Select Your Language

Notifications

webdunia
webdunia
webdunia
webdunia

ಎಸ್‌ಪಿ-ಕಾಂಗ್ರೆಸ್ ಮೈತ್ರಿ ಗಂಗಾ-ಯಮುನಾ ಸಂಗಮದಂತೆ: ರಾಹುಲ್ ಗಾಂಧಿ

ಎಸ್‌ಪಿ-ಕಾಂಗ್ರೆಸ್ ಮೈತ್ರಿ ಗಂಗಾ-ಯಮುನಾ ಸಂಗಮದಂತೆ: ರಾಹುಲ್ ಗಾಂಧಿ
ಲಖನೌ , ಭಾನುವಾರ, 29 ಜನವರಿ 2017 (14:47 IST)
ಎಸ್‌ಪಿ-ಕಾಂಗ್ರೆಸ್ ಪಕ್ಷದ ಮೈತ್ರಿ ಗಂಗಾ-ಯಮುನಾ ಸಂಗಮದಂತೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ಲಖನೌದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್‌ಪಿ-ಕಾಂಗ್ರೆಸ್ ಮೈತ್ರಿಯಿಂದ ತುಂಬಾ ಸಂತೋಷವಾಗಿದೆ. ಈ ಮೈತ್ರಿಯಿಂದ ಉತ್ತರ ಪ್ರದೇಶದ ಜನತೆಗೆ ಇನ್ನಷ್ಟು ಧೈರ್ಯ ಬಂದಿದೆ. ಎರಡು ಪಕ್ಷಗಳು ಸೇರಿ 5 ವರ್ಷ ಉತ್ತಮ ಆಡಳಿತ ನೀಡುತ್ತೇವೆ ಎಂದು ಭರವಸೆ ನೀಡಿದರು.
 
ಉತ್ತರ ಪ್ರದೇಶದ ಯುವಜನತೆಗೆ ಮಾರ್ಗದರ್ಶನದ ಬಯಕೆ. ದ್ವೇಶದ ರಾಜಕಾರಣದಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ಸುಳ್ಳು ಭರವಸೆ ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
 
ಉತ್ತರ ಪ್ರದೇಶದ ಡಿಎನ್‌ಎಯಲ್ಲಿ ಪ್ರೀತಿ ಹಾಗೂ ಸಹೋದರತ್ವದ ಗುಣವಿದೆ ಬದಲಾಗಿ ಸಿಟ್ಟು, ಕ್ರೋಧವಿಲ್ಲ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಡುಗಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಸ್.ಎಂ.ಕೃಷ್ಣ ಬಿಜೆಪಿಗೆ ಬಂದ್ರೆ ಸ್ವಾಗತಿಸುತ್ತೇವೆ: ಸದಾನಂದಗೌಡ