Webdunia - Bharat's app for daily news and videos

Install App

ಶುಗರ್ ಹೆಚ್ಚಿಸಿಕೊಳ್ಳಲು ಮಾವು, ಸಿಹಿ ತಿನಿಸು ಸೇವಿಸುತ್ತಿರುವ ಅರವಿಂದ್ ಕೇಜ್ರಿವಾಲ್: ಇಡಿ ಆರೋಪ

Sampriya
ಗುರುವಾರ, 18 ಏಪ್ರಿಲ್ 2024 (16:39 IST)
ನವದೆಹಲಿ: ವೈದ್ಯಕೀಯ ಜಾಮೀನು ಪಡೆಯುವ ಉದ್ದೇಶದಿಂದ ಜೈಲಿನಲ್ಲಿರುವ ಅರವಿಂದ್ ಕೇಜ್ರಿವಾಲ್‌ಗೆ ಪ್ರತಿದಿನ ಸಕ್ಕರೆ ಅಂಶವಿರುವ ಮಾವಿನಹಣ್ಣು, ಆಲೂ ಪೂರಿ ಹಾಗೂ ಸಿಹಿ ತಿಂಡಿಗಳನ್ನು ಸೇವಿಸುತ್ತಿದ್ದಾರೆ ಎಂದು ಇಡಿ ಆರೋಪ ಮಾಡಿದೆ.

ಅರವಿಂದ್ ಕೇಜ್ರಿವಾಲ್ ಅವರಿಗೆ ಸಕ್ಕರೆ ಖಾಯಿಲೆ ಇದ್ದರು ಅವರು ಉದ್ದೇಶಪೂರ್ವಕವಾಗಿ ಮಾವು, ಸಿಹಿ ತಿನಿಸುಗಳನ್ನು ಯಥೇಚ್ಚವಾಗಿ ಸೇವಿಸುತ್ತಿದ್ದಾರೆ. ಇಷ್ಟು ದಿನ ಸಕ್ಕರೆ ರಹಿತ ಚಹಾ ಸೇವಿಸುತ್ತಿದ್ದ ಕೇಜ್ರಿವಾಲ್ ಈಗ ಸಕ್ಕರೆ ಸಹಿತ ಚಹಾ ಕುಡಿಯುತ್ತಿದ್ದಾರೆ. ಇದರಿಂದ ತಮ್ಮ ದೇಹದಲ್ಲಿನ ರಕ್ತದ ಸಕ್ಕರೆ ಪ್ರಮಾಣವನ್ನು ಹೆಚ್ಚಿಸಿಕೊಂಡು ವೈದ್ಯಕೀಯ ಪರಿಸ್ಥಿತಿ ಆಧಾರದಲ್ಲಿ ಜಾಮೀನು ಪಡೆಯುವ ಉದ್ದೇಶ ಅವರದ್ದಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೆಹಲಿ ಕೋರ್ಟ್ ಗೆ ಗುರುವಾರ ಮಾಹಿತಿ ನೀಡಿದ್ದಾರೆ.

ಕೇಜ್ರಿವಾಲ್ ತಮ್ಮ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಲು ಮತ್ತು ವೀಡಿಯೊ ಕಾನ್ಫರೆನ್ಸ್ ಮೂಲಕ ತಮ್ಮ ನಿಯಮಿತ ವೈದ್ಯರೊಂದಿಗೆ ಸಮಾಲೋಚಿಸಲು ಕೇಜ್ರಿವಾಲ್ ಮಾಡಿದ ಮನವಿಗೆ ಪ್ರತಿಕ್ರಿಯೆಯಾಗಿ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರ ಮುಂದೆ ಇಡಿ ವಕೀಲ ಜೊಹೆಬ್ ಹೊಸೈನ್ ಅವರು ವಾದ ಮಂಡಿಸಿದ್ದಾರೆ.

ಇಡಿ ಹಾಗೂ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರ ಎದುರು ಇ.ಡಿ ವಾದ ಮಂಡಿಸಿದೆ.

ನಾಳೆಯೊಳಗೆ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನ್ಯಾಯಾಧೀಶರು ಸೂಚಿಸಿದ್ದು, ನ್ಯಾಯಾಲಯವು ಮತ್ತೆ ವಿಚಾರಣೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ದೆಹಲಿ ಸರ್ಕಾರದ ಅಬಕಾರಿ ನೀತಿ ಹಗರಣದಲ್ಲಿನ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಇಲ್ಲಿನ ನ್ಯಾಯಾಲಯವು ಏಪ್ರಿಲ್‌ 23ರ ವರೆಗೆ ವಿಸ್ತರಿಸಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತದ 52ನೇ ಸಿಜೆಐ ಆಗಿ ನೇಮಕಗೊಂಡ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಹಿನ್ನಲೆ ಇಲ್ಲಿದೆ

Prajwal Revanna: ವಕೀಲರನ್ನೂ ನೇಮಿಸಿಕೊಂಡಿಲ್ಲ: ಪ್ರಜ್ವಲ್ ರೇವಣ್ಣ ಪರಿಸ್ಥಿತಿ ಏನಾಗಿದೆ ನೋಡಿ

PM Modi: ಉಗ್ರರ ದಮನಕ್ಕೆ ಸೇನೆಗೆ ಸಂಪೂರ್ಣ ಪವರ್ ಕೊಟ್ಟ ಪ್ರಧಾನಿ ಮೋದಿ

K Annamalai: ಮೋದಿ, ಅಮಿತ್ ಶಾ ಹೆಸರಲ್ಲಿ ಅಮೆರಿಕದಲ್ಲಿ ಅಣ್ಣಾಮಲೈ ವಿಶೇಷ ಪೂಜೆ

ಉಗ್ರರ ಹಿಮ್ಮೆಟ್ಟಿಸಲು ಐಕ್ಯತೆ ಅವಶ್ಯಕ: ಮಾಜಿ ಪ್ರಧಾನಿ ದೇವೇಗೌಡ

ಮುಂದಿನ ಸುದ್ದಿ
Show comments