Select Your Language

Notifications

webdunia
webdunia
webdunia
webdunia

ವಿಧಾನಸಭೆ ಸಚಿವಾಲಯ ಸಿಬ್ಬಂದಿ ನೇಮಕ; ಸ್ವತಂತ್ರ ತನಿಖೆಗೆ ಆಗ್ರಹ

ವಿಧಾನಸಭೆ ಸಚಿವಾಲಯ ಸಿಬ್ಬಂದಿ ನೇಮಕ; ಸ್ವತಂತ್ರ ತನಿಖೆಗೆ ಆಗ್ರಹ
ಹಾವೇರಿ , ಸೋಮವಾರ, 30 ಜುಲೈ 2018 (18:27 IST)
ವಿಧಾನ ಸಭೆ ಸಚಿವಾಲಯದಲ್ಲಿ ಸಚಿವಾಲಯದ ಸಿಬ್ಬಂದಿಗಳನ್ನು ಅಕ್ರಮವಾಗಿ ನೇಮಿಸಿರುವ ವಿಚಾರದಲ್ಲಿ ಮಾಜಿ ಸ್ಪೀಕರ್ ಕೋಳಿವಾಡ ಮತ್ತು ಅಂದಿನ ವಿಧಾನ ಸಭಾ ಕಾರ್ಯದರ್ಶಿ ಎಸ್. ಮೂರ್ತಿ ಹಾಗೂ ಅಂದಿನ ಮುಖ್ಯಮಂತ್ರಿ  ಸಿದ್ದರಾಮಯ್ಯ   ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಸ್ವತಂತ್ರ ತನಿಖೆ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.

 
ನ್ಯಾಯಮೂರ್ತಿ ಸಂತೋಷ ಹೆಗಡೆ ಹಾಗೂ ನ್ಯಾಯ ಮೂರ್ತಿ ವಿಕ್ರಮಜೀತ್ ಸೆನ್ ರವರನ್ನು ತನಿಖೆಗೆ ನೇಮಿಸಬೇಕು. ಬಗ್ಗೆ ಇಂದಿನ ಸ್ಪೀಕರ್ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಹಾವೇರಿ ಪ್ರವಾಸಿ ಮಂದಿರದಲ್ಲಿ ಎಸ್. ಆರ್. ಹಿರೇಮಠ ಹೇಳಿಕೆ ನೀಡಿದ್ದಾರೆ. ಈ ಪತ್ರಕ್ಕೆ ಕಾನೂನು ಸಲಹೆ ಪಡೆದು ವಿಚಾರಣೆ ಮಾಡಲಾಗುವದು ಅಂತಾ ಸ್ಪೀಕರ್ ಉತ್ತರ ನೀಡಿದ್ದಾರೆ ಇದನ್ನು ಸ್ವಾಗತ ಮಾಡುತ್ತೇವೆ. ಎಸ್. ಮೂರ್ತಿ ವಿಧಾನ ಸೌಧದಲ್ಲಿ ಹುಟ್ಟಿದ ಹಬ್ಬವನ್ನು ಆಚರಣೆ ಮಾಡುತ್ತಾರೆ.  ಇವರಿಗೆ ಅಧಿಕಾರ ಕೊಟ್ಟವರು ಯಾರು ? ಎಂದು ಪ್ರಶ್ನಿಸಿದರು. ಈ ಬಗ್ಗೆ ಕೇಂದ್ರ ಸರ್ಕಾರ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಮಾಜ ಪರಿವರ್ತನಾ ಸಮಿತಿ ಮುಖಂಡ ಎಸ್. ಆರ್. ಹಿರೇಮಠ ಆಗ್ರಹಿಸಿದ್ದಾರೆ.






Share this Story:

Follow Webdunia kannada

ಮುಂದಿನ ಸುದ್ದಿ

ಸಾವಿನಲ್ಲೂ ಒಂದಾದ ತಾಯಿ ಮಗ