್ನಿ ನಾಗರತ್ನಮ್ಮ ವಿವಿಧ ಬ್ಯಾಂಕ್ ಗಳಿಂದ  ಮಾಡಿಕೊಂಡಿದ್ದಾರೆ.

ನಾಗರತ್ನಮ್ಮ ತನ್ನ ಸೊಸೆ ಶ್ರುತಿಶ್ರೀಯವರಿಂದಲೇ 3.45 ಕೋಟಿ ರುಪಾಯಿ ಗಳ ಸಾಲ ಮಾಡಿದ್ದಾರೆ.
ಗಂಡ ಕೆ.ಎಚ್.ಮುನಿಯಪ್ಪರಿಂದ 30.37 ಲಕ್ಷ ರೂಗಳ ಸಾಲ ಮಾಡಿದ್ದಾರೆ. ಇನ್ನು ಕೆ.ಎಚ್.ಮುನಿಯಪ್ಪ ಮೇಲೆ ಅಟ್ರಾಸಿಟಿ ಪ್ರಕರಣ ಕೂಡಾ ಇದೆ. ಹೀಗಂತ ಚುನಾವಣೆಗೆ ಸಲ್ಲಿಸಿರುವ ನಾಮಪತ್ರದಲ್ಲಿ ಅವರು ನಮೂದಿಸಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತ್ತಷ್ಟು ಕಳಪೆ ಮಟ್ಟಕ್ಕೆ ಇಳಿದ ವಾಯು ಗುಣಮಟ್ಟ

ಕರೂರು ಕಾಲ್ತುಳಿತದ ಬಳಿಕ ಬಿಗಿ ಭದ್ರತೆಯಲ್ಲಿ ಚುನಾವಣಾ ರ‍್ಯಾಲಿ ಶುರು ಮಾಡಿದ ನಟ ವಿಜಯ್‌

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕುರ್ಚಿ ಫೈಟ್ ಗೆ ನಾನೂ ಇದ್ದೀನಿ ಎಂದು ಎಂಟ್ರಿ ಕೊಟ್ಟವರು ಯಾರು

ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಭೇಟಿಗೆ ದಿನಗಣನೆ: ರಾಜ್ಯ ಪ್ರವಾಸದ ಕಂಪ್ಲೀಟ್‌ ವೇಳಾಪಟ್ಟಿ ಇಲ್ಲಿದೆ

ಡಿಕೆಶಿ ಇಷ್ಟೆಲ್ಲಾ ಮಾಡೋ ಬದಲು ಅಮಿತ್ ಶಾ ಜೊತೆಗಿರುವ ಫೋಟೋ ಹಾಕಿದ್ರೆ ಸಾಕಾಗ್ತಿತ್ತು

ಮುಂದಿನ ಸುದ್ದಿ
Show comments