Select Your Language

Notifications

webdunia
webdunia
webdunia
Saturday, 12 April 2025
webdunia

ಮಕ್ಕಳು ಆಟವಾಡುವ ಟೆಡ್ಡಿ ಬೇರ್ ನಲ್ಲಿ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಕ್ಯಾಬ್ ಡ್ರೈವರ್ ಅರೆಸ್ಟ್

ಬೆಂಗಳೂರು
ಬೆಂಗಳೂರು , ಬುಧವಾರ, 9 ಡಿಸೆಂಬರ್ 2020 (10:05 IST)
ಬೆಂಗಳೂರು :  ಕ್ಯಾಬ್ ಡ್ರೈವರ್ ಒಬ್ಬ ಡ್ರಗ್ಸ್ ಗಳನ್ನು ಮಕ್ಕಳು ಆಟವಾಡುವ ಟೆಡ್ಡಿ ಬೇರ್ ನಲ್ಲಿಟ್ಟು ಕಳ್ಳಸಾಗಾಣಿಕೆ ಮಾಡಿದ ಹಿನ್ನಲೆಯಲ್ಲಿ ಆತನನ್ನು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 28 ಲಕ್ಷ ರೂ ಬೆಲೆಯ ನಿಷಿದ್ಧ ವಸ್ತುಗಳನ್ನು ಆರೋಪಿಗಳು ಅಸ್ಸಾಂನಿಂದ ಬೆಂಗಳೂರಿಗೆ ಸಾಗಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಆರೋಪಿಗಳ ಚಲನವಲನವನ್ನು ಗಮನಿಸುತ್ತಿದ್ದರು. 
ಆ ವೇಳೆ ತನ್ನ ಕುಟುಂಬದವರೊಂದಿಗೆ ಅಸ್ಸಾಂಗೆ ಹೋದ ಆರೋಪಿ ಮಗುವಿನ ಕೊಡಿಸಿದ ಟೆಡ್ಡಿ ಬೇರ್ ನಲ್ಲಿ ಮಾದಕ ವಸ್ತುಗಳನ್ನು ಸಾಗಾಟ ಮಾಡಲು ಪ್ರಯತ್ನಿಸಿದ್ದಾನೆ. ಆ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅದರಲ್ಲಿ 22 ಲಕ್ಷ ರೂ ಮೌಲ್ಯದ 2,200 ಮಾತ್ರೆಗಳು ಮತ್ತು 6ಲಕ್ಷ ರೂ. ಮೌಲ್ಯದ 71 ಗ್ರಾಂ ಹೆರಾಯಿನ್ ಪುಡಿ ಇದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರುದ್ಧ ಇಂದು ರೈತರಿಂದ ಬಾರುಕೋಲು ಚಳುವಳಿ