Select Your Language

Notifications

webdunia
webdunia
webdunia
webdunia

ಮಸೀದಿಯತ್ತ ಬಾಣ ಬಿಟ್ಟ ಸನ್ನೆ: ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ವಿರುದ್ಧ ಎಫ್‌ಐಆರ್‌

ಮಸೀದಿಯತ್ತ ಬಾಣ ಬಿಟ್ಟ ಸನ್ನೆ: ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ವಿರುದ್ಧ ಎಫ್‌ಐಆರ್‌

Sampriya

ಹೈದರಾಬಾದ್‌ , ಸೋಮವಾರ, 22 ಏಪ್ರಿಲ್ 2024 (14:18 IST)
Photo Courtesy X
ಹೈದರಾಬಾದ್‌: ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇರೆಗೆ ಹೈದರಾಬಾದ್‌ನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ  ಮಾಧವಿ ಲತಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಈಚೆಗೆ ರಾಮನವಮಿ ಆಚರಣೆ ವೇಳೆಗೆ ಮಾಧವಿ ಅವರು ಮಸೀದಿಯತ್ತ ಬಾಣ ಬಿಡುವಂತೆ ಸನ್ನೆ ಮಾಡಿದ್ದರು.  ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ವಿವಾದಕ್ಕೆ ಕಾರಣವಾಗಿತ್ತು. ಇವರ ಈ ನಡವಳಿಕೆ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈಚೆಗೆ ನಡೆದ ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ಮಾಧವಿ ಲತಾ ಅವರು ಮಸೀದಿಯತ್ತ ಬಾಣ ಬಿಡುತ್ತಿರುವಂತೆ ಸನ್ನೆ ಮಾಡಿದ್ದರು.

ಮಾಧವಿ ಲತಾ ವಿರುದ್ಧ ಐಪಿಸಿ ಸೆಕ್ಷನ್ 295-ಎ (ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಘಟನೆ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ, ಅದು ಅಪೂರ್ಣ ವಿಡಿಯೊ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಆ ವಿಡಿಯೊ ಕಾರಣದಿಂದ ಯಾರ ಭಾವನೆಗಾದರೂ ನೋವು ಉಂಟಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಎಲ್ಲರ ಭಾವನೆಗಳನ್ನು ಗೌರವಿಸುವವಳು ನಾನು ಎಂದು ಹೇಳಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಹೀಗೇ ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಮಹಿಳೆಯರೇ ಬಡಿಗೆ ತೆಗೆದುಕೊಂಡು ಬಾರಿಸ್ತಾರೆ: ವಿಜಯೇಂದ್ರ