Webdunia - Bharat's app for daily news and videos

Install App

ಕಾಲಿಗೆ ಗುಂಡೇಟು ಬಿದ್ದರು ಚಾಳಿ ಬಿಡದ ಆಸಾಮಿ

Webdunia
ಗುರುವಾರ, 30 ಮಾರ್ಚ್ 2023 (18:38 IST)
ಆತ ನಟೋರಿಯಸ್ ಸರಗಳ್ಳ.80 ಕ್ಕೂ ಹೆಚ್ಚು ಪ್ರಕರದಲ್ಲಿ ಭಾಗಿಯಾಗಿದ್ದ.2018 ರಲ್ಲೇ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದ.ಆದ್ರೆ ಖಾಕಿ ಬುಲೆಟ್ ಈತನ ಕಾಲು ಸೀಳಿತ್ತು.ಇಷ್ಟಾದ್ರು ಆಸಾಮಿ ಚಾಳಿ ಬಿಟ್ಟಿರಲಿಲ್ಲ.ಮತ್ತೆ ಚೈನ್ ಸ್ನಾಚಿಂಗ್ ಮಾಡಿ ಕಂಬಿ ಹಿಂದೆ ಸೇರಿದ್ದಾನೆ.ಆಸಾಮಿ ಹೆಸರು ಅಚ್ಯುತ್ ಘನಿ ಈ ನಟೋರಿಯಸ್  ಅಂತಿಂಥವನಲ್ಲ..ಒಂದು ಕಾಲದಲ್ಲಿ ಈತನ ಅಟ್ಟಹಾಸಕ್ಕೆ ಬೆಂಗಳೂರು ಮಹಿಳೆಯರು ನಡುಗಿಹೋಗಿದ್ರು.ಕಪ್ಪು ಬಣ್ಣದ ಪಲ್ಸರ್ ನಲ್ಲಿ ಬರ್ತಿದ್ದ ಆರೋಪಿ ಮಹಿಳೆಯರ ಸರ ಕಸಿದು ಎಸ್ಕೇಪ್ ಆಗಿದ್ದ.ರಾಜ್ಯಾದ್ಯಂತ ಈತನ ಮೇಲೆ ೮೦ ಕ್ಕೂ ಹೆಚ್ಚು ಪ್ರಕರಣಗಳಿವೆ..2018 ರ ಜೂನ್ ನಲ್ಲಿ ಕೆಂಗೇರಿ ಪೊಲೀಸರು ಈತನ ಕಾಲಿಗೆ ಗುಂಡು ಹೊಡೆದು ಅರೆಸ್ಟ್ ಮಾಡಿದ್ರು.ಇಷ್ಟಾದ್ರು ಬುದ್ಧಿ ಕಲಿಯದ ಖದೀಮ..ಜೈಲಿಂದ ಬಂದು ಸರಗಳ್ಳತನಕ್ಕೆ ಇಳಿದಿದ್ದ.

2018 ರಲ್ಲಿ ಜೈಲು ಸೇರಿದ್ದ ಅಚ್ಯುತ್ ಕೆಲ  ತಿಂಗಳ‌ ಹಿಂದಷ್ಟೇ ರಿಲೀಸ್ ಆಗಿದ್ದ.ಹೀಗೆ ಬಂದಿದ್ದ ಕಿರಾತಕ ದಾವಣಗೆರೆ,ಗದಗ,ಬೆಂಗಳೂರಿನ ಸಿ ಕೆಅಚ್ಚುಕಟ್ಟು,ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿ ಸೇರಿದಂತೆ ಹಲವೆಡೆ ಸರಗಳ್ಳತನ ಮಾಡಿದ್ದ.ಆರೋಪಿ ಪತ್ತೆಗೆ ಬೆಂಗಳೂರಿನ ಹಲವು ಠಾಣೆ ಪೊಲೀಸರು ಬಲೆ ಬೀಸಿದ್ರು.ತಲೆ ಮರೆಸಿಕೊಂಡಿದ್ದ ಆಸಾಮಿಯನ್ನ ಶೇಶಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ..ಬಂಧಿತನಿಂದ 300 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.ಅದೇನೆ ಹೇಳಿ ಕಾಲಿಗೆ ಗುಂಡೇಟು ಬಿದ್ದ ಮೇಲೂ ಚಾಳಿ ಬಿಟ್ಟಿರಲಿಲ್ಲ..ತಾನಾಗಿಯೂ ಬುದ್ಧಿ ಕಲಿತರಲಿಲ್ಲ..ಕೊನೆಗೆ ಲಾಕ್ ಆಗಿ ಮತ್ತೆ ಜೈಲು ಸೇರಿದ್ದಾನೆ
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments